ಬಿಗ್‌ಬಾಸ್ ಶಶಿ-ವರ್ತೂರು ಸಂತೋಷ್ ಭೇಟಿಯಾಗಿದ್ದೇಕೆ? ಹಳ್ಳಿಕಾರ್ ಒಡೆಯ ಕಾಲಿಗೆ ಚಪ್ಪಲಿ ಯಾಕೆ ಹಾಕಲ್ಲ?
ಬಿಗ್‌ಬಾಸ್ ಮನೆಯಿಂದ ಹೊರ ಬಂದ್ಮೇಲೆ ವರ್ತೂರು ಸಂತೋಷ್ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಾಗೇ ವಿರೋಧಿಸುವವರೂ ಇದ್ದಾರೆ. ಆಗಾಗ ವರ್ತೂರು ಸಂತೋಷ್ ಹಾಗೂ ಅವರನ್ನು ವಿರೋಧಿಸುವವರ ಮಧ್ಯೆ ವಾಕ್ ಸಮರ ನಡೆಯುತ್ತಲೇ ಇರುತ್ತೆ. ಈಗ ಫಾರ್ ಎ ಚೇಂಜ್ ಅನ್ನುವಂತೆ ವರ್ತೂರ್ ಸಂತೋಷ್ ಸಿನಿಮಾ ಬಗ್ಗೆ ಮಾತಾಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರ ನಾಲ್ಕನೇ ರನ್ನರ್‌ಅಪ್ ವರ್ತೂರು ಸಂತೋಷ್ ಹಾಗೂ ಬಿಗ್‌ಬಾಸ್ ಸೀಸನ್ 6ರ ವಿನ್ನರ್ ಶಶಿ ಮುಖಾಮುಖಿ ಭೇಟಿಯಾಗಿದ್ದಾರೆ. ಮಾಡರ್ನ್ ರೈತ ಅಂತಲೇ ಜನಪ್ರಿಯರಾಗಿರೋ ಶಶಿ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇತ್ತೀಚೆಗೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ರನ್ನು ಭೇಟಿ ಮಾಡಿದ್ದಾರೆ. ಇಬ್ಬರೂ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಶಶಿ ಹಾಗೂ ವರ್ತೂರು ಸಂತೋಷ್ ಇಬ್ಬರೂ ರೈತರೇ. ಒಬ್ಬರೂ ಬಿಗ್‌ಬಾಸ್ ಮನೆಗೆ ಹೋಗಿ ಬಂದವರೇ. ಒಬ್ಬರು ತಮ್ಮ ಸಿನಿಮಾ ಬಗ್ಗೆ ಮಾತಾಡಿದ್ರೆ, ಇನ್ನೊಬ್ಬರು ನಿಂದಿಸುವವರ ಬಗ್ಗೆ ಮಾತಾಡಿದ್ದಾರೆ. ಬಿಗ್ ಬಾಸ್‌ಗೆ ಹೋಗಿ ಬಂದಿರೋ ಇಬ್ಬರು ರೈತರ ನಡುವಿನ ಮಾತುಕಥೆ ಏನಿತ್ತು? ಇಂಟ್ರೆಸ್ಟಿಂಗ್ ಸಂಗತಿಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..
ಬಿಗ್‌ಬಾಸ್ ಕನ್ನಡ ಸೀಸನ್ 6ರ ವಿನ್ನರ್ ಶಶಿ ಮಾಡರ್ನ್ ರೈತ ಅಂತಲೇ ಜನಪ್ರಿಯರಾಗಿದ್ದಾರೆ. ಬಿಗ್‌ಬಾಸ್ ಗೆದ್ದು ಹೊರಬರುತ್ತಿದ್ದಂತೆ ಅವರಿಗೆ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತು. ಆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಸದ್ಯಕ್ಕೆ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿ ಈಗ ಪ್ರಚಾರ ಮಾಡುವುದಕ್ಕೆ ಹೊರಟಿದ್ದಾರೆ. ಇದರ ಭಾಗವಾಗಿ ವರ್ತೂರ್ ಸಂತೋಷ್ ಭೇಟಿ ಅವರಿಗೆ ಸಿನಿಮಾ ಕಥೆಯನ್ನೂ ಹೇಳಿದ್ದಾರೆ. ಜೊತೆಗೆ ಬಿಗ್‌ಬಾಸ್ ಗೆದ್ದಮೇಲೆ ಅವರಿಗೆ ಏನೆಲ್ಲ ಕಮೆಂಟ್ ಮಾಡಿದರು ಅನ್ನೋದನ್ನು ವರ್ತೂರು ಸಂತೋಷ್ ಜೊತೆ ಹಂಚಿಕೊಂಡಿದ್ದಾರೆ.
"ನಾನು ಬಿಗ್‌ಬಾಸ್ ಗೆದ್ದು ಬಂದ್ಮೇಲೆ ನನ್ನ ಮುಂದೆ ಬಂದ ಪ್ರಶ್ನೆಗಳು ಇವೇನೆ. ನೀನ್ಯಾವ ಸೀಮೆ ರೈತ.? ಇಂತಹ ಬಟ್ಟೆಗಳನ್ನು ಹಾಕುತ್ತೀಯಾ. ನೀನು ಇಂತಹ ಒಳ್ಳೊಳ್ಳೆ ಕಾರುಗಳಲ್ಲಿ ಓಡಾಡುತ್ತೀಯ. ನೀನು ಹೇಗೆ ರೈತ ಆಗುವುದಕ್ಕೆ ಸಾಧ್ಯ? ಅನ್ನೋರು. ನನಗೆ ಬೇಜಾರಾಗುವುದು ಏನಂದ್ರೆ? ನನಗೆ ಯಾರೂ ಗೊತ್ತಿಲ್ಲದವರು ಕಮೆಂಟ್ ಹಾಕಿದ್ರೆ ಬೇಜಾರಾಗಲ್ಲ. ನನ್ನ ಜೊತೆಗೆ ಇದ್ದವರು ನೀನು ಕೋಳಿ ಸಾಕುತ್ತಿದ್ದೆ. ನೀನು ಹೇಗೆ ರೈತನಾಗುತ್ತೀಯಾ ಅಂತಾರೆ?" ಬಿಗ್ ಬಾಸ್ ಶಶಿ ಅಂದಿನ ಅನುಭವವನ್ನು ವರ್ತೂರು ಸಂತೋಷ್ ಜೊತೆ ಹಂಚಿಕೊಂಡಿದ್ದಾರೆ.

ಶಶಿಯ ಈ ಅನುಭವಗಳಿಗೆ ವರ್ತೂರು ಸಂತೋಷ್ ಐದು ವರ್ಷಗಳ ಹಿಂದೆನೇ ತಿರುಗೇಟು ಕೊಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ. "ನಾನು ಐದು ವರ್ಷದ ಹಿಂದೆ ಇದಕ್ಕೆ ಕೌಂಟರ್ ಕೊಟ್ಟಿದ್ದೀನಿ. ರೈತ ಅಂದ್ರೆ ಹರಿದು ಹೋಗಿರೋ ಬಟ್ಟೆ ಹಾಕಿಕೊಳ್ಳಬೇಕು. ಪಂಚೆ ಕಟ್ಟಿಕೊಳ್ಳಬೇಕು ಅನ್ನೋದು ಏನೂ ಇಲ್ಲ. ಶೋಕಿನೂ ಮಾಡಬಹುದು. ಸೇವೆನೂ ಮಾಡಬಹುದು. ನಾನು ರೈತನಲ್ಲ ಅಂತಾರಲ್ಲ. ಅವರಿಗೆ ಬನ್ನಿ ಬೋ** ಮಕ್ಕಳ ನನ್ನ ಮನೆ ಹತ್ತಿರ ಅಂತಾನೂ ಹೇಳಿದ್ದೀನಿ. ಇವತ್ತು ರೈತನಲ್ಲದೆ ಇರೋರೆಲ್ಲ ಮಾಡೋ ಕೆಲಸಗಳಾ ಇವೆಲ್ಲ. ನಾನು ಹಸು ಕಟ್ಟುತ್ತೀನಿ. ಸಗಣಿ ನಾನೇ ಎತ್ತಬೇಕು ಅನ್ನೋದು ಏನೂ ಇಲ್ವಲ್ಲ." ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಇದೇ ವೇಳೆ ವರ್ತೂರು ಸಂತೋಷ್ ಚಪ್ಪಲಿ ಹಾಕದೆ ಯಾಕೆ ಓಡಾಡುವುದಿಲ್ಲ ಅನ್ನುವುದನ್ನು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. "ನಾನು ಚಪ್ಪಲಿ ಯಾಕೆ ಹಾಕಲ್ಲ ಅಂದ್ರೆ, ನನಗೆ ಭಗವಂತನ ಮೇಲೆ ನಂಬಿಕೆ, ಭಕ್ತಿ ಜಾಸ್ತಿ. ನಾನು ಕಾರ್ಯಕ್ರಮಗಳಿಗೆ ಹೋಗುವುದು ಜಾಸ್ತಿ. ನಾನು ಹೋಗಿ ಬರುವಷ್ಟರಲ್ಲಿ ಚಪ್ಪಲಿಗಳು ಇರೋದಿಲ್ಲ. ಇನ್ನೊಂದು ನಾನು ಬರೀಗಾಲಲ್ಲಿ ಒಡಾಡಿದ್ರೆ ಸ್ಪೀಡ್ ಆಗಿ ಓಡಾಡುತ್ತೇನೆ. ಈಗ ಮುಳ್ಳುಗಳು, ಹೊಲಸು ಇರುವ ಕಡೆಗೆ ಹೋದರೆ ಬೇಕು. ಇಲ್ಲಾ ಅಂದ್ರೆ ಬೇಡ. ಚಪ್ಪಲಿ ಹಾಕದೆ ಓಡಾಡೋದು ಮನುಷ್ಯನ ಆರೋಗ್ಯಕ್ಕೂ ಒಳ್ಳೆಯದು. " ಎಂದು ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್‌ಗೆ ಹೋಗಿ ಬಂದ್ಮೇಲೆ ಸಾವಿರಾರು ಫೋನ್ ಕರೆಗಳು ಬರುತ್ತಿವೆ. ಹಾಗೇ ಸಿನಿಮಾ ಆಫರ್‌ಗಳು ಬರುತ್ತಿವೆಯಂತೆ. "ನಂಬರ್ ನಾವು ಕೊಟ್ಟಿರುವುದಕ್ಕೆ ಅವರು ಮಾಡೋರು. ಒಂದು ದಿನಕ್ಕೆ ಏಳು ಸಾವಿರ, ಎಂಟು ಸಾವಿರ ಕಾಲ್ ಬರುತ್ತೆ. ಒಂದು ಆರೇಳು ಸಾವಿರ ವಾಟ್ಸಾಪ್ ಎಸೇಜ್ ಬರುತ್ತವೆ. ನಾನು ಚಾರ್ಜ್ ಹಾಕಿ ಇಟ್ಟು ಆನ್ ಮಾಡಿದಾಗ ಅದೇ ಆಫ್ ಆಗಿ ಹೋಗುತ್ತೆ. ನಂಬರ್ ಏನೂ ಚೇಂಜ್ ಮಾಡಿಲ್ಲ. ಅದೇ ಇದೆ. ಸಿನಿಮಾ ಎಲ್ಲಾ ಮಾಡಲ್ಲ. ನಾನು ಇರೋ ಹಾಗೆ ಸಿನಿಮಾ ಮಾಡ್ತೀನಿ ಅಂದರೆ, ನೋಡೋಣ." ಎಂದಿದ್ದಾರೆ.


Click it and Unblock the Notifications











