ರಜತ್ ರೀಲ್ಸ್‌ನಲ್ಲಿ ಸ್ಟೋಟ;"ಭಾಯ್ ಡ್ರೋನ್ ಪ್ರತಾಪ್‌ನ ಹೀಗೆ ಲಾಕ್ ಮಾಡಿದ್ರು ಜೋಪಾನ" ಎಂದ ನೆಟ್ಟಿಗರು!

ಬಿಗ್ ಬಾಸ್‌ ಕನ್ನಡದ ರಿಯಾಲಿಟಿ ಶೋನಲ್ಲಿ ರಜತ್ ಅಬ್ಬರ ಜೋರಾಗಿತ್ತು. ಎರಡು ಸೀಸನ್‌ಗಳಲ್ಲಿ ಕಿರುತೆರೆ ವೀಕ್ಷಕರನ್ನು ತಮ್ಮದೇ ಸ್ಟೈಲ್‌ನಲ್ಲಿ ರಂಜಿಸಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರ ಬರುತ್ತಿದ್ದಂತೆ ರೀಲ್ಸ್ ಮಾಡಿ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಒಮ್ಮೆ ಲಾಂಗ್ ಹಿಡಿದು ವಿನಯ್ ಜೊತೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಪರಪ್ಪನ ಅಗ್ರಹಾರ ಸೇರಬೇಕಾಗಿತ್ತು.

ಯಪ್ಪಾ ಸಾಕಪ್ಪ ಅಂತ ಹೊರ ಬರುತ್ತಿದ್ದಂತೆ ಮತ್ತೊಂದು ಇಂತಹದ್ದೇ ವಿವಾದಕ್ಕೆ ಸಿಕ್ಕಿಬಿದ್ದಿದ್ದರು. ಈಗ ಹೊಚ್ಚ ಹೊಚ ರೀಲ್ ಮಾಡಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ರಾಕಿ ಭಾಯ್ ಡೈಲಾಗ್ ಬಿಡುತ್ತಾ, ಮಾಡಿಫೈಡ್ ಮಾಡಿದ ಬೈಕ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಸ್ಟೋಟ ಆಗಿದೆ.

Bigg Boss Rajath another reel may lead to controversy

ರಜತ್‌ ಹೊಸ ರೀಲ್ ನೋಡಿ ನೆಟ್ಟಿಗರಲ್ಲಿ ಕೆಲವರು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಡಿಸೈನ್ ಡಿಸೈನ್ ಆಗಿ ಅವರದ್ದೇ ಸ್ಟೈಲ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಅಸಲಿಗೆ ರೀಲ್‌ನಲ್ಲಿ ಸ್ಟೋಟ ಮಾಡಿದ್ದು ವಿವಾದಕ್ಕೆ ಗುರಿಯಾಗಬಹುದೇ? ಮತ್ತೆ ರಜತ್ ಮೇಲೆ ಪೊಲೀಸರು ಕೇಸ್ ಹಾಕುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ರಜತ್ ಪೋಸ್ಟ್ ಮಾಡಿದ ವಿಡಿಯೋದಲ್ಲಿಯೇ ಇದೆ. ಅದೆಲ್ಲಕ್ಕಿಂತ ನೆಟ್ಟಿಗರು ಮಾಡಿರೋ ಕಾಮೆಂಟ್‌ಗಳು ಇನ್ನೂ ಮಜವಾಗಿದೆ.

ರಜತ್ ಹೊಸ ರೀಲ್ ಸಿನಿಮಾ ಸ್ಟೈಲ್‌ನಲ್ಲಿದೆ. ವಿಡಿಯೋ ಅಪ್‌ಲೋಡ್ ಮಾಡುವುದರ ಜೊತೆಗೆ "ಸುಮ್ನೆ ತಮಾಷೆಗೆ ಮಾಡಿರೋ ಶೂಟ್.. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪ ರಾಜಾ'ಸ್" ಎಂದು ಮೊದಲೇ ಮುನ್ನಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಈ ವಿಡಿಯೋವನ್ನು ನೋಡುತ್ತಿದ್ದಂತೆ ನೆಟ್ಟಿಗರು ಮಾತ್ರ ಟಿವಿ ನೋಡು ಗುರು. ನ್ಯೂಸ್ ಚಾನೆಲ್‌ನಲ್ಲಿ ನಿಮ್ದೇ ಸುದ್ದಿ ಬರ್ತಿರಬಹುದು ಎಂದು ಕಾಲೆಳೆದಿದ್ದಾರೆ. ರಜತ್ ಫಾಲೋವರ್ಸ್ ಏನಂದಿದ್ದಾರೆಂದು ನೋಡುವುದಾರೇ,

ನೆಟ್ಟಿಗರೊಬ್ಬರು "ಮತ್ತೆ ಜೈಲ್‌ಗೆ ಹೋಗೋಕೆ ಅಣ್ಣನ ತಯಾರಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಭಾಯ್ ಡ್ರೋನ್ ಪ್ರತಾಪ್‌ನ ಹೀಗೆ ಒಂದ್ ಸಾರಿ ಲಾಕ್ ಮಾಡಿದ್ದಾರೆ ಜೋಪಾನ" ಎಂದು ಡ್ರೋನ್ ಪ್ರತಾಪ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಮತ್ತೊಬ್ಬರಂತೂ ರಜತ್ ಉಪದೇಶವನ್ನೇ ಮಾಡಿದ್ದಾರೆ. "ರಜತ್ ಬೈ, ನೀನು ತಲೆ ಕೆಡಿಸ್ಕೊಬೇಡ ಗುರು. ಏನ್ ಏನೋ ಅನ್ಯಾಯ ಅಕ್ರಮ ಆಗ್ತಾ ಇದಾವೆ ದೇಶದಲ್ಲಿ. ಎಷ್ಟೋ ರೇ*ಪ್, ಗೋ ಹತ್ಯೆ ಇತಿಹಾಸ ಪುರಾಣಗಳು ತುಂಬಿಕೊಂಡಿರೋ ದೇವಸ್ಥಾನಗಳು ಮುಚ್ಚಿ ಹೋಗಿದಾವೆ. ಇಂತದ್ರ ಬಗ್ಗೆ ಗಮನ ಹರಿಸೋರು ಯಾರು ಇಲ್ಲಾ. ಏನೋ ಬೆಂಕಿ ಹಚ್ಚಿದ್ದು ಇಷ್ಟು ದೊಡ್ಡ ಮಟ್ಟಿಗೆ ನೋಡೋ ಜನ, ಹಿಂದೂಗಳನ್ನ ಬಾಂಗ್ಲಾದಲ್ಲಿ ಬೆಂಕಿ ಹಚ್ಚಿ ಸುಟ್ಟಾಗ ಧ್ವನಿ ಒಬ್ರದ್ದು ಇರ್ಲಿಲ್ಲ. ನೀನು ಮಾಡಿದ್ದೂ ತಪ್ಪು ಅನ್ನೋದೇ ಆದ್ರೆ, ದೇಶದಲ್ಲಿ ಅಷ್ಟೆಲ್ಲ ಅನ್ಯಾಯ ಆಗ್ತಾ ಇರೋದು ತಪ್ಪೇ. ಆದ್ರೂ ಅದರ ವಿರುದ್ಧ ಯಾಕೆ ಈ ಕಾನೂನು ಮಾತಾಡಲ್ಲ..? ನಿನ್ ಕಾಮೆಂಟ್ ನೋಡ್ತಿಯೋ ಇಲ್ಲೋ ಗೊತ್ತಿಲ್ಲ ಗುರು. ಆದ್ರೆ ತಲೆ ಕೆಡಿಸ್ಕೊಬೇಡಿ." ಅಂತ ಒಬ್ಬರು ರಜತ್‌ಗೆ ಉಪದೇಶ ಮಾಡಿದ್ದಾರೆ.

ಬಿಗ್ ಬಾಸ್ ರಜತ್ ಮಾಡಿರೋ ಹೊಸ ರೀಲ್ ವಿವಾದವನ್ನು ಹುಟ್ಟಾಕಬಹುದು ಅನ್ನೋದು ನೆಟ್ಟಿಗರ ವಾದ. ಇನ್ನು ಕೆಲವರು ಹಾಗೇನು ಆಗಲ್ಲ ಎಂದು ಧೈರ್ಯ ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಎರಡು ಬಾರಿ ಹೀಗೆ ವಿವಾದಕ್ಕೆ ಸಿಲುಕಿರುವ ರಜತ್ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬರೀ ರೀಲ್ ಅಪ್‌ಲೋಡ್ ಮಾಡಿದ್ದಷ್ಟೇ ಅಲ್ಲ. ಜೊತೆಗೆ ಡಿಸ್‌ಕ್ಲೈಮರ್ ಕೂಡ ಹಾಕಿದ್ದಾರೆ.

"ಈ ಕಂಟೆಂಟ್ ಅನ್ನು ಸ್ಟ್ರಿಕ್ಟ್ ಆಗಿ ಶೂಟಿಂಗ್ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಸೆಟ್‌ನಲ್ಲಿ ಇರುವ ಪರಿಕರಣಗಳನ್ನು ಇಲ್ಲಿ ಬಳಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿಯಂತ್ರಿತ ವಾತಾವರಣದಲ್ಲಿ ತರಬೇತಿ ಪಡೆದವರಿಂದ ಶೂಟ್ ಮಾಡಲಾಗಿದೆ. ಇದನ್ನು ರಿ-ಕ್ರಿಯೇಟ್ ಮಾಡಬೇಡಿ. ಬೆಂಕಿ ಅಂತಹ ಎಲಿಮೆಂಟ್ಸ್‌ಗಳು ಡೇಂಜರ್. ಈ ದೃಶ್ಯದಲ್ಲಿ ಹೆಲ್ಮೆಟ್ ಬಳಸಿಲ್ಲ. ಅದು ಸುರಕ್ಷಿತವಲ್ಲ. ರಸ್ತೆ ನಿಯಮಗಳನ್ನು ಪಾಲಿಸಿ. ಹೆಲ್ಮೆಟ್ ಧರಿಸಿ. ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ರೀತಿಯ ಧೂಮಪಾನವನ್ನು ಪ್ರೋತ್ಸಾಹಿಸುವುದಿಲ್ಲ" ಎಂದು ಹೇಳಿದ್ದಾರೆ. ಈ ಬಾರಿ ಜಾಣ ನಡೆ ಇಟ್ಟಿದ್ದಾರೆ.

English summary
Bigg Boss Rajath another reel may lead to controversy.
Read more about: bigg boss controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X