Saanya Iyer: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ 'ಗೌರಿ' ಆದಳೇ 'ಪುಟ್ಟಗೌರಿ'..? ಏನು ಹೇಳ್ತಿದೆ ಈ ಲುಕ್?
ಸ್ಟೈಲಿಶ್ ಫಿಲ್ಮ್ ಮೇಕರ್ ಇಂದ್ರಜಿತ್ ಲಂಕೇಶ್ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ತಮ್ಮ ಪುತ್ರ ಸಮರ್ಜಿತ್ ಲಂಕೇಶ್‌ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸಮರ್ಜಿತ್ ಲಂಕೇಶ್ ಫಸ್ಟ್ ಲುಕ್ ಅನ್ನು ಇಂದ್ರಜಿತ್ ರಿವೀಲ್ ಮಾಡಿದ್ದರು. ಈಗ ಸಿನಿಮಾವನ್ನು ಸೆಟ್ಟೇರಿಸುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.
ಇದೇ ಸಿನಿಮಾದಲ್ಲಿ ಸಮರ್ಜಿತ್ ಜೊತೆಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಮತ್ತೊಂದು ಪ್ರತಿಭೆ ಸಾನ್ಯಾ ಅಯ್ಯರ್. ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದ ಕಿರುತೆರೆ ನಟಿಯೀಗ ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಕಾಲಿಡುತ್ತಿದ್ದಾರೆ.

ಇವರಿಬ್ಬರೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಿನಿಮಾದ ಟೈಟಲ್ 'ಗೌರಿ'. ಟೈಟಲ್ ರಿವೀಲ್ ಆಗಿತ್ತಿದ್ದಂತೆ ಸಿನಿಮಾದ ಬಗ್ಗೆ ಇರುವ ಕುತೂಹಲ ದುಪ್ಪಟ್ಟಾಗಿದೆ. ಅಲ್ಲದೆ ಸಾನ್ಯಾ ಅಯ್ಯರ್ ಹಾಗೂ ಸಮರ್ಜಿತ್ ಜೋಡಿಯ ಲುಕ್ ಕೂಡ ಹೊರಬಿದ್ದಿದೆ.
ದೇಸಿ ಲುಕ್‌ನಲ್ಲಿ ಸಾನ್ಯಾ ಅಯ್ಯರ್
ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಮಗನ ಜೊತೆಗೆ ಸಾನ್ಯಾ ಅಯ್ಯರ್ ಅನ್ನು ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಡರ್ನ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದ ಸಾನ್ಯಾ 'ಗೌರಿ' ಸಿನಿಮಾದಲ್ಲಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೋಡಿ ಮುದ್ದಾಗಿ ಕಾಣುತ್ತಿದೆ. ಬಿಗ್ ಬಾಸ್ ಬಳಿಕ ಸಿನಿಮಾಗೆ ಎಂಟ್ರಿ ಕೊಡುವುದಕ್ಕೆ ಕಾಯುತ್ತಿದ್ದ ಸಾನ್ಯಾಗೆ ಬಿಗ್ ಪ್ರಾಜೆಕ್ಟ್ ಸಿಕ್ಕಿದೆ.

ಇನ್ನು ಇಂದ್ರಜಿತ್ ಲಂಕೇಶ್ ಇಂಟ್ರಡ್ಯೂಸ್ ಮಾಡುತ್ತಿರುವ ಇಬ್ಬರಿಗೂ ಒಳ್ಳೆ ವೇದಿಕೆಯಂತೂ ಸಿಗುತ್ತೆ. ಸಿನಿಮಾ ಆರಂಭದಿಂದ ಬಿಡುಗಡೆವರೆಗೂ ಇಬ್ಬರೂ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಸಿನಿಮಾ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ. 'ಗೌರಿ' ಸೆಟ್ಟೇರಿದ ಬಳಿಕ ಒಂದೊಂದು ವಿಷಯಗಳು ರಿವೀಲ್ ಆಗುವ ಸಾಧ್ಯತೆಯಿದೆ.
ಸತ್ಯ ಘಟನೆ ಆಧರಿಸಿದ ಚಿತ್ರ 'ಗೌರಿ'
ಇಂದ್ರಜಿತ್ ಲಂಕೇಶ್ ಸಿನಿಮಾ 'ಗೌರಿ' ಅಂತ ಟೈಟಲ್ ಇಟ್ಟಿದ್ದೇ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾ ಅನ್ನೋದನ್ನು ಇಂದ್ರಜಿತ್ ಲಂಕೇಶ್ ಸಿನಿಮಾ ಪೋಸ್ಟ್‌ನಲ್ಲಿಯೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೀಗಾಗಿ ಗೌರಿ ಲಂಕೇಶ್ ಹತ್ಯೆಯ ಹಿನ್ನೆಲೆಯನ್ನು ಇಟ್ಟುಕೊಂಡು ಇಂದ್ರಜಿತ್ ಲಂಕೇಶ್ ಏನಾದರೂ ಸಿನಿಮಾ ಮಾಡುತ್ತಿದ್ದಾರಾ? ಅನ್ನೋ ಪ್ರಶ್ನೆಯಂತೂ ಎದ್ದಿದೆ. ಅದಕ್ಕೆ ಸಿನಿಮಾ ಮುಹೂರ್ತದ ವೇಳೆ ಉತ್ತರ ಸಿಗುವ ಸಾಧ್ಯತೆಯಿದೆ.
ಸಾನ್ಯಾ ಗ್ಲಾಮರ್ ಲುಕ್ ಇರುತ್ತಾ?
ಇತ್ತೀಚೆಗೆ ಸಾನ್ಯಾ ಅಯ್ಯರ್ ಗ್ಲಾಮರಸ್ ಫೋಟೊ ಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅದು ಈ ಸಿನಿಮಾಗಾಗಿಯೇ ಇರಬಹುದು ಎಂದು ಸಿನಿಪ್ರಿಯರು ಗೆಸ್ ಮಾಡಿದ್ದರು. ಈಗ ಹೊರಬಿದ್ದಿರೋ ಲುಕ್ ಸಿಂಪಲ್ ಹುಡುಗಿ ರೋಲ್ ಇರಬಹುದು ಎನಿಸುತ್ತಿದೆ.
ಏನಿದ್ರೂ ಸಾನ್ಯಾ ಅಯ್ಯರ್ ಸ್ಯಾಂಡಲ್‌ವುಡ್ ಎಂಟ್ರಿಯಿಂದ 'ಪುಟ್ಟಗೌರಿ' ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಆದರೆ, ಇಲ್ಲಿ 'ಗೌರಿ' ಯಾರು? ಸಾನ್ಯಾ ರೋಲ್ ಹೇಗಿರುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇದೆ.


Click it and Unblock the Notifications











