"ಅಪ್ಪು ಸರ್ ಸಹಾಯ ತೆಗೆದುಕೊಂಡು ಬೆಳೆದವರು ಜಾಣ ಕಿವುಡರಾಗಿದ್ದಾರೆ"; ಪ್ರಥಮ್ ಗರಂ!

ಐಪಿಎಲ್‌ನಲ್ಲಿ ಆರ್‌ಸಿಬಿ ಸೋಲುತ್ತಿರುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ ಎಂದು ಕಿಡಿಗೇಡಿಯೊಬ್ಬ ಟ್ವೀಟ್ (ಎಕ್ಸ್) ಮಾಡಿದ್ದ. ಗಜಪಡೆ ಅನ್ನುವ ಖಾತೆಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ್ದ. ಬಳಿಕ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ತನ್ನ ಖಾತೆಯ ಹೆಸರು ಹಾಗೂ ಡಿಪಿಯನ್ನು ಬದಲಾಯಿದ್ದ. ಅದೇ ಟ್ವೀಟ್ (ಎಕ್ಸ್) ಬಗ್ಗೆ ಈಗ ಎಲ್ಲಾ ಕಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಟ್ಟ ಪದವನ್ನು ಬಳಸಿ ಪುನೀತ್ ರಾಜ್‌ಕುಮಾರ್ ಪತ್ನಿಯನ್ನು ನಿಂದನೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದರ್ಶನ್ ಅಭಿಮಾನಿ ಎಂದು ಹೇಳಲಾಗುತ್ತಿರುವ ವ್ಯಕ್ತಿ ವಿರುದ್ಧ ಅಪ್ಪು ಫ್ಯಾನ್ಸ್ ಕಿಡಿಕಾರಿದ್ದು, ದೂರನ್ನು ದಾಖಲಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಒಳ್ಳೆಯ ಹುಡುಗ ಪ್ರಥಮ್ ಟ್ವೀಟ್ (ಎಕ್ಸ್) ಮಾಡಿದ್ದಾರೆ.

Bigg Boss winner Pratham came in support of Ashwini Puneeth Rajkumar

ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ಅಭಿಮಾನಿಗಳು ಸೇರಿದಂತೆ ಬಹಳಷ್ಟು ಮಂದಿ ಬೆಂಬಲಕ್ಕೆ ನಿಂತಿದ್ದಾರೆ. ಇದೇ ವೇಳೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಆಕ್ರೋಶ ಹೊರಹಾಕಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಅಪ್ಪು ಸಹಾಯ ಪಡೆದವರು ಇಂದು ಸೈಲೆಂಟ್ ಆಗಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ. ಪ್ರಥಮ್ ತಮ್ಮ ಟ್ವೀಟ್‌ನಲ್ಲಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ?

ಒಳ್ಳೆಯ ಹುಡುಗ ಹೇಳಿದ್ದೇನು?

ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಚಾರದಲ್ಲೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವಾಗಿ ಇದೂವರೆಗೂ ಸೈಲೆಂಟ್‌ ಆಗಿರುವ ಕನ್ನಡ ಚಿತ್ರರಂಗದವರ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದು, ಅಪ್ಪು ಕುಟುಂಬದ ಸಹಾಯ ಪಡೆದವರಿಗೆ ನಾಚಿಕೆ ಆಗ್ಬೇಕು ಎಂದಿದ್ದಾರೆ.

"ಅಪ್ಪು ಸರ್ ಸಹಾಯ ತಗೊಂಡು ಬೆಳೆದ ಬಹಳಷ್ಟು ಪುಣ್ಯಾತ್ಮರು ಇವತ್ತು ಜಾಣಕಿವುಡರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂ ಕರೆಸಿ ತಮ್ಮ ಸಿನಿಮಾ ಪ್ರಚಾರ ಮಾಡಿದವರು, ಇವತ್ತು ಮೂಕರಾಗಿದ್ದರೆ. ನಾಚಿಕೆ ಆಗ್ಬೇಕು ನಿಮಗೆಲ್ಲ. ಆತ್ಮಾವಲೋಕನ ಮಾಡಿಕೊಳ್ಳೋ ಸಮಯವಿದು. ಅವರ ಬಗ್ಗೆ ಅಷ್ಟೇ ನಮ್ಮ ಮೌನ ಪ್ರತಿಭಟನೆ" ಅಂತ ತಮ್ಮ ಟ್ವೀಟ್‌ (ಎಕ್ಸ್) ಮಾಡಿ ಕಿಡಿಕಾರಿದ್ದಾರೆ.

ಅಪ್ಪು ಪತ್ನಿಗೆ ಪ್ರಥಮ್ ಬೆಂಬಲ

ಪ್ರಥಮ್ ಆಕ್ರೋಶಗೊಂಡು ಎರಡು ಟ್ವೀಟ್‌ಗಳನ್ನು ಮಾಡಿದ್ದರು. ಅದರಲ್ಲಿ ಮೊದಲನೇ ಟ್ವೀಟ್‌ನಲ್ಲಿ ಅಭಿಯಾನವನ್ನೇ ಆರಂಭಿಸಿದ್ದರು. "ಅದ್ಭುತ ವ್ಯಕ್ತಿತ್ವದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ನಮ್ಮ ಬೆಂಬಲ. ನೀವೇ ನಿಮ್ಮ ಶಕ್ತಿ. ಐಡೆಂಟಿಟಿ ಇಲ್ಲದವರು ನಿಮ್ಮ ವ್ಯಕ್ತಿತ್ವವನ್ನು ಅವಮಾನಿಸಿದರೆ ಯಾರನ್ನ ಕೇಳೋದು? ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತಾಡಿದ್ರೂ ಏನೂ ಮಾಡದ ಕಾನೂನು ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ. ಎಲ್ಲರೂ ಅಶ್ವಿನಿ ಮೇಡಂ ಫೋಟೋ ಹಾಕಿ ಬೆಂಬಲಿಸೋಣ. ವಿ ಸ್ಟ್ಯಾಂಡ್ ವಿಥ್ ಅಶ್ವಿನಿ ಮೇಡಂ" ಎಂದು ಪ್ರಥಮ್ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿರುದ್ಧ ಕೆಟ್ಟ ಪದ ಬಳಸಿ ಮಾಡಿದ ಟ್ವೀಟ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಜನರು ಅಪ್ಪು ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಅಪ್ಪು ಫ್ಯಾನ್ಸ್ ದೂರು ದಾಖಲಿಸಿದ್ದಾರೆ. ಈಗ ಕಿಡಿಗೇಡಿ ಪೊಲೀಸರ ಕೈಗೆ ಸಿಗುತ್ತಾನಾ? ಸದ್ಯಕ್ಕೆ ಯಕ್ಷ ಪ್ರಶ್ನೆ.

More from Filmibeat

English summary
Bigg Boss winner Pratham came in support of Ashwini Puneeth Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X