'ನಟ ಭಯಂಕರ'ನಾಗಿ ಥ್ರಿಲ್ ಕೊಡಲು ಸಜ್ಜಾದ ಒಳ್ಳೆ ಹುಡುಗ ಪ್ರಥಮ್
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟಿಸಿ ನಿರ್ದೇಶಿಸಿರುವ 'ನಟ ಭಯಂಕರ' ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಈ ಚಿತ್ರದ ಥ್ರಿಲ್ಲಿಂಗ್ ಟ್ರೈಲರ್ ಅನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಾರಾರ್, ಕಾಮಿಡಿ ಹಾಗೂ ಆಕ್ಷನ್ ಇವೆಲ್ಲವೂ 'ನಟ ಭಯಂಕರ' ಪ್ರಥಮ್ ನಿರ್ದೇಶನದ ಸಿನಿಮಾ ಕಥೆಯಲ್ಲಿರುವ ಎಲಿಮೆಂಟ್ಸ್. ಹೀಗಾಗಿ ಒಳ್ಳೆ ಹುಡುಗ ಪ್ರಥಮ್ ಸಿನಿಮಾದ ಟ್ರೈಲರ್ ನೋಡಲು ಅವರದ್ದೇ ಅಭಿಮಾನಿ ಬಳಗ ಕಾತರದಿಂದ ಕಾಯುತ್ತಿದೆ.
'ಬಿಗ್ ಬಾಸ್ ಕನ್ನಡ ಸೀಸನ್ 4' ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ದಿನದಿಂದಲೂ ನಟ ಪ್ರಥಮ್‌ಗೆ ಒಳ್ಳೆ ಹುಡುಗ ಪಟ್ಟ ಸಿಕ್ಕಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಕೆಲವು ಸಿನಿಮಾಗಳಲ್ಲಿಯೂ ಪ್ರಥಮ್ ನಟಿಸುತ್ತಿದ್ದಾರೆ. ಇದರಲ್ಲಿ 'ನಟ ಭಯಂಕರ' ಕೂಡ ಒಂದು. ಕೆಲವು ತಿಂಗಳುಗಳ ಹಿಂದೆ ಬೆಂಗಳೂರು ತೊರೆದು ಹುಟ್ಟಿದ ಊರಿನ ಕಡೆ ಪಯಣ ಬೆಳೆಸಿದ್ದರು. ಆದರೂ, ಪ್ರಥಮ್ ಕನ್ನಡ ಚಿತ್ರರಂಗದಿಂದ ದೂರ ಉಳಿದಿಲ್ಲ. ಪ್ರಥಮ್ ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.
ಸದ್ಯದ್ರಲ್ಲೇ 'ನಟ ಭಯಂಕರ' ಟ್ರೈಲರ್ ರಿಲೀಸ್
'ನಟ ಭಯಂಕರ' ಸಿನಿಮಾಗೆ ಉದಯ್ ಕೆ ಮೆಹ್ತಾ ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ ಪ್ರಥಮ್ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು ಜನವರಿ ಕೊನೆಯ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಸಿನಿಮಾ ಥ್ರಿಲ್ಲಿಂಗ್ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 'ನಟ ಭಯಂಕರ' ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಪ್ರದ್ಯೋತನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಒಂದು ಹಾಡನ್ನು ಹಾಡಿದ್ದಾರೆ. ಧ್ರುವ ಸರ್ಜಾ ಸಿನಿಮಾಗೆ ಧ್ವನಿ ನೀಡಿರುವುದು ವಿಶೇಷ. ಡಾ.ವಿ.ನಾಗೇಂದ್ರ ಪ್ರಸಾದ್, ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್ ಹಾಗೂ ಅರಸು ಅಂತಾರೆ ಹಾಡುಗಳನ್ನು ರಚಿಸಿದ್ದಾರೆ.

'ನಟ ಭಯಂಕರ ' ಸಿನಿಮಾವನ್ನು ಬಹುತೇಕ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜನವರಿ ಕೊನೆ ಅಥವಾ ಫೆಬ್ರವರಿ ಮೊದಲವಾರದಲ್ಲಿ ತೆರೆಗೆ ಬರಲಿದೆ. ಹೀಗಾಗಿ ಆದಷ್ಟು ಬೇಗ 'ನಟ ಭಯಂಕರ' ಸಿನಿಮಾದ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಡಲು ಪ್ರಥಮ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ನಟ ಭಯಂಕರನಿಗೆ ದೊಡ್ಡ ತಾರಾಬಳಗದ ಸಾಥ್
ಒಳ್ಳೆ ಹುಡುಗ ಪ್ರಥಮ್‌ಗೆ ಹಿರಿಯ ನಟ ಸಾಯಿಕುಮಾರ್ ಜೊತೆಯಾಗಿದ್ದಾರೆ. ಡಕೋಟ ಎಕ್ಸ್‌ಪ್ರೆಸ್ ಸಿನಿಮಾ ಬಳಿಕ ಓಂಪ್ರಕಾಶ್ ರಾವ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ನಿಹಾರಿಕಾ ಶೆಣೈ, ಸುಶ್ಮಿತ ಜೋಶಿ, ಶೋಭ್ ರಾಜ್, ಕುರಿ ಪ್ರತಾಪ್, ಚಂದನ ರಾಘವೇಂದ್ರ, ಶಂಕರ್ ಅಶ್ವತ್ಥ್, ಮೋಹನ್ ಜುನೇಜ, ರಮ, ಬಿರಾದಾರ್, ಎಂ.ಎಸ್ ಉಮೇಶ್ ಸೇರಿದಂತೆ ಮುಂತಾದವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.

ಒಳ್ಳೆ ಹುಡುಗನಿಗೆ ಕೃಷಿಯಲ್ಲೂ ಆಸಕ್ತಿ
ಬಿಗ್ ಬಾಸ್ ವಿನ್ನರ್ ಪ್ರಥಮ್‌ಗೆ ಸಿನಿಮಾದಂತೆಯೇ ಕೃಷಿಯಲ್ಲಿಯೂ ಆಸಕ್ತಿಯಿದೆ. ಹೀಗಾಗಿ ತನ್ನ ಹುಟ್ಟೂರಿನಲ್ಲಿ ಪ್ರಥಮ್ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಬೆಂಗಳೂರು ತೊರೆದಿದ್ದ, ಪ್ರಥಮ್ ಕೃಷಿಯಲ್ಲಿಯೂ ಸಾಧನೆ ಮಾಡಿದ್ದಾರೆ. ತಮ್ಮ ಜಮೀನಿನಲ್ಲಿ ಹುರಳಿ, ಜೋಳ ಬೆಳೆದಿದ್ದು ಉತ್ತಮ ಬೆಳೆ ಬಂದಿದೆ ಅಂತ ಸ್ವತ: ಪ್ರಥಮ್ ಹೇಳಿದ್ದರು. ಕೃಷಿಯ ಜೊತೆ ಜೊತೆಯೇ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸದ್ಯ ನಟ ಭಯಂಕರ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.


Click it and Unblock the Notifications











