Lok Sabha Election 2024:ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರ ಶಿವಣ್ಣ ಪ್ರಚಾರ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಡಬಲ್ ಬ್ಯುಸಿಯಾಗಿದ್ದಾರೆ. ಮಾಮೂಲಿ ಸಮಯದಲ್ಲೇ ಶಿವಣ್ಣ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಾರೆ. ಈಗ ಲೋಕ ಸಭೆ ಚುನಾವಣೆಯ ಕಾವು ಹೆಚ್ಚಾಗಿದೆ. ಈ ಬಾರಿ ಮತ್ತೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಶಿವಣ್ಣ ಫುಲ್ ಆಕ್ಟಿವ್ ಆಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಿವರಾಜ್‌ಕುಮಾರ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಹಾಗೂ ಮಧು ಬಂಗಾರ ಜೊತೆ ಕ್ಷೇತ್ರ ಪ್ರದಕ್ಷಣೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರನ್ನು ಭೇಟಿ ಮಾಡಿ ತಮ್ಮ ಪತ್ನಿಗೆ ಬೆಂಬಲವನ್ನು ಕೇಳುತ್ತಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ಶಿವಣ್ಣನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

BJP Obc Morcha complained to the Election Commission against actor Shivarajkumar

ಬಿಜೆಪಿ ಪಕ್ಷದ ಓಬಿಸಿ ಮೋರ್ಛಾ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ. ಈ ದೂರಿನಲ್ಲಿ ಶಿವಣ್ಣ ನಟಿಸಿರುವ ಜಾಹೀರಾತುಗಳನ್ನು ನಿಷೇಧ ಮಾಡುವಂತೆ ದೂರಿನಲ್ಲಿ ತಿಳಿಸಿರುವ ಬಗ್ಗೆ ವರದಿಗಳಾಗಿವೆ. ಇ-ಮೇಲ್ ದೂರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿತ್ತು. ಶಿವಣ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆಗಲೇ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರಂತೆ ಕೆಲವೇ ದಿನಗಳ ಹಿಂದಷ್ಟೇ ಗೀತಾ ಶಿವರಾಜ್‌ಕುಮಾರ್‌ಗೆ ಟಿಕೆಟ್ ಅನ್ನು ಘೋಷಣೆ ಮಾಡಲಾಗಿತ್ತು. ಅಂದಿನಿಂದ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವಮೊಗ್ಗ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ.

BJP Obc Morcha complained to the Election Commission against actor Shivarajkumar

ಚುನಾವಣಾ ಆಯೋಗ ಈಗಾಗಲೇ ಮತದಾನದ ದಿನಾಂಕವನ್ನು ಘೋಷಣೆ ಮಾಡಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಶಿವಣ್ಣ ಪತ್ನಿಯ ಪರ ಆಕ್ಟಿವ್ ಆಗಿ ಪ್ರಚಾರ ಮಾಡುತ್ತಿದ್ದು, ಹೀಗಾಗಿ ಅವರ ಜಾಹೀರಾತಿಗಳನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ದೂರನ್ನು ಸಲ್ಲಿಸಿದೆ. ಹೀಗಾಗಿ ಶಿವಣ್ಣ ನಟಿಸಿದ ಜಾಹೀರಾತುಗಳಿಗೆ ತಡೆ ಬೀಳುವ ಸಾಧ್ಯತೆಯಿದೆ.

ಶಿವಮೊಗ್ಗದಲ್ಲಿ ಶಿವರಾಜ್‌ಕುಮಾರ್ ಸ್ಟಾರ್ ಅಟ್ರ್ಯಾಕ್ಷನ್ ಆಗಿದ್ದಾರೆ. ಪತ್ನಿ ಪರ ಅವಕಾಶ ಸಿಕ್ಕಾಗಲೆಲ್ಲಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಶಿವಣ್ಣ ಈಗಾಗಲೇ ಹೇಳಿದ್ದಾರೆ. ಸಿನಿಮಾ ಹಾಗೂ ಪ್ರಚಾರ ಎರಡನ್ನೂ ಬ್ಯಾಲೆನ್ಸ್ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಸದ್ಯ ಪತ್ನಿ ಗೀತಾ ಪರ ಅಖಾಡಕ್ಕೆ ಇಳಿದಿರುವ ಶಿವಣ್ಣಗೆ ಚಿಕ್ಕದೊಂದು ಸಂಕಷ್ಟ ಎದುರಾಗಿದೆ.

2014ರಲ್ಲಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಎದುರು ಪರಾಭಾವಗೊಂಡಿದ್ದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್ ಹೀನಾಯವಾಗಿ ಸೋತಿದ್ದರು. ಆದ್ರೀಗ ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಬಾರಿ ಯಡಿಯೂರಪ್ಪ ಪುತ್ರ ರಾಘವೇಂದ್ರಗೆ ಭಾರೀ ಪೈಪೋಟಿ ನೀಡಬಹುದೆಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
BJP complained to the Election Commission against actor Shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X