"ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ"; ಬಾಡಿ ಶೇಮಿಂಗ್ ಬಗ್ಗೆ ರಚಿತಾ ಬೋಲ್ಡ್ ಟಾಕ್
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್‌ಗೆ 2026ರ ಆರಂಭದಲ್ಲೇ ಅದೃಷ್ಟ ಒಲಿದು ಬಂದಿದೆ. ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಎರಡೂ ಸಿನಿಮಾಗಳ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ರಚಿತಾ ರಾಮ್ ಇತ್ತೀಚೆಗೆ 'ಕಲ್ಟ್' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರಿ ಬಾಡಿ ಶೇಮಿಂಗ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಚಿತಾ ರಾಮ್‌ಗೂ ಬಾಡಿ ಶೇಮಿಂಗ್ ಅನುಭವಗಳು ಆಗಿವೆ. ಅದನ್ನು ಅವರು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.

ಬಾಡಿ ಶೇಮಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳ ಬಗ್ಗೆ ರಚಿತಾ ರಾಮ್ ಮಾತಾಡಿದ್ದು, ಯಾರೇ ಏನೇ ಅಂದರೂ ತಾವು ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಬಾಡಿ ಶೆಮಿಂಗ್‌ಗೆ ಒಳಾಗಾಗಿ ಜೀವ ಕಳೆದುಕೊಂಡವರನ್ನು ಮುಟ್ಟಾಳರು ಎಂದಿದ್ದಾರೆ. ಬಾಡಿ ಶೇಮಿಂಗ್ ಬಗ್ಗೆ ಆಡಿದ ರಚಿತಾ ರಾಮ್ ಅಭಿಪ್ರಾಯ ಹೀಗಿದೆ.
ಅವರವರ ದೇಹ ಅವರಿಗಷ್ಟೇ ಗೊತ್ತು
"ಇಲ್ಲಿರೋ ಎಲ್ಲಾ ಹೆಣ್ಣು ಮಕ್ಕಳ ಬಾಡಿ ಟೈಪ್ ಒಂದೊಂದು ತರ ಇರುತ್ತೆ. ಇಲ್ಲಿ ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ. ಅವರವರ ಬಾಡಿ ಟೈಪ್ ಅವರಿಗೆ ಮಾತ್ರ ಗೊತ್ತಿರುತ್ತೆ. ಎಲ್ಲರೂ ವರ್ಕ್ಔಟ್ ಮಾಡುತ್ತೇವೆ. ಎಲ್ಲರೂ ಡಯೆಟ್ ಮಾಡುತ್ತೇವೆ."
ಮುಟ್ಟಿನ ಬಗ್ಗೆ ರಚಿತಾ ಟಾಕ್
"ಇಷ್ಟು ಓಪನ್ ಆಗಿ ಮಾತಾಡುತ್ತಿದ್ದೇವೆ ಅಂದಾಗ, ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ. ಮುಟ್ಟು ಮುಗಿದ ಐದು ದಿನಗಳು ಆದ್ಮೇಲೆ ನಾವು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡು ಮಕ್ಕಳಿಗೂ ನಾವು ನಾನು ಹೀಗಿದ್ದೇನೆ ಎಂದು ಮೆಚ್ಚಿಸುವುದಕ್ಕೆ ಆಗುವುದಿಲ್ಲ. ನಮ್ಮ ಬಾಡಿ.. ನಮ್ಮ ಇಷ್ಟ.. ನಮ್ಮ ಲೈಫ್.. ಕಿವಿ ಕೊಟ್ಕೊಂಡು ಹೋಗುತ್ತಿದ್ದರೆ, ಅಳಬೇಕಾಗುತ್ತೆ." ಎಂದು ರಚಿತಾ ರಾಮ್ ಹೇಳಿದ್ದಾರೆ.

ನಮ್ಮ ದೇಹವನ್ನು ಪೂಜಿಸಬೇಕು
"ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರಿಗೋಸ್ಕರ ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ನಾನು ಹೇಗೆ ವರ್ಕ್‌ಔಟ್ ಮಾಡಬೇಕು. ಇನ್ನೊಂದು ಗೊತ್ತಾ ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ದಪ್ಪ ಆಗುತ್ತಾರೆ. ಅವರಿಗೆ ಎಂಟು ಗಂಟೆ ನಿದ್ದೆ ಮಾಡಲೇ ಬೇಕಾಗುತ್ತೆ. ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು. ಇಲ್ಲಾ ಅಂದರೆ, ನಾನು ದಪ್ಪಗೆ ಕಾಣುತ್ತೇನೆ." ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತ್ಮ*ಹತ್ಯೆ ಮಾಡಿಕೊಂಡವರು ಮುಟ್ಟಾಳರು
"ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡವರು ಮುಟ್ಟಾಳರು. ಅವರ ಬಗ್ಗೆ ಮಾತಾಡುವುದಕ್ಕೆ ಹೋಗುವುದಿಲ್ಲ. ಅದಕ್ಕೆ ಅವರು ಅರ್ಹರು ಅಲ್ಲ. ಒಂದು ಜೀವ.. ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ. ಏನಕ್ಕೆ.. ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ." ಎಂದು ರಚಿತಾ ರಾಮ್ ಹೇಳಿದ್ದಾರೆ.


Click it and Unblock the Notifications











