For Quick Alerts
  ALLOW NOTIFICATIONS  
  For Daily Alerts

  ಗಜರಾಮನಿಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ನಟ ಕಬೀರ್ ಸಿಂಗ್!

  |

  ಸ್ಯಾಂಡಲ್‌ವುಡ್‌ನ ಮ್ಯಾಸಿವ್ ಸ್ಟಾರ್ ರಾಜವರ್ಧನ್ ಹೊಸ ಸಿನಿಮಾ ಸೆಟ್ಟೇರಿರೋದು ಗೊತ್ತೇ ಇದೆ. ರಾಜವರ್ಧನ್ ನಾಯಕ ನಟನಾಗಿ ನಟಿಸುತ್ತಿರುವ ಮಾಸ್ ಆಕ್ಷನ್ ಸಿನಿಮಾ 'ಗಜರಾಮ' ಈಗಾಗಲೇ ಶೂಟಿಂಗ್ ಶುರುವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕೂಡ ಗಮನ ಸೆಳೆದಿತ್ತು. ಸದ್ಯ ಚಿತ್ರತಂಡ ಈಗ 'ಗಜರಾಮ' ಸಿನಿಮಾದ ಆಕ್ಷನ್ ಸೀನ್ ಶೂಟಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದೆ.

  ಸದ್ಯ ನಾಯಕ ರಾಜವರ್ಧನ್ ಜೊತೆ ಸೆಣೆ ಸಾಡುವುದಕ್ಕೆ ಬಾಲಿವುಡ್ ಖ್ಯಾತ ಖಳನಟ ಕಬೀರ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಚಿತ್ರತಂಡ ಹೈ ವೋಲ್ಟೇಜ್ ಆಕ್ಷನ್ ಸೀನ್ ಅನ್ನು ಶೂಟಿಂಗ್ ಮಾಡುತ್ತಿದೆ.

  ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಈ ಆಕ್ಷನ್ ಸೀನ್‌ ಅನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಆಕ್ಷನ್ ಸೀನ್‌ಗಳಲ್ಲಿ ಹೀರೊ ರಾಜವರ್ಧನ್ ಜೊತೆ ನಟ ಕಬೀರ್ ಸಿಂಗ್ ಫೈಟ್ ಶುರುವಾಗಿದೆ. ಕಳೆದ ಹತ್ತು ದಿನಗಳಿಂದ ಈ ಸಾಹಸ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ.

  'ಗಜರಾಮ'ನಿಗೆ ಟಕ್ಕರ್ ಕೊಟ್ಟ ಬಾಲಿವುಡ್ ನಟ

  'ಗಜರಾಮ'ನಿಗೆ ಟಕ್ಕರ್ ಕೊಟ್ಟ ಬಾಲಿವುಡ್ ನಟ

  ಬಾಲಿವುಡ್‌ ನಟ ಕಬೀರ್ ಸಿಂಗ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕಬೀರ್ ಸಿನಿಮಾ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಯಾವುದೇ ಭಾಷೆಯ ಸಿನಿಮಾದಲ್ಲಾದರೂ ಕಬೀರ್ ಸಿಂಗ್ ಪವರ್‌ ಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಹಿಂದಿ ವೆಬ್ ಸಿರೀಸ್ ನಲ್ಲೂ ನಟಿಸುತ್ತಿದ್ದಾರೆ. 'ಗಜರಾಮ' ಸಿನಿಮಾ ಮೇಲೆ ಕಬೀರ್ ಸಿಂಗ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಈ ಸಿನಿಮಾ ಶಿಷ್ಯ ದೀಪಕ್ ಎಂಟ್ರಿ

  ಈ ಸಿನಿಮಾ ಶಿಷ್ಯ ದೀಪಕ್ ಎಂಟ್ರಿ

  ಬಹಳ ದಿನಗಳ ಬಳಿಕ ನಟ ಶಿಷ್ಯ ದೀಪಕ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಆಕ್ಷನ್ ಸೀನ್‌ನಲ್ಲಿ ದೀಪಕ್ ಕೂಡ ಭಾಗಿಯಾಗಿದ್ದರು. ಪೊಲೀಸ್ ಪಾತ್ರದ ಜೊತೆ ಜೊತೆಗೆ ಸೆಕೆಂಡ್ ಲೀಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಸುನೀಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಗಜರಾಮ' ಮಾಸ್ ಸಿನಿಮಾ ಆಗಿರುವುದರಿಂದ ಕ್ಲೈ ಮ್ಯಾಕ್ಸ್ ಫೈಟಿಂಗ್ ಮಸ್ತ್ ಆಗಿದೆ ಎನ್ನುತ್ತಿದೆ ತಂಡ.

  'ಗಜರಾಮ' ಪಕ್ಕಾ ಕಮರ್ಷಿಯಲ್

  'ಗಜರಾಮ' ಪಕ್ಕಾ ಕಮರ್ಷಿಯಲ್

  ಹೈ ವೋಲ್ಟೇಜ್ ಸಾಹಸ ದೃಶ್ಯಗಳಲ್ಲಿ ರಾಜವರ್ಧನ್ ಭಾಗಿಯಾಗಿದ್ದಾರೆ. ಈಗಾಗಲೇ ಒಳ್ಳೆಯ ಕಥೆ ಹಾಗೂ ಪ್ರೊಡಕ್ಷನ್ ಹೌಸ್ ಸಿಕ್ಕಿದೆ ಅಂತ ರಾಜವರ್ಧನ್ ಹರ್ಷ ವ್ಯಕ್ತಪಡಿಸಿದ್ದರು. ಜೊತೆ ಇದು ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿರುವುದರಿಂದ ಬಿಗ್ ಬ್ರೇಕ್ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಗೆದ್ದರೆ, ರಾಜವರ್ಧನ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸ್ಟಾರ್ ನಟನಾಗಿ ಹೊರಹೊಮ್ಮಲಿದ್ದಾರೆ.

  ಮನೋಮೂರ್ತಿ ಸಂಗೀತ

  ಮನೋಮೂರ್ತಿ ಸಂಗೀತ

  'ಗಜರಾಮ' ಸಿನಿಮಾಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಬಹಳ ದಿನಗಳ ಬಳಿಕ ಮೆಲೋಡಿ ಮ್ಯೂಸಿಕ್ ಡೈರೆಕ್ಟರ್ ಮನೋಮೂರ್ತಿ ಮತ್ತೆ ಕನ್ನಡ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಹೀಗಾಗಿ ಹಾಡುಗಳ ಬಗ್ಗೆ ನಿರೀಕ್ಷೆಯಿದೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣವಿದೆ. ಧನಂಜಯ್ ನೃತ್ಯ ನಿರ್ದೇಶನ ಮಾಡಿದ್ರೆ ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

  English summary
  Bollywood Actor Kabir Singh Seen As Villain In Gajarama In Rajavardhan Movie, Know More.
  Wednesday, October 12, 2022, 20:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X