ಕನ್ನಡ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ಕುಟುಂಬದ ಹೀರೋ ಗ್ರ್ಯಾಂಡ್ ಎಂಟ್ರಿ; ಸಿಂಪಲ್ ಸುನಿ ಡೈರೆಕ್ಟರ್

ಸಿಂಪಲ್ ಸುನಿ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಾರಿ ಸೈನ್ಸ್ ಫಿಕ್ಷನ್ ಸಬ್ಜೆಕ್ಟ್‌ ಒಪ್ಪಿಕೊಂಡಿದ್ದು, ಭರದಿಂದ ಶೂಟಿಂಗ್ ನಡೆಯುತ್ತಿದೆ. ಅದುವೇ 'ಲಂಭೋದರ 2.0' ಈಗಾಗಲೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಈ ಮಧ್ಯೆ ಸಿಂಪಲ್ ಸುನಿ ಸಿನಿಮಾ ಪ್ರೇಮಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಬಾಲಿವುಡ್‌ನಿಂದ ಬಚ್ಚನ್ ಕುಟುಂಬದ ಹೀರೋನಾ ಕರ್ಕೊಂಡು ಬಂದಿದ್ದಾರೆ.

ಬಾಲಿವುಡ್‌ನ ಜನಪ್ರಿಯ ನಟ ಹಾಗೂ ಬಚ್ಚನ್ ಕುಟುಂಬದ ಹೀರೋ ಕುನಾಲ್ ಕಪೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 'ಲಂಭೋದರ 2.0' ಸಿಂಪಲ್ ಸುನಿ ನಿರ್ದೇಶನದ ಮಹತ್ವಾಕಾಂಕ್ಷೆಯ ಸಿನಿಮಾ. ಈ ಸೈನ್ಸ್ ಫಿಕ್ಷನ್-ಥ್ರಿಲ್ಲರ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಈ ತಂಡವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.

Bollywood actor Kunal Kapoor entered Kannada industry Lambodara 2 0 directed by Simple Suni

ಕುನಾಲ್ ಕಪೂರ್ ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಂಗ್ ದೇ ಬಸಂತಿ', 'ಡಾನ್ 2', 'ವೀರಂ', 'ಡಿಯರ್ ಜಿಂದಗಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಕುನಾಲ್ ಕಪೂರ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರಬಹುದು? ಸಿನಿಮಾ ಹೇಗಿರುತ್ತೆ? ಅನ್ನೋದು ಕುತೂಹಲ ಮೂಡಿದೆ.

ಅಂದ್ಹಾಗೆ ಕುನಾಲ್ ಕಪೂರ್ ಬಾಲಿವುಡ್‌ನ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಕುಟುಂಬದ ಅಳಿಯ ಇವರು. ಅಮಿತಾಭ್ ಬಚ್ಚನ್ ಅವರ ಸಹೋದರ ಅಜಿತಾಭ್ ಬಚ್ಚನ್ ಹಾಗೂ ಪತ್ನಿ ರಮೋಲಾ ಬಚ್ಚನ್ ಅವರ ಪುತ್ರಿ ನೈನಾ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ. ಕುನಾಲ್ ಕಪೂರ್ ಪತ್ನಿ ನೈನಾ ಬಚ್ಚನ್ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದು, ದಂಪತಿ ಅನ್ಯೋನ್ಯವಾಗಿದ್ದಾರೆ. ಪತ್ನಿ ಉದ್ಯಮದಲ್ಲಿ ಇದ್ದರೆ, ಕುನಾಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಲಂಭೋದರ 2.0' ಸಿನಿಮಾದಲ್ಲಿ ಅನಿಲ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿದ್ದರೆ, ಅವರ ಎದುರು ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಬಾಲಿವುಡ್‌ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸದ್ಯ ಶೂಟಿಂಗ್ ಸ್ಪಾಟ್‌ನಲ್ಲಿ ಸಿಂಪಲ್ ಸುನಿ ಬಾಲಿವುಡ್ ಕುನಾಲ್ ಕಪೂರ್‌ಗೆ ಆಕ್ಷನ್ ಕಟ್ ಹೇಳುತ್ತಿರುವ ಫೋಟೊಗಳು ವೈರಲ್ ಆಗಿವೆ.

Bollywood actor Kunal Kapoor entered Kannada industry Lambodara 2 0 directed by Simple Suni

'ಲಂಬೋದರ 2.0' ಇಂದಿನ ಸೋಶಿಯಲ್ ಮೀಡಿಯಾದ ಜಮಾನದಲ್ಲಿ ಬದುಕುತ್ತಿರುವ ಯುವ ಜನಾಂಗದ ಗೊಂದಲಭರಿತ ಜೀವನವನ್ನು ಅನ್ವೇಷಿಸುವ ಕಥೆಯನ್ನು ಹೊಂದಿದೆ. ಕೃತಕ ಬುದ್ಧಿಮತ್ತೆ ಅಂದರೆ AI ಆಳುವ ಜಗತ್ತಿನಲ್ಲಿ ಸಂತೋಷ, ಸಾಮಾಜಿಕ ಮಾನ್ಯತೆ, ಏಕಾಂತ, ಡಿಜಿಟಲ್ ಅಡಿಕ್ಷನ್ ಹಾಗೂ ನಿಯಂತ್ರಣದಂತಹ ಸಮಕಾಲೀನ ವಿಚಾರಗಳನ್ನು ಈ ಸಿನಿಮಾ ಒಳಗೊಂಡಿದೆ.

ಸದ್ಯ ಈ ಸಿನಿಮಾ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಸರಿ ಹೊಂದಬಹುದಾದ ಸ್ಟೋರಿ ಇದು. Gen Zಯನ್ನು ಗಮನದಲ್ಲಿ ಇಟ್ಕೊಂಡು ಸಿನಿಮಾವನ್ನು ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.

'ಲಂಬೋದರ 2.0' ಸಿನಿಮಾಗೆ ಸಂತೋಷ್ ರೈ ಪತಾಜೆ ಕ್ಯಾಮರಾ ವರ್ಕ್ ಮಾಡುತ್ತಿದ್ದು, ವೀರ ಸಮರ್ಥ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅನಿಲ್ ಶೆಟ್ಟಿ ಅವರ ಮಾತೃ ಸಂಸ್ಥೆ ಮಾಸ್ ಪ್ರೊಡಕ್ಷನ್ ನಿರ್ಮಾಣದಡಿಯಲ್ಲಿ 'ಲಂಬೋದರ 2.0' ನಿರ್ಮಾಣ ಆಗಿತ್ತಿದೆ. ತಂತ್ರಜ್ಞಾನ, ತತ್ವಶಾಸ್ತ್ರ, ಥ್ರಿಲ್ ಹಾಗೂ ಭಾವನಾತ್ಮಕ ನಾಟಕವನ್ನು ಒಳಗೊಂಡಿರುವ ಈ ಸಿನಿಮಾ ಹೊಸ ತಲೆಮಾರಿನ ಸಾಮಾಜಿಕ ಥ್ರಿಲ್ಲರ್ ಆಗಿ ರೂಪುಗೊಳ್ಳುತ್ತಿದೆ.

English summary
Bollywood actor Kunal Kapoor entered Kannada industry Lambodara 2.0 directed by Simple Suni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X