ರಾಜ್ ಬಿ ಶೆಟ್ಟಿ ನನ್ನ ಹೊಸ ಫೆವರೀಟ್ ಡೈರೆಕ್ಟರ್ ಎಂದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್

ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಜೋಡಿಯ 'ಗರುಡ ಗಮನ ವೃಷಭ ವಾಹನ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಜೀ 5ನಲ್ಲಿ ರಿಲೀಸ್ ಆಗಿತ್ತು. ಮೊದಲ 'ಗರುಡ ಗಮನ ವೃಷಭ ವಾಹನ' ಮೊದಲು ಮೂರು ದಿನಗಳಲ್ಲಿಯೇ ಬರೋಬ್ಬರಿ 8 ಕೋಟಿ ನಿಮಿಷಕ್ಕೂ ಅಧಿಕ ವೀಕ್ಷಣೆ ಪಡೆದಿತ್ತು. ಈ ಸಿನಿಮಾ ಬಿಡುಗಡೆಯಾದ ದಿನವೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹಾಡಿ ಹೊಗಳಿದ್ದರು.

ಇದೀಗ ಒಟಿಟಿಯಲ್ಲಿ ತೆರೆಕಂಡ ಬಳಿಕ ಮತ್ತೆ 'ಗರುಡ ಗಮನ ವೃಷಭ ವಾಹನ' ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚಿಕೊಂಡಿದ್ದಾರೆ. ಮತ್ತೆ ಸಿನಿಮಾ ನೋಡಿ ಗರುಡ ಗಮನ ಚಿತ್ರದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ. ಹಾಗಿದ್ದರೆ, ಅನುರಾಗ್ ಕಶ್ಯಪ್ ಆಡಿದ ಮಾತುಗಳ ಸಾರಾಂಶ ಹೀಗಿದೆ ನೋಡಿ.

ರಾಜ್ ಬಿಟ್ಟಿ ಶೆಟ್ಟಿ ನನ್ನ ಫೇವರಿಟ್ ಡೈರೆಕ್ಟರ್

'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರ ಥಿಯೇಟರ್‌ನಲ್ಲಿ ತೆರೆಕಂಡಾಗ ಸಿನಿಮಾವನ್ನು ಹೊಗಳಿ ಕೊಂಡಾಡಿದ್ದರು. ಇನ್ನೊಂದು ಕಡೆ ಒಟಿಟಿಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಒಟಿಟಿಯಲ್ಲಿ ಸಿನಿಮಾ ನೋಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, "ನಿರ್ದೇಶಕ ರಾಜ್ ಬಿ ಶೆಟ್ಟಿ ನನ್ನ ಫೇವರಿಟ್ ನಿರ್ದೇಶಕ ಎಂದು ಹೇಳಿದ್ದಾರೆ. 'ಅಂಗಮಲೆ ಡೈರೀಸ್', 'ಪರುತಿವೀರನ್', 'ಸುಬ್ರಮಣ್ಯಪುರಂ' ಶೈಲಿಯ ಸಿನಿಮಾ ನೋಡಿದಂತಾಯಿತು" ಎಂದು ಸಂತಸ ಹಂಚಿಕೊಂಡಿದ್ದಾರೆ.

Bollywood Director Anurag Kashyap Says Raj B Shetty Is My New Favourite Director
'ಗರುಡ ಗಮನ ವೃಷಭ ವಾಹನ' ನಿರ್ದೇಶಕ ಅನುರಾಗ್ ಕಶ್ಯಪ್‌ರನ್ನು ಇನ್ನಿಲ್ಲದಂತೆ ಕಾಡಿದೆ. ಹೀಗಾಗಿ ಪ್ರತಿಯೊಬ್ಬರು ಸಿನಿಮಾ ನೋಡಿ ಎಂದು ಹೇಳುತ್ತಿದ್ದಾರೆ. ಗ್ಯಾಂಗಸ್ಟರ್ ಕತೆ ಆಧರಿಸಿದ ಸಿನಿಮಾ ಆಗಿದ್ದು, ಸಿನಿಮಾ ರಿಲೀಸ್ ಆದಾಗಲೇ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾ ಬಗ್ಗೆ ಮೊದಲ ವಿಮರ್ಶೆ ಮಾಡಿದ್ದರು. ಈಗಲೂ ಕೂಡ 'ಗರುಡು ಗಮನ ವೃಷಭ ವಾಹನ' ಸಿನಿಮಾ ನೋಡಿವಂತೆ ಅನುರಾಗ್ ಕಶ್ಯಪ್ ಮನವಿ ಮಾಡಿದ್ದಾರೆ.
Bollywood Director Anurag Kashyap Says Raj B Shetty Is My New Favourite Director

ಹೊಸ ಜಮಾನದ ಗ್ಯಾಂಗ್‌ಸ್ಟರ್ ಸಿನಿಮಾ

'ಗರುಡ ಗಮನ ವೃಷಭ ವಾಹನ' ಸಿನಿಮಾ ಹೊಸ ಜಮಾನದ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಕನ್ನಡ ಭಾಷೆಯಲ್ಲಿ ಇಂತಹ ಹೊಸ ಜಮಾನದ ಸಿನಿಮಾ ಬಂದಿದ್ದು ನಾನು ನೋಡಿಯೇ ಇಲ್ಲ. ಈ ಸಿನಿಮಾ ಬಗ್ಗೆ ನಾನು ಹೆಚ್ಚು ಮಾತಾಡುವುದಿಲ್ಲ. ಯಾಕೆಂದರೆ, ಸಿನಿಮಾ ಸರ್ಪ್ರೈಸ್‌ ಅನ್ನು ಕಿಲ್ ಮಾಡಿದಂತೆ ಆಗುತ್ತದೆ. ನಾನು ಎಲ್ಲರೊಂದಿಗೂ ಈ ಸಿನಿಮಾವನ್ನು ನೋಡುವಂತೆ ಹೇಳಿದ್ದೆ. ಈ ಸಿನಿಮಾವನ್ನೊಮ್ಮೆ ನೋಡಿ. ಅದ್ಬುತ ಅನುಭವ ನೀಡುತ್ತೆ." ಎಂದು ಅನುರಾಗ್ ಕಶ್ಯಪ್ ತಿಳಿಸಿದ್ದಾರೆ.

ಅನುರಾಗ್ ಕಶ್ಯಪ್ ಅಷ್ಟೇ ಅಲ್ಲ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ನೋಡಿ ಥ್ರಿಲ್ ಆಗಿದ್ದರು. 2021 ರ ನವೆಂಬರ್ 19ರಂದು ಥಿಯೇಟರ್ ಲಗ್ಗೆ ಇಟ್ಟಿತ್ತು. ಥಿಯೇಟರ್‌ನಲ್ಲೂ 'ಗರುಡ ಗಮನ ವೃಷಭ ವಾಹನ' ಚಿಂದಿ ಉಡಾಯಿಸಿತ್ತು. ಈಗ ಜೀ5 ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಸೆಲೆಬ್ರೆಟಿಗಳೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Bollywood director Anurag Kashyap says Raj B Shetty is my New favourite director. He says Garuda Gamana Vrushbha Vahana is new age gangster movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X