"ಅಪರ್ಣಗೆ ಮಕ್ಕಳು ಇಲ್ಲದೆ ಇರುವ ಬೇಸರವಿತ್ತು"; ಬ್ರಹ್ಮಾಂಡ ಗುರೂಜಿ
ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ ಜನರ ಮನಗೆದ್ದಿದ್ದ ಅಪರ್ಣ ವಸ್ತಾರೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಪರ್ಣ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ, ಈ ವಿಷಯವನ್ನು ಕೆಲವೇ ಆಪ್ತರ ಮುಂದೆ ಹೇಳಿಕೊಂಡಿದ್ದು ಬಿಟ್ಟರೆ, ಆ ನೋವನ್ನು ತಮ್ಮೊಳಗೆ ಇಟ್ಟುಕೊಂಡಿದ್ದರು. ನಿನ್ನೆ (ಜುಲೈ 11) ಅಗಲಿದ ಅರ್ಪಣ ಬಗ್ಗೆ ಬ್ರಹ್ಮಾಂಡ ಗುರೂಜಿ ಭಾವುಕರಾಗಿ ಮಾತಾಡಿದ್ದಾರೆ.
ಅಪರ್ಣ ಹಾಗೂ ಪತಿ ನಾಗರಾಜ್ ವಸ್ತಾರೆ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದಾರೆ. ತಮ್ಮ 37ನೇ ವಯಸ್ಸಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ್ ವಸ್ತಾರೆ ಅವರನ್ನು ಅಪರ್ಣ ವಿವಾಹವಾಗಿದ್ದರು. ಅಲ್ಲಿಂದಲೂ ಈ ಜೋಡಿ ಅನ್ಯೋನ್ಯವಾಗಿ ಸಂಸಾರವನ್ನು ನಡೆಸುತ್ತಾ ಬಂದಿತ್ತು. ಆದ್ರೀಗ ಪತ್ನಿಯನ್ನು ಕಳೆದುಕೊಂಡು ನಾಗರಾಜ್ ವಸ್ತಾರೆ ಏಕಾಂಗಿಯಾಗಿದ್ದಾರೆ. ಈ ಸಮಯದಲ್ಲಿ ಬ್ರಹ್ಮಾಂಡ ಗುರೂಜಿ ಈ ವಿಷಯವನ್ನು ನೆನಪಿಸಿಕೊಂಡಿದ್ದಾರೆ.

ಬ್ರಹ್ಮಾಂಡ ಗುರೂಜಿ ಹಾಗೂ ಅಪರ್ಣ ಇಬ್ಬರೂ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದರು. ಎರಡು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದರು. ಹೀಗಾಗಿ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಈಗ ಅವರ ನಿಧನದ ಬಳಿಕ ಮಕ್ಕಳಿಲ್ಲ ಅನ್ನೋ ಕೊರಗು ಅವರಲ್ಲಿ ಇತ್ತು ಎಂದು ಬ್ರಹ್ಮಾಂಡ ಗುರೂಜಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್‌ನಲ್ಲಿ ಒಟ್ಟಿ ಎರಡು ವಾರ ಸ್ಪರ್ಧಿಗಳಾಗಿದ್ದರು. ಆ ಬಳಿಕ ಇತ್ತೀಚೆಗೆ ನಡೆದ ಸಿನಿಮಾ 90 ಅನ್ನುವ ಕಾರ್ಯಕ್ರಮದಲ್ಲಿಯೂ ಅಪರ್ಣ ಹಾಗೂ ಬ್ರಹ್ಮಾಂಡ ಗುರೂಜಿ ಇಬ್ಬರೂ ಭಾಗವಹಿಸಿದ್ದರು. ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ. "ತುಂಬಾ ದಿನಗಳು ಅಂತ ಕಳೆದಿದ್ದು ಬಿಗ್ ಬಾಸ್‌ನಲ್ಲಿ. ಎರಡು ವಾರಗಳು ಒಟ್ಟಿಗೆ ಇದ್ದಿದ್ದು. ಮೊನ್ನೆ ಸಿನಿಮಾ 90 ಅಂತ ಮಾಡಿದ್ವಿ. ಆ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿದ್ವಿ. ಆ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ." ಎಂದಿದ್ದಾರೆ.

ಹಾಗೇ ಅಪರ್ಣ ಆರೋಗ್ಯ ಹದಗೆಟ್ಟಿದ್ದಕ್ಕೆ ಶನಿ ಕಾಟವೇ ಕಾರಣ ಅಂತಲೂ ಹೇಳಿದ್ದಾರೆ. "ಆರೋಗ್ಯ ಹದಗೆಟ್ಟಿದರೆ ಶನಿಯಿಂದಲೇ ಕಾರಣ. ವೈಟ್ ಪ್ಯಾಚಸ್ ಬಂದರೂ ಶನಿಯಿಂದಲೇ ಬರುತ್ತೆ. ಶನಿಶ್ವೇರನ ಮುಖಾಂತರವಾಗಿ ಬರುವಂತಹದ್ದು ಕ್ಯಾನ್ಸರ್ ಅಂತ. ಕೆಲವರು ಹೊರ ಬರುತ್ತಾರೆ. ಕೆಲವರು ಹೊರ ಬರುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಗಂಡ ಹೆಂಡತಿಯ ಬಾಂಡಿಂಗ್ ಚೆನ್ನಾಗಿತ್ತು. ಇವಳು ಎಷ್ಟು ಮಾತಾಡುತ್ತಿದ್ದಳೋ, ಗಂಡ ಅಷ್ಟೇ ಕಡಿಮೆ ಮಾತಾಡುತ್ತಿದ್ದರು." ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಫಿಲ್ಮಿಬೀಟ್ ಜೊತೆ ಮಾತಾಡುವಾಗ ಅಪರ್ಣ ಅವರಿಗೆ ಮಕ್ಕಳು ಇಲ್ಲ ಅನ್ನುವ ಬೇಸರದಲ್ಲಿ ಇದ್ದರು. ಹೀಗಾಗಿ ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. "ಅವರಿಗೆ ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು. ಮಕ್ಕಳನ್ನು ಅವರು ಗಿಡಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ಯೋನ್ಯತೆಯಿತ್ತು. ಇವರು ಅವಳನ್ನು ಮಗುತರ ನೋಡಿಕೊಳ್ಳೋರು. ಅವಳು ಇವರನ್ನು ಮಗುತರ ನೋಡಿಕೊಳ್ಳುತ್ತಿದ್ದರು. ಪಾಪ ನಾಗರಾಜು ಏಕಾಂತ ಆಗಿಬಿಟ್ಟ ಅನ್ನೋ ಕೊರಗು ಇದೆ" ಎಂದಿದ್ದಾರೆ.
ಅಪರ್ಣಕ್ಕೆ ಕ್ಯಾನ್ಸರ್ ಇರುವ ಬಗ್ಗೆ ಬ್ರಹ್ಮಾಂಡ ಗುರೂಜಿ ಬಳಿ ಹೇಳಿಕೊಂಡಿದ್ದರಂತೆ. ಹಾಗೇ ಏನಾದರೂ ಸಮಸ್ಯೆಗಳು ಎದುರಾದಾಗ, ತಮಗೆ ಸಂಪರ್ಕ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. "ಅರುಣ್ ಸಾಗರ್, ನಾನು ಜೊತೆಯಲ್ಲಿ ಇದ್ದಾಗ ನನ್ನ ಬಳಿ ಹೇಳಿಕೊಂಡಿದ್ದರು. ಯಾವುದಾದರೂ ಸಮಸ್ಯೆ ಎದುರಾದಾಗ ಯಾವ ಕ್ಷೇತ್ರಕ್ಕೆ ಹೋಗಬೇಕು ಅಂತ ಕೇಳುತ್ತಿದ್ದರು. ಆ ಬಗ್ಗೆ ಹೇಳಿದಾಗ, ಅಲ್ಲಿಗೂ ಹೋಗಿ ಬರುತ್ತಿದ್ದರು. ಎರಡೂ ಮುಕ್ಕಾಲು ವರ್ಷದಿಂದ ಒದ್ದಾಡಿದ್ರು. ಆಗ ಇಂತಹ ಕ್ಷೇತ್ರಕ್ಕೆ ಹೋಗಿ ಬನ್ನಿ ಅಂತನೂ ಹೇಳಿದ್ದೆ. ಆದರೆ, ದೈವ ಇಚ್ಚೆ ಅಂತ ಇರುತ್ತಲ್ಲ." ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.


Click it and Unblock the Notifications











