'ಮಳೆ ಹುಡುಗ'ನ ಭರ್ಜರಿ ಲೈನ್‌ಅಪ್; ಗಣೇಶ್‌ಗೀಗ ಮತ್ತೆ ಗೋಲ್ಡನ್ ಟೈಮ್.. ಕೈಯಲ್ಲಿರೋ ಸಿನಿಮಾಗಳಿವೇನೆ!
ಕನ್ನಡ ಚಿತ್ರರಂಗದ 'ಗೋಲ್ಡನ್ ಸ್ಟಾರ್', 'ಮಳೆ ಹುಡುಗ' ಅಂತಲೇ ಜನಪ್ರಿಯರಾಗಿರುವ ಗಣೇಶ್ ತಮ್ಮ ವಿಶಿಷ್ಟ ಮ್ಯಾನರಿಸಂ, ಟೈಮಿಂಗ್‌ನಿಂದ ಹಾಗೂ ರೋಮ್ಯಾಂಟಿಕ್ ಡೈಲಾಗ್‌ಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕಳೆದ ಎರಡು ದಶಕಗಳಿಂದ ತಮ್ಮ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಸದ್ಯ ಅವರಿಗೆ 47ನೇ ವರ್ಷ ಗೋಲ್ಡನ್ ಟೈಮ್.
ಇಂದು (ಜುಲೈ 2) ಗೋಲ್ಡನ್ ಸ್ಟಾರ್ ಗಣೇಶ್ 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಗಣೇಶ್ ಹಾಗೂ ಅವರ ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅದೇ ಇನ್ನೊಂದು ಕಡೆ ಸ್ಯಾಂಡಲ್‌ವುಡ್ ಸಿನಿಮಾ ಮಂದಿ ಗಣೇಶ್ ಕಾಲ್‌ಶೀಟ್‌ಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಗಣೇಶ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಹುಟ್ಟುಹಬ್ಬ ಇನ್ನೊಂದಿಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗುವ ಸಾಧ್ಯತೆಯಿದೆ.

ಸದ್ಯ ಗಣೇಶ್ ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಬ್ಯುಸಿಯಾಗಿರುವ ನಟ ಎನ್ನಬಹುದು. ಸೆಂಚುರಿ ಸ್ಟಾರ್ ಶಿವಣ್ಣನಿಗೆ ಕಾಂಪಿಟೇಷನ್ ಕೊಡುತ್ತಿದ್ದಾರೆ. ಕಮರ್ಷಿಯಲ್ ಮಾಸ್ ಕಥೆಗಳಿಂದ ಹಿಡಿದು ಕ್ಲಾಸ್ ಫ್ಯಾಮಿಲಿ ಎಂಟರ್‌ಟೈನರ್‌ಗಳವರೆಗೆ ಗಣೇಶ್ ಸಿನಿಮಾಗಳು ಲೈನ್‌ಅಪ್ ಇದೆ. ಹಾಗಿದ್ದರೆ, ಆ ಸಿನಿಮಾಗಳು ಯಾವುವು? ಅವುಗಳ ವಿಶೇಷತೆ ಏನು ತಿಳಿಯುವುದಕ್ಕೆ ಮುಂದೆ ಓದಿ.
ಗಣೇಶ್ ಸಿನಿಮಾಗಳ ಕಂಪ್ಲೀಟ್ ಡಿಟೇಲ್ಸ್
ಬಹದ್ದೂರ್ ಚೇತನ್ ನಿರ್ದೇಶನದ ಸಿನಿಮಾ (Bahaddur Chetan Film): 'ಬಹದ್ದೂರ್', 'ಭರ್ಜರಿ' ಹಾಗೂ 'ಭರಾಟೆ' ಅಂತಹ ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಬಹದ್ದೂರು ಚೇತನ್. ಮಾಸ್ ಆ್ಯಕ್ಷನ್ ಸಿನಿಮಾಗಳ ನಿರ್ದೇಶಕ ಚೇತನ್ ಕುಮಾರ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಬರುತ್ತಿದೆ. ಗಣೇಶ್ ಕ್ಲಾಸ್ ಇಮೇಜ್‌ಗೆ ತಕ್ಕಂತೆ ಚೇತನ್ ಮಾಸ್ ಎಲಿಮೆಂಟ್ಸ್ ಸೇರಿಸಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕಿನ್ನೂ ಟೈಟಲ್ ಅನೌನ್ಸ್‌ಮೆಂಟ್ ಆಗಿಲ್ಲ. ಇದು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ಎಲ್ಲಾ ಸಾಧ್ಯತೆಗಳಿವೆ.
ಬೃಂದಾವಿಹಾರಿ (Brindavihari): 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಯಶಸ್ಸಿನ ಬಳಿಕ ಇದೇ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ 'ಬೃಂದಾವಿಹಾರಿ'. ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಅವರ ಕಾಂಬಿನೇಷನ್ ಮತ್ತೆ ಮೋಡಿ ಮಾಡುತ್ತಾ ಅನ್ನೋ ಕುತೂಹಲ ದುಪ್ಪಟ್ಟಾಗಿದೆ. ಗಣೇಶ್ ಮತ್ತೆ ರೋಮ್ಯಾಂಟಿಕ್ ಲವರ್ ಬಾಯ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಹಾಡುಗಳು ಇದೊಂದು ಅಪ್ಪಟ ಪ್ರೇಮಕಥೆ ಅನ್ನೋದನ್ನು ರಿವೀಲ್ ಮಾಡಿವೆ.
ಜಾಂಗೋ ಕೃಷ್ಣಮೂರ್ತಿ (Django Krishnamurthy): ಅರಸು ಅಂತಾರೆ ನಿರ್ದೇಶನದ ಸಿನಿಮಾ ಕೆಲವು ತಿಂಗಳ ಹಿಂದಷ್ಟೇ ಸೆಟ್ಟೇರಿತ್ತು. ಅರಸು ಅಂತಾರೆ ಹಾಗೂ ಗಣೇಶ್ ಜೋಡಿಯ ಈ ಸಿನಿಮಾಗೆ 'ಜಾಂಗೋ ಕೃಷ್ಣಮೂರ್ತಿ' ಎಂದು ಟೈಟಲ್ ಕೂಡ ಇಡಲಾಗಿತ್ತು. ಇದು ಗಣೇಶ್ ವೃತ್ತಿ ಬದುಕಿನಲ್ಲೇ ವಿಭಿನ್ನ ಸಿನಿಮಾ ಎನ್ನಲಾಗಿತ್ತು. ಸದ್ಯಕ್ಕೆ ಈ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಮತ್ತೆ ಆರಂಭ ಆಗಬಹುದು.

ಪಿನಾಕ (Pinaka): ಗಣೇಶ್ ಕರಿಯರ್‌ನ ಮತ್ತೊಂದು ವಿಭಿನ್ನ ಸಿನಿಮಾ 'ಪಿನಾಕ'. ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಗ್ರಾಫಿಕ್ಸ್ ಓರಿಯೆಂಟೆಡ್ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಗಣೇಶ್ ಅವರನ್ನು ಬೇರೆ ಅವತಾರದಲ್ಲಿ ನೋಡಬಹುದು.
ತಮ್ಮ ಸುಖಾಗಮನ ಬಯಸುವ (Thamma Sukhagamana Bhayasuva): ಅಪ್ಪಟ ಕನ್ನಡ ಶೀರ್ಷಿಕೆಯ ಈ ಸಿನಿಮಾವನ್ನು ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ ಅವರ ಸಿಗ್ನೇಚರ್ ಶೈಲಿಯ ಎಮೋಷನಲ್ ಡ್ರಾಮಾ ಇದ್ದಾಗಿದ್ದು, ಚಿತ್ರೀಕರಣದ ಹಂತದಲ್ಲಿ ಇದೆ.
'ಯುವರ್ಸ್ ಸಿನ್ಸಿಯರ್ಲಿ ರಾಮ್' (Your's Sincerely RAAM): ಗಣೇಶ್-ರಮೇಶ್ ಕಾಂಬಿನೇಷನ್ ಸಿನಿಮಾ 'ಯುವರ್ಸ್ ಸಿನ್ಸಿಯರ್ಲಿ ರಾಮ್'. ವಿಖ್ಯಾತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ ಕೆಲವು ತಿಂಗಳಿಂದ ಶೂಟಿಂಗ್ ಸ್ಥಗಿತಗೊಂಡಿದ್ದು, ಶೀಘ್ರದಲ್ಲಿಯೇ ಶುರುವಾಗುವ ಸಾಧ್ಯತೆಯಿದೆ.
ಬರ್ತ್‌ಡೇಗೆ ಹೊಸ ಸಿನಿಮಾ ಅನೌನ್ಸ್
ಇನ್‌ಸೈಡ್ ಟಾಕ್: ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾ ಈಗಾಗಲೇ 6 ಸಿನಿಮಾಗಳು ಅನೌನ್ಸ್ ಆಗಿವೆ. ಇದೆಲ್ಲದೆ ಇನ್ನೂ ಮೂರು ಸಿನಿಮಾಗಳು ಇಂದು (ಜುಲೈ 2) ಅನೌನ್ಸ್ ಆಗುವ ಸಾಧ್ಯತೆಯಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಟಾಕ್‌ನಲ್ಲಿರುವ ಸಿನಿಮಾಗಳ ಅನೌನ್ಸ್‌ಮೆಂಟ್ ಮಾಡಬಹುದೆಂಬ ನಿರೀಕ್ಷೆಯಿದೆ.


Click it and Unblock the Notifications
