»   » ಟ್ರೈಲರ್: ಗಂಡಸಿನ ನೋವಿನ 'ಧ್ವನಿ' ಕೇಳುವವರು ಯಾರು?

ಟ್ರೈಲರ್: ಗಂಡಸಿನ ನೋವಿನ 'ಧ್ವನಿ' ಕೇಳುವವರು ಯಾರು?

Posted By:
Subscribe to Filmibeat Kannada

'ಬಿಟಿವಿ' ವಾಹಿನಿಯ ನಿರೂಪಕ ಚಂದನ್ ಶರ್ಮಾ ಸದ್ಯದಲ್ಲೇ 'ಹೀರೋ' ಆಗಿ ಕನ್ನಡ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನಿಮಗೆಲ್ಲಾ ಹೇಳಿದ್ವಿ. ಜೊತೆಗೆ ಆ ಚಿತ್ರದ ಹೆಸರು 'ಧ್ವನಿ' ಎಂತಲೂ ಹೇಳಿದ್ವಿ. ಚಂದನ್ ಶರ್ಮಾ ನಟಿಸಲಿರುವ ಆ ಸಿನಿಮಾ ಹೇಗಿರುತ್ತಪ್ಪಾ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.[ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?]

ಹೌದು, ಕಿರುತೆರೆ ಇಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಚಂದನ್ ಶರ್ಮಾ ನಟಿಸಿರುವ ಮೊದಲ ಚಿತ್ರ 'ಧ್ವನಿ' ಯ ಅಫೀಶಿಯಲ್ ಟ್ರೈಲರ್ ಈಗ ಬಿಡುಗಡೆ ಆಗಿದೆ. ಚಿತ್ರದ ಅಫೀಶಿಯಲ್ ಟ್ರೈಲರ್ ಶುರುವಾಗುತ್ತಲೇ ಕೇಳಿಬರುವ 'ಈ ಜಗತ್ತಿನಲ್ಲಿ ಒಬ್ಬ ಗಂಡಸಿನ ನೋವನ್ನು ಕೇಳಿಸಿಕೊಳ್ಳುವವರು ಬಹಳ ಕಡಿಮೆ" ಎಂಬ ಸಾಲುಗಳು ಚಿತ್ರದ ಗಾಂಭೀರ್ಯತೆ ಬಗ್ಗೆ ಹೆಚ್ಚು ಕುತೂಹಲ ನೀಡಿದೆ.

BTV News Anchor Chandan Sharma debut 'Dhvani' movie Official Trailer

ತೀರಾ ಅಪರೂಪವೆನಿಸವ, ಸಾಧಾರಣವಲ್ಲದ, ಅದ್ಭುತ ಕಥಾಹಂದರ ಹೊಂದಿರುವ ಚಿತ್ರ 'ಧ್ವನಿ'. ಚಂದನ್ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಗೆ ಅವರೇ ಹಿನ್ನೆಲೆ ಧ್ವನಿ ಸಹ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಮೇಶ್‌ ಭಟ್, ವಿನಯ್ ಪ್ರಸಾದ್ ಅಭಿನಯಿಸಿದ್ದಾರೆ.['ಬಿಟಿವಿ' ನಿರೂಪಕ ಚಂದನ್ ಶರ್ಮಾ 'ಹೀರೋ' ಆಗಿರೋ ಸಿನಿಮಾ ಯಾವ್ದು?]

ಸೆಬಾಸ್ಟಿನ್ ಡೇವಿಡ್ ಚಿತ್ರಕಥೆ ಬರೆದು 'ಧ್ವನಿ' ನಿರ್ದೇಶನ ಮಾಡಿದ್ದು, ಲಯನ್ ಆರ್ ರಮೇಶ್ ಬಾಬು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ಸಂಯೋಜನೆ, ಆರ್ ಗಿರಿ ಛಾಯಾಗ್ರಹಣವಿದೆ. 'ಧ್ವನಿ' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
BTV News Anchor Chandan Sharma debut Movie 'Dhvani' Official Trailer released yesterday(March 10).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada