ದರ್ಶನ್ ಕಾರು ಅಪಘಾತದ ಬಗ್ಗೆ ಮಾತನಾಡಿದ ಬುಲೆಟ್ ಪ್ರಕಾಶ್
Recommended Video

ಅಪಘಾತದಿಂದ ಆಸ್ಪತ್ರೆ ಸೇರಿರುವ ನಟ ದರ್ಶನ್ ಅವರನ್ನು ಈಗಾಗಲೇ ಚಿತ್ರರಂಗದ ಅನೇಕರು ನೋಡಿಕೊಂಡು ಬಂದಿದ್ದಾರೆ. ಇದೀಗ ನಟ ಹಾಗೂ ದರ್ಶನ್ ಆಪ್ತ ಬುಲೆಟ್ ಪ್ರಕಾಶ್ ಸಹ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ.
ನಟ ಬುಲೆಟ್ ಪ್ರಕಾಶ್ ಕೂಡ ಅನಾರೋಗ್ಯ ಬಳಲುತ್ತಿದ್ದರು. ಇತ್ತೀಚಿಗೆ ತನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು. ಅಂದಹಾಗೆ, ಸೂಕ್ತ ಚಿಕಿತ್ಸೆ ಪಡೆದು ಅವರು ಗುಣಮುಖರಾಗಿದ್ದಾರಂತೆ.
ದರ್ಶನ್ ಅಪಘಾತದ ವಿಷಯ ತಿಳಿಯ ಬುಲೆಟ್ ಇಂದು ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ಬಂದಿದ್ದರು. ದರ್ಶನ್ ಜೊತೆಗೆ ಸುಮಾರು 20 ನಿಮಿಷ ಮಾತುಕತೆ ನಡೆಸಿದರು. ಆಸ್ಪತ್ರೆಯಿಂದ ಹೊರ ಬಂದ ಬಳಿಕ ದರ್ಶನ್ ಆರೋಗ್ಯದ ಸ್ಥಿತಿಯನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡರು. ಮುಂದೆ ಓದಿ...

ದರ್ಶನ್ ಈಗ ಚೆನ್ನಾಗಿದ್ದಾನೆ
''ದರ್ಶನ್ ಈಗ ಚೆನ್ನಾಗಿದ್ದಾನೆ. ಹೋಲಿಗೆ ಹಾಕಿದ್ದರಿಂದ ಕೈ ಸ್ವಲ್ಪ ನೋವಿದೆ ಎಂದು ಹೇಳಿದ್ದಾರೆ. ಒಂದು ದೊಡ್ಡ ಘಟನೆಯಾಗಿ ಏನೋ ಆಗುವ ಅಪಾಯದಲ್ಲಿ ದೇವರಿಂದ ಸಣ್ಣದಾಗಿ ತಪ್ಪಿಸಿಕೊಂಡಿದ್ದಾನೆ. ಕನ್ನಡಿಗರ ತಾಯಂದಿರ ಆಶೀರ್ವಾದ ನಮ್ಮ ಕಲಾವಿದರ ಮೇಲೆ ಇರಬೇಕು.'' - ಬುಲೆಟ್ ಪ್ರಕಾಶ್, ಹಾಸ್ಯ ನಟ.

ತುಂಬ ಜಾಗೃತವಾಗಿ ನೋಡಿಕೊಳ್ಳುತ್ತಿದ್ದಾರೆ
''ಅಭಿಮಾನಿಗಳಿಗೆ ನಮ್ಮ ದರ್ಶನ್ ಅಣ್ಣನನ್ನು ನೋಡಬೇಕು ಎಂಬ ಆಸೆ ಇರುತ್ತದೆ. ಆದರೆ, ಇದು ಆಸ್ಪತ್ರೆಯಾಗಿರುವ ಕಾರಣ ಅಭಿಮಾನಿಗಳ ಬಯಕೆ ಸಾಧ್ಯ ಆಗಲ್ಲ. ನಾವು ಕೂಡ ಜಾಸ್ತಿ ಹೊತ್ತು ಒಳಗೆ ಇರಲು ಆಗಲಿಲ್ಲ. ದರ್ಶನ್ ನನ್ನ ತುಂಬ ಜಾಗೃತವಾಗಿ ಆಸ್ಪತ್ರೆಯವರು ನೋಡಿಕೊಳ್ಳುತ್ತಿದ್ದಾರೆ.'' - ಬುಲೆಟ್ ಪ್ರಕಾಶ್, ಹಾಸ್ಯ ನಟ.

ಅವನ್ನು ಯಾವತ್ತಿದ್ದರೂ ಡಿ ಬಾಸೇ
''ಡಿ ಬಾಸ್ ಗೆ ಏನು ತೊಂದರೆ ಆಗಲ್ಲ. ಅವನ್ನು ಯಾವತ್ತಿದ್ದರೂ ಡಿ ಬಾಸೇ. ನಿನ್ನೆ ಶಿವಣ್ಣ ಕೂಡ ಆಸ್ಪತ್ರೆಗೆ ಬಂದಿದ್ದರು. ಶಿವಣ್ಣ ಎಂಬ ನವಾಬರು ದರ್ಶನ್ ಎಂಬ ಸುಲ್ತಾನ ರನ್ನು ನೋಡಿಕೊಂಡು ಹೋದರು. ಇದು ಚಿತ್ರರಂಗದ ಒಳ್ಳೆಯ ಬೆಳವಣಿಗೆ. ಯಾರು ಕೂಡ ಇಲ್ಲಿ ಜಗಳ ಆಡಿಲ್ಲ. ನವಾಬ, ಸುಲ್ತಾನ ಇಬ್ಬರು ಜೊತೆಯಾಗಿ ಇಂಡಸ್ಟ್ರಿಯನ್ನು ಆಳುತ್ತಾರೆ.'' - ಬುಲೆಟ್ ಪ್ರಕಾಶ್, ಹಾಸ್ಯ ನಟ.

ಎಲ್ಲವನ್ನು ಸರಿಪಡಿಸಿಕೊಂಡು ಜೊತೆಯಾಗಿ ಇರುತ್ತೇವೆ
''ನಾನು ಕೂಡ ವೈದ್ಯರಿಂದ ಇತ್ತೀಚಿಗೆ ಆಚೆ ಬಂದಿದ್ದೇನೆ. ಚಾಮುಂಡೇಶ್ವರಿ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಅವನು ಕೂಡ ತಾಯಿಯ ಆಶೀರ್ವಾದದಿಂದ ಚೆನ್ನಾಗಿರುತ್ತಾನೆ. ಇಷ್ಟು ದಿನ ನಾವು ಜೊತೆಯಾಗಿ ಇದ್ವಿ. ಇನ್ನು ಮುಂದೆ ಎಲ್ಲವನ್ನು ಸರಿಪಡಿಸಿಕೊಂಡು ಜೊತೆಯಾಗಿ ಇರುತ್ತೇವೆ. ಅವನನ್ನು ದೇವರು ಚೆನ್ನಾಗಿ ಇಟ್ಟಿರಲಿ.'' - ಬುಲೆಟ್ ಪ್ರಕಾಶ್, ಹಾಸ್ಯ ನಟ.

ದರ್ಶನ್ ಅಪಘಾತದ ಬಗ್ಗೆ ಅಂಬಿ ನೀಡಿದ ಪ್ರತಿಕ್ರಿಯೆ
ಈ ಬಗ್ಗೆ ನಟ ಅಂಬರೀಶ್ ಕೂಡ ಮಾತನಾಡಿದ್ದು, ''ದರ್ಶನ್ ಘಟನೆ ಒಂದು ಅಪಘಾತ ಅಷ್ಟೇ. ಈಗಿನ ಹುಡುಗರಿಗೆ ಹುಮ್ಮಸ್ಸು ಜಾಸ್ತಿ. ಇವತ್ತು ಬಂದಿರುವ ಕಾರ್ ಗಳನ್ನು ಬೆಳಗ್ಗೆ ಓಡಿಸಲು ಸಾಧ್ಯ ಇಲ್ಲ. ರಾತ್ರಿಯೇ ಓಡಿಸಬೇಕು. ಅಷ್ಟೊಂದು ಸ್ಪೀಡ್ ಇರುತ್ತವೆ. ಅಂತಹ ಕಾರ್ ಗಳನ್ನು ತೆಗೆದುಕೊಳ್ಳುವುದೇ ವೇಸ್ಟ್. ಅದರ ಬದಲು ಮೋಟರ್ ಸೈಕಲ್ ನಲ್ಲಿ ಹೋಗಬಹುದು.'' ಎಂದು ತಮ್ಮ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಹುಟ್ಟಿಕೊಂಡ ಹೊಸ ಅನುಮಾನ
ನಟ ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ಈಗ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ದರ್ಶನ್ ಕಾರಿನಲ್ಲಿ ನಾಲ್ಕು ಜನರಲ್ಲ, ಐದು ಜನರು ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ವರದಿ ಆರು ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿದೆ. ಇವುಗಳಲ್ಲಿ ಯಾವುದು ನಿಜ ಎಂಬುದು ತನಿಖೆಯ ಬಳಿಕ ತಿಳಿಯಲಿದೆ.


Click it and Unblock the Notifications











