Nayanthara-Toxic: 'ರಾಯ'ನ ಜೊತೆ ನಟಿಸಲು 'ಗಂಗಾ' ಒಪ್ಪಿದ್ದೇಗೆ? ನಯನತಾರಾ ಪಡೆದ ಸಂಭಾವನೆ ಎಷ್ಟು?
ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇಷ್ಟು ದಿನ ಬ್ಯುಸಿನೆಸ್ ಡೀಲ್‌ಗಳಲ್ಲಿ ಮುಳುಗಿ ಹೋಗಿದ್ದ ಯಶ್ ಟೀಮ್ ಈಗ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಎರಡೆರಡು ಟೀಸರ್‌ಗಳನ್ನು ಬಿಟ್ಟು ಸದ್ದು ಮಾಡಿರೋ 'ಟಾಕ್ಸಿಕ್' ಟೀಮ್ ರೊಮ್ಯಾಂಟಿಕ್ ಸಾಂಗ್ ಅನ್ನೂ ರಿಲೀಸ್ ಮಾಡಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಕಾಂಬಿನೇಷನ್ ಸಾಂಗ್ ಪ್ಯಾನ್ ಇಂಡಿಯಾದಲ್ಲಿ ಹೊಸ ಅಧ್ಯಾಯವನ್ನೇ ಬರೆಯಲಿದೆ.
'ಟಾಕ್ಸಿಕ್'ನಲ್ಲಿ ಒಬ್ಬಿಬ್ಬರು ನಾಯಕಿ ಅಲ್ಲ. ಐವರು ನಾಯಕಿಯರು ಇದ್ದಾರೆ. ಇಲ್ಲಿವರೆಗೂ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಬಿಟ್ಟರೆ, ಚಿಕ್ಕದೊಂದು ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಶಿ ಜೊತೆ ನಯನತಾರಾ ಕೂಡ ಇಬ್ಬರು. ಈ ಸಿನಿಮಾದ ಬಿಗ್ ಹೈಲೈಟ್ ಅಂದರೆ, ಅದು ನಯನತಾರಾ.

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಟಿಸಿದ ಸಿನಿಮಾ ಸೋತಿಲ್ಲ. ಬದಲಿಗೆ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ. ಹೀಗಾಗಿ ನಯನತಾರಾಗೆ ಸಿಕ್ಕಾಪಟ್ಟೆ ಬೇಡಿಕೆ. ಅಷ್ಟು ಸುಲಭಕ್ಕೆ ನಯನತಾರಾ ಸಿನಿಮಾವನ್ನು ಒಪ್ಪಿಕೊಳ್ಳುವುದಿಲ್ಲ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ? ಆ ಪಾತ್ರಕ್ಕೆ ಸಿಗುವ ಸಂಭಾವನೆ ಎಷ್ಟು? ಅನ್ನೋದನ್ನು ಲೆಕ್ಕ ಹಾಕುತ್ತಾರೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇರುವಾಗಲೇ 'ಟಾಕ್ಸಿಕ್'ಗೆ ನಯನತಾರಾ ಪಡೆದಿರೋ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿದ್ದ 'ಮನ ಶಂಕರ ವರಪ್ರಸಾದ' ಸಿನಿಮಾ ಬಾಕ್ಸಾಫೀಸ್ ಬ್ಲಕ್‌ಬಸ್ಟರ್ ಲಿಸ್ಟ್ ಸೇರಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಡುತ್ತಿರುವ ನಯನತಾರಾ ಲೇಡಿ ಸೂಪರ್‌ಸ್ಟಾರ್ ಅನ್ನೋದು ಸಾಬೀತು ಮಾಡಿದ್ದಾರೆ. ಈಗ ಯಶ್ ಸಿನಿಮಾದಲ್ಲೂ ನಟಿಸಿರುವುದರಲ್ಲಿ 'ಟಾಕ್ಸಿಕ್' ಪವರ್ ದುಪ್ಪಟ್ಟಾಗಿದೆ. ಮಾರ್ಚ್ 19ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾಗೆ ನಯನತಾರಾ ಪಡೆದಿರುವ ಸಂಭಾವನೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
'ಟಾಕ್ಸಿಕ್'ನಲ್ಲಿ 'ಗಂಗಾ' ಪಾತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್ ಮಾಡಿದ್ದ ಪೋಸ್ಟರ್‌ನಲ್ಲಿ ನಯನತಾರಾ ಮಾಡರ್ನ್ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಗನ್ ಹಿಡಿದು ನಿಂತಿರುವ ನಯನತಾರಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಇನ್ನು ನಯನತಾರಾ 'ಟಾಕ್ಸಿಕ್'ನಲ್ಲಿ ನಟಿಸುವುದಕ್ಕೆ ದುಬಾರಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರೆಂಬ ಸುದ್ದಿನೂ ಹರಿದಾಡುತ್ತಿದೆ.

ನಯನತಾರಾ 'ಟಾಕ್ಸಿಕ್' ಸಿನಿಮಾಗೆ ದೊಡ್ಡ ಸಂಭಾವನೆ ಪಡೆದಿದ್ದಾರೆ ಎಂದು ಚಿತ್ರರಂಗದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಈ ಸಿನಿಮಾಗಾಗಿ ನಯನತಾರಾ ಮೊದಲಿಗೆ ₹18 ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದರಂತೆ. ಬಳಿಕ ನಿರ್ಮಾಣ ಸಂಸ್ಥೆಗಳು ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಚೌಕಾಸಿ ಮಾಡಿದ ಬಳಿಕ ನಯನತಾರಾ ಅಂತಿಮವಾಗಿ ₹12 ಕೋಟಿ ಸಂಭಾವನೆ ಪಡೆಯಲು ಒಪ್ಪಿಕೊಂಡಿರು ಎಂಬ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರರಂಗ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.
'ಟಾಕ್ಸಿಕ್' ಸಿನಿಮಾಗೆ ರವಿ ಬಸ್ರೂರ್ , ವಿಶಾಲ್ ಮಿಶ್ರಾ ಸೇರಿದಂತೆ ಹಲವು ಮಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಶಾಲ್ ಮಿಶ್ರಾ ಕಂಪೋಸ್ ಮಾಡಿರುವ "ತಬಾಹಿ.." ಹಾಡು ಕಿಕ್ ಕೊಡುತ್ತಿದೆ. ಇನ್ನು 'ಟಾಕ್ಸಿಕ್' ಚಿತ್ರವು ಯುಗಾದಿ, ರಂಜಾನ್ ಹಬ್ಬಗಳ ಸಂಭ್ರಮದಲ್ಲಿ ಮಾರ್ಚ್ 19ರಂದು ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











