ರಾಕಿ ಭಾಯ್ ಇಷ್ಟ ಅಂದ ಒಂದು ತಿಂಗಳಲ್ಲೇ ಬಂತು ಹೊಸ ಸುದ್ದಿ; 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್

'ಕೆಜಿಎಫ್' ಬಳಿಕ ಕಾದೂ ಕಾದು ಸುಸ್ತಾದವರಿಗೆ ಕೊನೆಗೂ ರಾಕಿ ಭಾಯ್ ಸಿನಿಮಾ ಬಗ್ಗೆ ಕ್ಲಾರಿಟಿ ಸಿಕ್ಕಿದೆ. ಯಶ್ 19ನೇ ಸಿನಿಮಾ 'ಟಾಕ್ಸಿಕ್' ಅಂತ ಅನೌನ್ಸ್ ಆಗುತ್ತಿದ್ದಂತೆ ರಾಕಿಂಗ್ ಫ್ಯಾನ್ಸ್ ಥ್ರಿಲ್ ಆಗಿದ್ದರು. ಇನ್ನುಂದೆ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ 'ಟಾಕ್ಸಿಕ್' ಖದರ್ ಶುರು ಅನ್ನೋದು ನಿಶ್ಚಯವಾಗಿತ್ತು.

ಇದೇ ತಿಂಗಳು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವಿದೆ. ಅಂದು ತಮ್ಮ ಅಭಿಮಾನಿಗಳಿಗಾಗಿ ವಿಶೇಷವಾದ ಟೀಸರ್ ಒಂದನ್ನು ರಿಲೀಸ್ ಮಾಡಬಹುದು ಅನ್ನೋ ಟಾಕ್ ಇದೆ. ಈ ಬೆನ್ನಲ್ಲೇ ಮತ್ತೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. 'ಟಾಕ್ಸಿಕ್' ಸಿನಿಮಾಗೆ ಬಾಲಿವುಡ್ ನಟಿಯನ್ನು ಕರೆದುಕೊಂಡು ಬರುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.

Buzz is that bollywood actress Kareena Kapoor Khan to join Yash Toxic movie

'ಟಾಕ್ಸಿಕ್' ಸಿನಿಮಾ ಅನೌನ್ಸ್ ಆದಾಗ ಅವರ ಅಭಿಮಾನಿಗಳಲ್ಲಿ ನಾಯಕಿ ಯಾರು? ಅನ್ನೋ ಪ್ರಶ್ನೆ ಮೂಡಿತ್ತು. ಈಗ ರಾಕಿಂಗ್ ಸ್ಟಾರ್ ಸ್ಟಾರ್ ಸಿನಿಮಾದಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ. 'ಕೆಜಿಎಫ್ 2'ನಲ್ಲಿ ಬಾಲಿವುಡ್ ಸ್ಟಾರ್‌ಗಳು ನಟಿಸಿದಂತೆ 'ಟಾಕ್ಸಿಕ್'ನಲ್ಲೂ ಬಾಲಿವುಡ್ ನಟಿ ಎಂಟ್ರಿ ಕೊಡುವ ಬಗ್ಗೆ ಚರ್ಚೆ ಶುರುವಾಗಿದೆ.

ಯಶ್ 19ನೇ ಸಿನಿಮಾ 'ಟಾಕ್ಸಿಕ್' ಮೇಲೆ ಇಡೀ ಭಾರತೀಯ ಚಿತ್ರರಂಗ ಕಣ್ಣೀರುವುದು ನಿಜ. 'ಕೆಜಿಎಫ್' ಸೀರಿಸ್ ಬಳಿಕ ಯಶ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್ ಹೇಗಿರುತ್ತೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಎದ್ದಿದ್ದವು. ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ಟೀಮ್ ಸರ್ಪ್ರೈಸ್ ಕೊಡಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಅದಕ್ಕಿಂತ ಮುನ್ನ ಅಚ್ಚರಿಯ ವಿಷಯವೊಂದು ಓಡಾಡುತ್ತಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ 'ಟಾಕ್ಸಿಕ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ನಟಿಸಿದ ಎರಡೂ ಸಿನಿಮಾಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದವು. ಹೀಗಾಗಿ 'ಟಾಕ್ಸಿಕ್' ಸಿನಿಮಾ ಕೂಡ ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಗೆ ಮಾಡುತ್ತಿದ್ದಾರೆ ಅನ್ನೋ ಮಾತು ಸಿನಿಮಾ ವಲಯದಲ್ಲಿ ಓಡಾಡುತ್ತಿದೆ.

Buzz is that bollywood actress Kareena Kapoor Khan to join Yash Toxic movie

ಒಂದು ತಿಂಗಳ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ಸಂದರ್ಶನವೊಂದರಲ್ಲಿ ಯಶ್ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್ ಸೀಸನ್ 8' ಶೋನಲ್ಲಿ ಅತಿಥಿಯಾಗಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಬಂದಿದ್ದರು. ಈ ವೇಳೆ ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಯಶ್ ಹೆಸರನ್ನು ಎತ್ತಿದ್ದರು.

ಕರಣ್ ಜೋಹರ್ ಕೇಳಿದ್ದ ರಾಪಿಡ್ ಫೈಯರ್ ರೌಂಡ್‌ನಲ್ಲಿ ಪ್ರಭಾಸ್, ರಾಮ್‌ ಚರಣ್‌, ವಿಜಯ್‌ ದೇವರಕೊಂಡ, ಅಲ್ಲು ಅರ್ಜುನ್, ಯಶ್ ಇವರಲ್ಲಿ ಯಾರೊಂದಿಗೆ ನಟಿಸಲು ಬಯಸುತ್ತೀರ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಕರೀನಾ ಕಪೂರ್ ನೇರವಾಗಿ ಯಶ್ ಹೆಸರನ್ನು ಹೇಳಿದ್ದರು. "ನಾನು ಕೆಜಿಎಫ್‌ ಸಿನಿಮಾ ನೋಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಕೆಜಿಎಫ್‌ ಹುಡುಗಿ" ಎಂದು ಕರೀನಾ ಕಪೂರ್ ಹೇಳಿದ್ದರು. ಇದಾದ ಒಂದು ತಿಂಗಳ ಅಂತರದಲ್ಲಿ 'ಟಾಕ್ಸಿಕ್‌'ನಲ್ಲಿ ಕರೀನಾ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಈ ಹಿಂದೆ 'ಟಾಕ್ಸಿಕ್' ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಾರೆ ಅನ್ನೋ ಮಾತಿತ್ತು. ಆದ್ರೀಗ ಕರೀನಾ ಕಪೂರ್ ಹೆಸರು ಹೇಳಿಬರುತ್ತಿದ್ದು, ಕೆವಿಎನ್ ಸಂಸ್ಥೆಯಾಗಲಿ, ಯಶ್ ಆಗಲಿ, ಇಲ್ಲವೇ ಕರೀನಾ ಕಪೂರ್ ಆಗಲಿ ಈ ಬಗ್ಗೆ ಮಾಹಿತಿಯನ್ನು ನೀಡಿಲ್ಲ.

More from Filmibeat

English summary
Buzz: Kareena Kapoor may play lead in Yash Toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X