ಗಿಲ್ಲಿಯ 'ಪಳಾರ್'ಗೆ ಕಾವು ಎಂಟ್ರಿ? ಆದಷ್ಟು ಬೇಗ ಗುಟ್ಟು ಮಾಡುತ್ತಿರೋದ್ಯಾಕೆ?
ಕನ್ನಡ ಅತ್ಯಂತ ದುಬಾರಿ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ನಟ ಗಿಲ್ಲಿ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಚೊಚ್ಚಲ ಬಾರಿಗೆ ಸೋಲೋ ನಾಯಕನಾಗಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಸಿನಿಮಾ ಸೆಟ್ಟೇರಿದೆ. ಅಲ್ಲದೆ ಸಿನಿಮಾ ಟೈಟಲ್ 'ಪಳಾರ್' ಅಂತಾನೂ ರಿವೀಲ್ ಆಗಿದೆ. ಈಗ ಸಿನಿಮಾ ನಾಯಕಿ ಯಾರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.
'ಪಳಾರ್' ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್‌ನಂತಹ ಸಂಸ್ಥೆಯ ಬೆಂಬಲ ಸಿಕ್ಕಿದೆ. ಹೀಗಾಗಿ ಬಿಗ್ ಬಾಸ್ ಬಳಿಕ ಗಿಲ್ಲಿ ಸರಿಯಾಗಿಯೇ ಹೆಜ್ಜೆ ಇಡುತ್ತಿದ್ದಾರೆಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಸಿನಿಮಾ ಸೆಟ್ಟೇರಿದ್ದೇನೋ ಆಗಿದೆ. ಟೈಟಲ್ ಕೂಡ ಅನೌನ್ಸ್ ಆಗಿದೆ. ಇನ್ನೇನಿದ್ದರೂ ಗಿಲ್ಲಿಗೆ ನಾಯಕಿ ಯಾರು ಅನ್ನೋ ಪ್ರಶ್ನೆ? ಸಿನಿಮಾ ಅನೌನ್ಸ್ ಆದಲ್ಲಿಂದ ಶ್ರೀಲೀಲಾ ನಾಯಕಿ ಅನ್ನೋ ಸುದ್ದಿ ಹಬ್ಬಿತ್ತು. ಬಳಿಕ ಅದು ಕೇವಲ ಪ್ರಚಾರಕ್ಕಷ್ಟೇ ಬಳಕೆ ಆಗಿದ್ದು ಅನ್ನೋ ಕ್ಲಾರಿಟಿನೂ ಸಿಕ್ಕಿತ್ತು.

ಈ ಗ್ಯಾಪ್‌ನಲ್ಲಿಯೇ ಕಾವ್ಯ ಶೈವ ಹೆಸರು ಕೇಳಿ ಬಂದಿತ್ತು. ಆದರೂ ಯಾವುದೇ ಕ್ಲಾರಿಟಿ ಸಿಕ್ಕಿರಲಿಲ್ಲ. ಆದ್ರೀಗ ದಿಢೀರನೇ ಕಾವ್ಯ ಶೈವ ಅವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿಯೇ ಶೀಘ್ರದಲ್ಲಿಯೇ ನಾಯಕಿ ಅನಾವರಣ ಎಂಬ ಪೋಸ್ಟ್ ಹರಿದಾಡುತ್ತಿದೆ. ಅಲ್ಲಿಂದ ಗಿಲ್ಲಿ ನಟನಿಗೆ ಕಾವ್ಯ ಶೈವ ಅವರೇ ನಾಯಕಿ ಎಂಬ ಹರಿದಾಡುವುದಕ್ಕೆ ಶುರುವಾಗಿತ್ತು. ಆದರೆ, ಅಲ್ಲೊಂದು ಟ್ವಿಸ್ಟ್ ಇತ್ತು.
'ಪಳಾರ್' ಚಿತ್ರಕ್ಕೆ ಕಾವ್ಯ ಶೈವ ನಾಯಕಿನಾ?
ಕಾವ್ಯ ಶೈವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪಳಾರ್‌ಗೆ ನಾಯಕಿಯನ್ನು ಅತೀ ಶೀಘ್ರದಲ್ಲಿಯೇ ಅನಾವರಣ ಆಗಲಿದೆ ಎಂಬ ಪೋಸ್ಟ್ ಹರಿದಾಡಿತ್ತು. ಅಲ್ಲಿಂದ ಗಿಲ್ಲಿ ಸಿನಿಮಾಗೆ ಕಾವ್ಯ ಶೈವ ಅವರೇ ನಾಯಕಿ ಎಂಬ ಸುದ್ದಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವುದಕ್ಕೆ ಶುರುವಾಗಿತ್ತು. ಆದರೆ, ಅಸಲಿ ವಿಷ್ಯ ಇರೋದೇ ಇಲ್ಲಿ. ಅದು ಕಾವ್ಯ ಶೈವ ಅವರ ಒರಿಜಿನಲ್ ಅಕೌಂಟ್ ಅಲ್ಲ. ಹೀಗಾಗಿ ಗಿಲ್ಲಿ ಸಿನಿಮಾ ಅವರೇ ನಾಯಕಿನಾ? ಅನ್ನೋದು ಅಧಿಕೃತವಾಗಿ ಹೊರಬಿದ್ದಿಲ್ಲ.
ಅಭಿಮಾನಿಗಳ ಆಸೆ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಇಬ್ಬರ ಜೋಡಿ ವೀಕ್ಷಕರನ್ನು ಮೋಡಿ ಮಾಡಿತ್ತು. ಮೂರು ತಿಂಗಳ ಕಾಲ ಮನರಂಜನೆ ನೀಡಿತ್ತು. ಇವರಿಬ್ಬರ ಕೆಮಿಸ್ಟ್ರಿ ಕಿರುತೆರೆ ವೀಕ್ಷಕರನ್ನು ಸಿಕ್ಕಾಪಟ್ಟೆ ರಂಜಿಸಿತ್ತು. ಹೀಗಾಗಿ ಈಗ ಗಿಲ್ಲಿ ನಾಯಕನಾಗಿ ನಟಿಸುತ್ತಿರುವ 'ಪಳಾರ್' ಸಿನಿಮಾ ಕಾವ್ಯ ಅವರೇ ನಾಯಕಿ ಆಗಲಿ ಅನ್ನೋದು ಅವರ ಅಭಿಮಾನಿಗಳ ಆಸೆ. ಅದನ್ನು ಹೀಗೆ ಸೋಶೀಯಲ್ ಮೀಡಿಯಾ ಮೂಲಕ ವ್ಯಕ್ತ ಪಡಿಸುತ್ತಿದ್ದಾರೆ.
'ಪಳಾರ್' ಟೀಮ್ ಏನಂತಿದೆ?
'ಪಳಾರ್' ಸೆಟ್ಟೇರಿದ ಸಂದರ್ಭದಲ್ಲಿ ಗಿಲ್ಲಿಗೆ ನಾಯಕಿ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಕಾವ್ಯ ಶೈವ ಅವರೇ ಹೀರೋಯಿನ್ ಆಗಬಹುದಾ? ಎಂದು ಕೇಳಿದ್ದರು. ಆದರೆ, ಗಿಲ್ಲಿ ನಾಚಿಕೊಂಡರೇ ವಿನ: ಪ್ರಶ್ನೆ ಉತ್ತರ ಕೊಟ್ಟಿರಲಿಲ್ಲ. ಇನ್ನೂ ಸಿನಿಮಾದ ನಿರ್ದೇಶಕ ಚಂದ್ರ ಮೋಹನ್ ಆಗಲಿ, ಚಿತ್ರದ ನಿರ್ಮಾಪಕರಾಗಲಿ ನಾಯಕಿ ಬಗ್ಗೆ ಇನ್ನೂ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಸದ್ಯಕ್ಕೆ ಗಿಲ್ಲಿಗೆ ನಾಯಕಿ ಯಾರು ಅನ್ನೋದು ಸಸ್ಪೆನ್ಸ್.
ಅಭಿಮಾನಿಗಳಿಗೆ ಕುತೂಹಲ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಗಿದ ಬಳಿಕವೂ ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರ ಸ್ನೇಹ ಹಾಗೇ ಮುಂದುವರಿದಿದೆ. ಆದರೆ, ಅಭಿಮಾನಿಗಳಿಗೆ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಹಂಬಲವಿದೆ. ಇನ್ನು ಕೆಲವರು ಇಬ್ಬರೂ ಮದುವೆ ಆಗಬೇಕು ಅನ್ನೋ ಆಸೆಯಿದೆ. ರಿಯಾಲಿಟಿ ಶೋನಲ್ಲಿ ಹೈಪ್ ಕ್ರಿಯೇಟ್ ಮಾಡಿರೋ ಈ ಜೋಡಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರೆ ಹೇಗಿರುತ್ತೆ? ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ.


Click it and Unblock the Notifications