ಬಿಗ್ ಬಾಸ್ ಹಿಂದಿಗೆ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಗ್ರ್ಯಾಂಡ್ ಎಂಟ್ರಿ; ಈಗ ಎಲ್ಲಿದ್ದಾರೆ ವಕೀಲ್ ಸಾಬ್?

ಬಿಗ್ ಬಾಸ್ ಕನ್ನಡ ಸೀಸನ್ 11ರ ಸೆನ್ಸೇಷನ್ ಆಗಿದ್ದ ಲಾಯರ್ ಜಗದೀಶ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದರು. ಆದರೆ, ಇದ್ದ ಮೂರು ವಾರಗಳಲ್ಲಿಯೇ ಕಿರುತೆರೆ ವೀಕ್ಷಕರ ಫೇವರಿಟ್ ಸ್ಪರ್ಧಿಯಾಗಿ ಹೊರಬಂದಿದ್ದರು. ಬಿಗ್ ಬಾಸ್ ಮನೆಯೊಳಗೆ ಇರುವಾಗ ಜಗದೀಶ್ ಕೊಡುತ್ತಿದ್ದ ಕಂಟೆಂಟ್‌ಗಳು ಕಲರ್ಸ್ ಕನ್ನಡಕ್ಕೆ ಒಳ್ಳೆಯ ಟಿಆರ್‌ಪಿಯನ್ನು ತಂದು ಕೊಟ್ಟಿದ್ದವು.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ಲಾಯರ್ ಜಗದೀಶ್ ಹವಾ ಕಮ್ಮಿಯೇನು ಆಗಿರಲಿಲ್ಲ. ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ಕೊಡುತ್ತಾ ಸದಾ ಸುದ್ದಿಯಲ್ಲೇ ಇದ್ದಾರೆ. ರಿಯಾಲಿಟಿ ಶೋನಿಂದ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗಬೇಕು ಅಂತ ಆಸೆ ಪಟ್ಟಿದ್ದರು. ಆದರೆ, ರೂಲ್ಸ್ ಪ್ರಕಾರ ಅದು ಸಾಧ್ಯವಿಲ್ಲ.

Buzz is that Lawyer Jagadish has been selected as a wildcard entry in Bigg Boss Hindi

ಇದೇ ಬೆನ್ನಲ್ಲೇ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಲಾಯರ್ ಜಗದೀಶ್‌ಗೆ ಬಿಗ್ ಬಾಸ್ ಹಿಂದಿಯಿಂದ ಆಹ್ವಾನ ಬಂದಿದ್ದು, ಶೀಘ್ರದಲ್ಲಿಯೇ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಸುದ್ದಿ ಲಾಯರ್ ಜಗದೀಶ್ ಅವರ ಆಪ್ತವಲಯದಿಂದಲೇ ಕೇಳಿ ಬರುತ್ತಿದೆ. ಅಷ್ಟಕ್ಕೂ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ನಿಜವೇ? ಅವರ ಆಪ್ತ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ ಏನು? ತಿಳಿಯಲು ಮುಂದೆ ಓದಿ.

ಹೌದು, ಲಾಯರ್ ಜಗದೀಶ್ ಬಿಗ್ ಬಾಸ್ ಹಿಂದಿ ಸೀಸನ್ 18ಕ್ಕೆ ಹೋಗುತ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಕರ್ನಾಟಕದಲ್ಲಿ ಇದೇ ರಿಯಾಲಿಟಿ ಶೋ ಮೂಲಕ ಹವಾ ಸೃಷ್ಟಿಸಿದ್ದ ಜಗದೀಶ್ ಮೇಲೆ ಹಿಂದಿ ಬಿಗ್ ಬಾಸ್ ಟೀಮ್ ಹಲವು ದಿನಗಳಿಂದ ಕಣ್ಣಿಟ್ಟಿತ್ತು ಎನ್ನಲಾಗಿದೆ. ಈಗಾಗಲೇ ಲಾಯರ್ ಜಗದೀಶ್ ಅವರನ್ನು ಮುಂಬೈಗೂ ಕರೆಸಿಕೊಂಡಿದೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ.

ಲಾಯರ್‌ ಜಗದೀಶ್ ಬಿಗ್ ಬಾಸ್‌ಗೆ ಹೋಗುತ್ತಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಜಗದೀಶ್ ಅವರ ಆಪ್ತ ಪುಟ್ಟರಾಜು ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "ಗುಡ್ ಮಾರ್ನಿಂಗ್ ಕರ್ನಾಟಕ, ಯೂಟ್ಯೂಬರ್ಸ್ ಹಾಗೂ ಮಾಧ್ಯಮದ ಗೆಳೆಯರೇ. ವಕೀಲ ಜೆ.ಎನ್ ಜಗದೀಶ್ ಕುಮಾರ್ ಬಿಗ್‌ ಬಾಸ್ ಹಿಂದಿಗೆ ವೈಲ್ಡ್‌ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿದ್ದಾರೆಂದು ಎಂದು ಹೇಳಲು ಥ್ರಿಲ್ ಆಗುತ್ತಿದೆ." ಎಂದು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಾಗೇ " ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಎಲ್ಲಾ ಒಟ್ಟಾಗಿ ಅವರಿಗೆ ಪ್ರೀತಿ ಹಾಗೂ ಬೆಂಬಲವನ್ನು ನೀಡೋಣ. ಮುಂದಿನ ಅಪ್‌ಡೇಟ್‌ಗಾಗಿ ಕಾಯುತ್ತಿರಿ. ಹಾಗೇ ಬಿಗ್‌ಬಾಸ್‌ನಲ್ಲಿ ಅವರಿಗೆ ಪ್ರೋತ್ಸಾಹ ನೀಡುವುದನ್ನು ಮರೆಯದಿರಿ. ಕರ್ನಾಟಕವನ್ನು ಹಿಂದಿಗಿಂತಲೂ ಹೆಚ್ಚು ಶೈನ್ ಮಾಡೋಣ." ಎಂದು ಪುಟ್ಟರಾಜು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಅವರ ಆಪ್ತ ವಲಯದಲ್ಲಿ ಇಂತಹದ್ದೊಂದು ಸುದ್ದಿಯಂತ ಹರಿದಾಡುತ್ತಿದೆ. ಆದರೆ ಲಾಯರ್ ಜಗದೀಶ್ ಅವರ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುವ ಪುಟ್ಟರಾಜು ಅವರೇ ಅಧಿಕೃತವಾಗಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಜಗದೀಶ್ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಸದ್ಯ ವಕೀಲ್ ಸಾಬ್ ಬಿಗ್‌ ಬಾಸ್‌ಗೆ ಹೋಗುತ್ತಾರೆಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲವನ್ನು ಸೃಷ್ಟಿಸಿದೆ.

More from Filmibeat

English summary
Buzz is that Lawyer Jagadish has been selected as a wildcard entry in Bigg Boss Hindi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X