'ಕಾಂತಾರ ಚಾಪ್ಟರ್ 1'ಕ್ಕೆ ರಿಷಬ್ ಶೆಟ್ಟಿಯ ಸಂಭಾವನೆ ಶೇ. 2400ರಷ್ಟು ಏರಿಕೆ? ಅಂದರೆ ಜೇಬಿಗೆ ಸೇರಿದ್ದು ಎಷ್ಟು ಕೋಟಿ?
2022ರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ' ಪ್ಯಾನ್ ಇಂಡಿಯಾ ಸಕ್ಸಸ್ ಕಾಣುತ್ತಿದ್ದಂತೆ ಅವರ ವೃತ್ತಿ ಬದುಕು ಕೂಡ ಬದಲಾಗಿತ್ತು. ರಾತ್ರೋ ರಾತ್ರಿ ರಿಷಬ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದರು. ಈಗ ಸ್ಮಾಲ್ ಬಜೆಟ್ ಸಿನಿಮಾಗಳನ್ನು ಮಾಡುವ ಗೋಜಿಗೆ ಹೋಗುತ್ತಿಲ್ಲ. ಈಗ ಡಿವೈನ್ ಸ್ಟಾರ್ ಗ್ಲೋಬಲ್ ಸಿನಿಮಾ ಮಾಡುವತ್ತ ಗುರಿಯನ್ನು ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧವಾಗುತ್ತಿರುವ ಸಿನಿಮಾವೇ 'ಕಾಂತಾರ ಚಾಪ್ಟರ್ 1'.
'ಕಾಂತಾರ' ಈ ಮಟ್ಟಕ್ಕೆ ಸಕ್ಸಸ್ ಸಿಗುತ್ತೆ ಅನ್ನೋದು ಬಹುಶ: ರಿಷಬ್ ಶೆಟ್ಟಿಗೂ ಗೊತ್ತಿರಲಿಕ್ಕಿಲ್ಲ. ಆದರೆ, ಲೋಕಲ್ ಕಂಟೆಂಟ್ ರಿಷಬ್ ಶೆಟ್ಟಿಯ ಕೈ ಹಿಡಿದಿತ್ತು. ಹೀಗಾಗಿ ರಿಲೀಸ್‌ಗೆ ರೆಡಿಯಾಗಿರುವ 'ಕಾಂತಾರ' ಪ್ರೀಕ್ವೆಲ್ ಪ್ಯಾನ್ ಇಂಡಿಯಾವನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದಲ್ಲ. ಗ್ಲೋಬಲ್ ಸಿನಿಮಾ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೇನು 'ಕಾಂತಾರ ಚಾಪ್ಟರ್ 1' ಬಿಡುಗಡೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಇತ್ತೀಚೆಗೆ 'ಕಾಂತಾರ' ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಚ್ಚ ಪೋಸ್ಟರ್ ಅನ್ನು ರಿಲೀಸ್ ಮಾಡಿತ್ತು. ಅಲ್ಲಿಂದ ರಿಷಬ್ ಶೆಟ್ಟಿಯ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಹಾಗೇ ರಿಷಬ್ ಶೆಟ್ಟಿ ಈ ಪ್ರೀಕ್ವೆಲ್‌ಗೆ ದುಬಾರಿ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ. 'ಕಾಂತಾರ' ಮೆಗಾ ಹಿಟ್ ಆದ ಬಳಿಕ ಶೇ.2400 ರಷ್ಟು ಸಂಭಾವನೆ ಹೆಚ್ಚಿಕೊಂಡಿದ್ದಾರೆಂದು ಚರ್ಚೆಯಾಗುತ್ತಿದೆ.
ಮುಂದೆ ಓದಿ
'ಕಾಂತಾರ' ಬಳಿಕ ಶೇ.2400ರಷ್ಟು ಸಂಭಾವನೆ ಹೆಚ್ಚಿಸಿಕೊಂಡ ರಿಷಬ್?
ಹೊಂಬಾಳೆ ಫಿಲ್ಮ್ಸ್‌ನಿಂದ ರಿಷಬ್ ಶೆಟ್ಟಿ ಪಡೆದಿರುವ ಸಂಭಾವನೆ
'ಕಾಂತಾರ ಚಾಪ್ಟರ್ 1' ಪ್ರಾಫಿಟ್‌ನಲ್ಲಿ ರಿಷಬ್ ಶೆಟ್ಟಿಗೆ ಶೇರು
25 ಎಕರೆಯಲ್ಲಿ 'ಕಾಂತಾರ ಚಾಪ್ಟರ್ 1' ಪ್ರಪಂಚ ಹೇಗಿದೆ?
ಬಾಲಿವುಡ್ ವೆಬ್ ಸೈಟ್ ಕೋಯ್‌ಮೋಯ್ ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1'ಕ್ಕೆ ಪಡೆದಿರುವ ಸಂಭಾವನೆ ಬಗ್ಗೆ ವರದಿ ಮಾಡಿದೆ. 'ಕಾಂತಾರ' ಸಿನಿಮಾಗೆ ರೈಟರ್ ಆಗಿ, ನಿರ್ದೇಶಕನಾಗಿ ಹಾಗೂ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದ ರಿಷಬ್ ಶೆಟ್ಟಿ 4 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು. ಆ ಸಿನಿಮಾ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಆದರೆ, ಮೊದಲ ಸಿನಿಮಾಗೆ ರಿಷಬ್ ಶೆಟ್ಟಿಗೆ ಸಿಕ್ಕ ಸಂಭಾವನೆ ಶೇ. 16 ರಷ್ಟು ಮಾತ್ರ. ಅದೇ 'ಕಾಂತಾರ ಚಾಪ್ಟರ್ 1' ದುಬಾರಿ ಶೇ.2400 ರಷ್ಟು ಹೆಚ್ಚು ಸಂಭಾವನೆ ಪಡೆದಿದ್ದಾರೆಂದು ವರದಿ ಮಾಡಿದ್ದಾರೆ.
ಶೇ.2400 ಅಂದರೆ, ಸುಮಾರು 100 ಕೋಟಿ ರೂಪಾಯಿಯನ್ನು ರಿಷಬ್ ಶೆಟ್ಟಿ ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಾಂತಾರ 2025ರಲ್ಲಿ ತೆರೆಕಾಣಲಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಇದರೊಂದಿಗೆ ರಿಷಬ್ ಶೆಟ್ಟಿ ಕೂಡ ನಿರ್ಮಾಣ ಸಂಸ್ಥೆಯೊಂದಿಗೆ ಪ್ರಾಫಿಟ್ ಶೇರಿಂಗ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಇನ್ನೂ 50 ಕೋಟಿ ರೂಪಾಯಿಯನ್ನು ರಿಷಬ್ ಶೆಟ್ಟಿಗೆ ನೀಡಬೇಕಾಗಬಹುದು. ಅದು ಸಿನಿಮಾದ ಗಳಿಕೆ ಮೇಲೆ ನಿರ್ಧಾರವಾಗಿದೆ ಎಂದೂ ವರದಿಯಾಗಿದೆ.
'ಕಾಂತಾರ'ಕ್ಕಿಂತ 'ಕಾಂತಾರ: ಚಾಪ್ಟರ್ 1' ಅಷ್ಟೇ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಗೆ ದುಬಾರಿ ಮೊತ್ತವನ್ನೇ ಹೂಡಿಕೆ ಮಾಡಿದೆ. ಈ ಬಾರಿ ಇನ್ನೂ ರಿಚ್ ಆಗಿ ಸಿನಿಮಾವನ್ನು ಮಾಡುವುದಕ್ಕೆ ಹೊರಟಿರುವ ರಿಷಬ್ ಶೆಟ್ಟಿ ಈಗಾಗಲೇ ಕುತೂಹಲವನ್ನು ಕೆರಳಿಸಿದ್ದಾರೆ. ದುಬಾರಿ ಆಕ್ಷನ್, ಪೌರಾಣಿಕ ಹಿನ್ನೆಲೆ ಹಾಗೂ ಕರಾವಳಿಯ ಸ್ಥಳೀಯ ಕಥೆಯನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ಎನ್ನಲಾಗಿದೆ. ಕಥೆ ಬಗ್ಗೆ ರಿಷಬ್ ಶೆಟ್ಟಿ ಎಲ್ಲೂ ಗುಟ್ಟನ್ನು ಬಿಟ್ಟಿಕೊಟ್ಟಿಲ್ಲ.
ಇದೂವರೆಗೂ ರಿಷಬ್ ಶೆಟ್ಟಿ ಸಿನಿಮಾ ಚಿಕ್ಕದೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ತುಂಬಾ ದೊಡ್ಡ ಯುದ್ಧದ ಸನ್ನಿವೇಶವನ್ನು ಈ ಸಿನಿಮಾಗಾಗಿ ಚಿತ್ರೀಕರಣ ಮಾಡಲಾಗಿದೆಯಂತೆ. ಸುಮಾರು 500 ಮಂದಿ ತರಬೇತಿ ಪಡೆದಿರುವ ಫೈಟರ್‌ಗಳು ಈ ಆಕ್ಷನ್ ಸೀಕ್ವೆನ್ಸ್‌ಗಾಗಿ ಕೆಲಸ ಮಾಡಿದ್ದಾರೆ. ಹಾಗೇ ಕಲಾವಿದರ ತಂಡ ಹಾಗೂ ತಂತ್ರಜ್ಞರು ಸೇರಿ ಸುಮಾರು 3 ಸಾವಿರ ಮಂದಿ ಈ ಸಿನಿಮಾಗಾಗಿ ದುಡಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಆಗುತ್ತಾ? ಎನ್ನುವ ಪ್ರಶ್ನೆ ಕನ್ನಡ ಸಿನಿಪ್ರಿಯರನ್ನು ಕಾಡುವುದಕ್ಕೆ ಶುರು ಮಾಡಿದೆ.


Click it and Unblock the Notifications











