'ಗೌರಿ' ಬಳಿಕ ಬಾಲಿವುಡ್‌ಗೆ ಹಾರಿದ್ರಾ ಇಂದ್ರಜಿತ್ ಲಂಕೇಶ್ ಪುತ್ರ? ಕರಣ್ ಜೋಹರ್ ನಿರ್ಮಾಪಕ?

ಸ್ಯಾಂಡಲ್‌ವುಡ್‌ನ ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ 'ಗೌರಿ' ಸಿನಿಮಾ ಮೂಲಕ ತಮ್ಮ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಒಬ್ಬ ಹೀರೋಗೆ ಕೊಡಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಸಿಯೇ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದರು. ತಾವೇ ಸ್ವತ: ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದರು.

ಸಮರ್ಜಿತ್ ಲಂಕೇಶ್ ಸ್ಯಾಂಡಲ್‌ವುಡ್‌ನ ಹೃತಿಕ್ ರೋಷನ್ ಆಗಬಹುದು ಅಂತಲೇ ಸಿನಿಮಾ ಮಂದಿ ಭವಿಷ್ಯ ನುಡಿದಿದ್ದರು. ಅದರಂತೆಯೇ ಇಂದ್ರಜಿತ್ ಲಂಕೇಶ್ ಪುತ್ರ ಕೂಡ ಸ್ಟೈಲಿಶ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸಮರ್ಜಿತ್ ಲಂಕೇಶ್ ಡ್ಯಾನ್ಸ್, ಲುಕ್, ಮ್ಯಾನರಿಸಂ ನೋಡಿ ಸಿನಿಪ್ರಿಯರಲ್ಲೂ ಅದೇ ಫೀಲಿಂಗ್ ಇತ್ತು.

Buzz Karan Johar s Dharma productions will be producing movie Indrajit Lankesh son Samarjit

'ಗೌರಿ' ಸಿನಿಮಾ ನಿರೀಕ್ಷಿತ ಮಟ್ಟ ತಲುಪದೇ ಹೋದರೂ, ಸಮರ್ಜಿತ್ ಲಂಕೇಶ್ ಸಿನಿಮಾ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಅದ್ಭುತ ಪರ್ಫಾಮೆನ್ಸ್‌ನಿಂದ ಗಮನ ಸೆಳೆದಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದ್ದು, ಸಮರ್ಜಿತ್ ಲಂಕೇಶ್ ಶೀಘ್ರದಲ್ಲಿಯೇ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಸಮರ್ಜಿತ್ ಲಂಕೇಶ್‌ಗೆ 'ಗೌರಿ' ಸಿನಿಮಾದಲ್ಲಿನ ಅಭಿನಯಕ್ಕಾಗಿ 'ಲುಮಿಯರ್ ನ್ಯಾಷನಲ್ ಅವಾರ್ಡ್' ಬಂದಿದೆ. ಇದೇ ಖುಷಿಯಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಪ್ರಶಸ್ತಿ ಗೆದ್ದ ಖುಷಿಯಲ್ಲಿ ಸ್ಯಾಂಡಲ್‌ವುಡ್‌ನ ಹ್ಯಾಂಡಮ್ ಹಂಕ್ ಬಾಲಿವುಡ್‌ಗೆ ಹಾರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಗೌರಿ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ತೆಲುಗು, ತಮಿಳು ಚಿತ್ರರಂಗದಿಂದಲೂ ಆಫರ್ ಬರುತ್ತಿವೆಯಂತೆ. ಆದರೆ, ಸದ್ಯ ಬಾಲಿವುಡ್‌ನಿಂದ ಬಿಗ್ ಆಫರ್ ಸಿಕ್ಕಿದೆ ಎನ್ನಲಾಗಿದೆ.

Buzz Karan Johar s Dharma productions will be producing movie Indrajit Lankesh son Samarjit

ಈಗಾಗಲೇ ಬಾಲಿವುಡ್‌ನ ನಿರ್ಮಾಣ ಸಂಸ್ಥೆ ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಧರ್ಮ ಪ್ರೊಡಕ್ಷನ್ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಹೀಗಾಗಿ ಬಾಲಿವುಡ್‌ಗೆ ಸಮರ್ಜಿತ್ ಲಂಕೇಶ್ ಕಾಲಿಡುವುದು ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ. ಧರ್ಮ ಪ್ರೊಡಕ್ಷನ್ಸ್ ಈಗಾಗಲೇ ಸಮರ್ಜಿತ್‌ರನ್ನು ಸಂಪರ್ಕಿಸಿದೆ ಎಂದೂ ಹೇಳಲಾಗುತ್ತಿದೆ.

ಸ್ಟಾರ್ ಕಿಡ್‌ಗಳನ್ನು ಯಶಸ್ವಿಯಾಗಿ ಪರಿಚಯಿಸಿರುವ ಕರಣ್ ಜೊಹರ್ ಸಂಸ್ಥೆ ಜೊತೆ ಸಮರ್ಜಿತ್ ಈಗಾಗಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಕರಣ್ ಜೋಹರ್ ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು, ಸಮರ್ಜಿತ್ ಲಂಕೇಶ್ ಜೊತೆ ಸಿನಿಮಾ ಮಾಡಿದರೆ, ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಂತೆ ಆಗುತ್ತೆ.

ಒಂದ್ಕಡೆ ಕರಣ್‌ ಜೋಹರ್ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್‌, ಇನ್ನೊಂದು ಕಡೆ ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಎರಡು ಕಂಪನಿಗಳಲ್ಲಿ ಯಾವ ಸಿನಿಮಾ ಮೊದಲು ಸೆಟ್ಟೇರುತ್ತೆ ಅನ್ನೋ ಕುತೂಹಲ ಕನ್ನಡಿಗರಲ್ಲಿ ಇದೆ.

More from Filmibeat

English summary
Buzz Karan Johar's Dharma productions will be producing movie Indrajit Lankesh son Samarjit:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X