'ಟಾಕ್ಸಿಕ್'ಗೆ ರಾಕಿ ಭಾಯ್ ಪಡೆದ ಸಂಭಾವನೆ ಎಷ್ಟು? ಬರುವ ಲಾಭದಲ್ಲಿ ಸಿಗೋದೆಷ್ಟು ಗೊತ್ತೇ?

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಬಿಡುಗಡೆ ಆಗುತ್ತಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಏನೆಲ್ಲ ದಾಖಲೆಗಳನ್ನು ಬರೆಯಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.

ಈಗಾಗಲೇ 'ಟಾಕ್ಸಿಕ್' ಟೀಮ್ ಪ್ರಚಾರವನ್ನು ಆರಂಭಿಸಿದೆ. ಬಿಗ್ ಬಜೆಟ್ ಸಿನಿಮಾ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ 'ಟಾಕ್ಸಿಕ್' ಕಲೆಕ್ಷನ್ ಎಷ್ಟಾಗುತ್ತೆ ಅನ್ನೋ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. 'ಕೆಜಿಎಫ್ 2' ದಾಖಲೆಯನ್ನು 'ಟಾಕ್ಸಿಕ್' ಉಡೀಸ್ ಮಾಡಬಹುದಾ? ಇಲ್ವಾ? ಅನ್ನೋ ಲೆಕ್ಕಾಚಾರಗಳು ಕೂಡ ಶುರುವಾಗಿವ. ಈಗಾಗಲೇ ರಿಲೀಸ್ ಆಗಿರುವ 2 ಟೀಸರ್ 'ಟಾಕ್ಸಿಕ್' ಕ್ರೇಜ್ ಅನ್ನು ದೇಶದೆಲ್ಲೆಡೆ ಪಸರಿಸಿದೆ.

Buzz Rocking star Yash took Rs 50 crore plus huge share from Toxic Movie profit

'ಟಾಕ್ಸಿಕ್' ಬಿಡುಗಡೆಗೂ ಮುನ್ನ ಯಶ್ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಸಿನಿಮಾಗೆ ಖುದ್ದು ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಸಂಭಾವನೆಯನ್ನು ಹೇಗೆ ಪಡೆದಿದ್ದಾರೆ? ಇವರಿಗೆ ಪ್ರಾಫಿಟ್ ಎಷ್ಟು ಸಿಗುತ್ತೆ? ಸಂಭಾವನೆ ಹಾಗೂ ಲಾಭದಿಂದ ಬರುವ ಮೊತ್ತದಿಂದ ರಾಕಿ ಭಾಯ್ ಕೈ ಸೇರುವ ಹಣವೆಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಕೆಜಿಎಫ್ 2' ಮೆಗಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರುತ್ತಿದ್ದಂತೆ ಯಶ್ ನಿರ್ಮಾಪಕರಾಗಿ ಬದಲಾಗಿದ್ದಾರೆ. ಅವರು ನಟಿಸುವ ಸಿನಿಮಾಗಳಲ್ಲಿ ಅವರು ಹೀರೋ ಅಷ್ಟೇ ಅಲ್ಲ, ಬದಲಿಗೆ ನಿರ್ಮಾಪಕ ಕೂಡ ಆಗುತ್ತಿದೆ. 'ಟಾಕ್ಸಿಕ್' ಬಳಿಕ ರಿಲೀಸ್ ಆಗುತ್ತಿರುವ 'ರಾಮಾಯಣ' ಸಿನಿಮಾದಲ್ಲಿಯೂ ಯಶ್ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ಸೇರಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಮಾತಾಡಿಕೊಳ್ಳುತ್ತಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್ ಜೊತೆ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಸಂಸ್ಥೆ ಎರಡೂ ಸೇರಿ 'ಟಾಕ್ಸಿಕ್'ಗೆ ಹಣ ಹೂಡಿಕೆ ಮಾಡಿದೆ. ಇದರಲ್ಲಿ ಯಶ್ ಹೂಡಿಕೆ ಮಾಡಿರುವ ಹಣ ಎಷ್ಟು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ, ಯಶ್ ಒಬ್ಬ ನಟನಾಗಿ ಸಂಭಾವನೆ ರೂಪದಲ್ಲಿ ₹50 ಕೋಟಿ ರೂಪಾಯಿ ಹಣವನ್ನು ಪಡೆದಿದ್ದಾರೆ. ಹಾಗೇ ಸಿನಿಮಾದಲ್ಲಿ ಬರುವ ಲಾಭದಲ್ಲಿ ಶೇ.30ರಷ್ಟು ಶೇರ್ ಅನ್ನು ಪಡೆದಿದ್ದಾರೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿರುವ ಸುದ್ದಿ.

Buzz Rocking star Yash took Rs 50 crore plus huge share from Toxic Movie profit

'ಟಾಕ್ಸಿಕ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಾಟ್ ಟಾಪಿಕ್ ಆಗಿದೆ. 'ಕೆಜಿಎಫ್‌'ನ ಎರಡೂ ಸೀರಿಸ್‌ಗಳು ಗೆದ್ದ ಬಳಿಕ ಯಶ್ ತಮ್ಮನ್ನು ತಾವು ಹೇಗೆ ತೆರೆಮೇಲೆ ಬಿಂಬಿಸಿಕೊಂಡಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವುದಕ್ಕೆ ಜನರು ಕಾತುರಾಗಿದ್ದಾರೆ. ಇನ್ನೊಂದು ಕಡೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದೆಂದು ಲೆಕ್ಕಾ ಹಾಕುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಸದ್ಯ 'ಟಾಕ್ಸಿಕ್' ಈಗ ಪ್ರೀ0-ರಿಲೀಸ್ ಬ್ಯುಸಿನೆಸ್ ಮಾಡುವಲ್ಲಿ ಬ್ಯುಸಿಯಾಗಿದೆ.

ಇನ್ನು ಯಶ್ 'ಟಾಕ್ಸಿಕ್‌'ಗೆ ಬಾಲಿವುಡ್‌ ಸಿನಿಮಾ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ಸವಾಲೊಡ್ಡಿದೆ. ಆದರೆ, 'ಧುರಂಧರ್ 2' ತಂಡ ಇನ್ನೂ ಸಿನಿಮಾದ ಪ್ರಚಾರವನ್ನು ಆರಂಭ ಮಾಡಿಲ್ಲ. ಹೀಗಾಗಿ ಪ್ರಮೋಷನ್‌ ಹಂತದಲ್ಲಿಯೇ 'ಟಾಕ್ಸಿಕ್' ಹಾಗೂ 'ಧುರಂಧರ್ 2' ನಡುವಿನ ಕಾದಾಟ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ.

More from Filmibeat

English summary
Buzz Rocking star Yash took Rs 50 crore plus huge share from Toxic Movie profit.
Read more about: yash toxic remuneration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X