ಸಿಕ್ಸ್ ಪ್ಯಾಕ್.. ವರ್ಕ್‌ಔಟ್.. ಜಿಮ್ನಾಸ್ಟಿಕ್.. ಸಿಪಿ ಯೋಗೇಶ್ವರ್ ಪುತ್ರನ ವರ್ಕ್‌ಔಟ್‌ ವಿಡಿಯೋ ಭಾರೀ ಟ್ರೆಂಡಿಂಗ್

ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ತಮ್ಮ ರಾಜಕಾರಣದ ಮಧ್ಯೆನೇ ಮತ್ತೆ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಅದಕ್ಕೆ ಎರಡು ಬಲವಾದ ಕಾರಣವಿದೆ. ಒಂದು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವುದು. ಇನ್ನೊಂದು ಮುಂದಿನ ಚುನಾವಣೆಗೆ ಸಿದ್ಧರಾಗುವುದು. ಒಂದೇ ಏಟಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಪ್ಯಾನ್. ಹಾಗಿದ್ದರೂ, ಜನರ ಕುತೂಹಲವೆಲ್ಲ ಯೋಗೇಶ್ವರ್ ಅವರ ಪುತ್ರನ ಮೇಲೆ ನೆಟ್ಟಿದೆ.

ಪುತ್ರ ಧ್ಯಾನ್ ಯೋಗೇಶ್ವರ್‌ಗಾಗಿ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸೆಟ್ಟೇರಿಸಿದ್ದಾರೆ. ಸುಮಾರು 25 ವರ್ಷಗಳ ಬಳಿಕ 'ಸೈನಿಕ' ಸೀಕ್ವೆಲ್ ಸೆಟ್ಟೇರಿದೆ. ಇನ್ನೊಂದು ಕಡೆ 'ಕರ್ಣಾಟಬಲಂ ಅಜೇಯಂ' ಅನ್ನೋ ಸಿನಿಮಾನೂ ಇದರೊಟ್ಟಿಗೆ ಸೆಟ್ಟೇರಿದೆ. ಎರಡೂ ಸಿನಿಮಾಗಳಲ್ಲೂ ತಂದೆ-ಮಗ ನಟಿಸುತ್ತಿರೋದು ವಿಶೇಷ. ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭ ಆಗಿದ್ದು, ಧ್ಯಾನ್ ಯೋಗೇಶ್ವರ್ ಸಂಪೂರ್ಣ ತಯಾರಿ ಪಡೆದುಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

C P Yogeshwara son Dhyan Yogeshwara six pack and workout video trending in internet

ಈಗ ತಾನೇ ಪದವಿ ಮುಗಿಸಿರುವ ಧ್ಯಾನ್ ಯೋಗೇಶ್ವರ್ ಸಿನಿಮಾ ಕಡೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಸಿನಿಮಾ ಎಂಟ್ರಿ ಕೊಡ್ಬೇಕು ಅನ್ನೋ ಆಸಕ್ತಿ ಏನೋ ಸರಿ. ಆದರೆ, ಅದಕ್ಕೆ ಪೂರ್ಣ ಪ್ರಮಾಣದಲ್ಲಿ ತಯಾರಿ ತೆಗೆದುಕೊಂಡು ಬರುಬೇಕು. ತಮ್ಮದೇ ನಿರ್ಮಾಣ ಆಗಿದ್ದರೂ, ಧ್ಯಾನ್ ಒಬ್ಬ ಹೀರೋ ಆಗೋಕೆ ಬೇಕಿರೋ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಎಂಟ್ರಿ ಕೊಟ್ಟಂತೆ ಇದೆ. ಸದ್ಯ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವರ್ಕ್‌ಔಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಚನ್ನಪಟ್ಟಣದ ಶಾಸಕ ಹಾಗೂ ನಟ ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಈ ವರ್ಕೌಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಸಿಕ್ಸ್‌ಪ್ಯಾಕ್ ಮಾಡಿಕೊಂಡು ಸಖತ್ ಫಿಕ್ಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ವಿಡಿಯೋ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

English summary
C P Yogeshwara son Dhyan Yogeshwara six pack and workout video trending in internet.
Read more about: actor kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X