"ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣೋದಾ? ಆ ತಮಿಳು ಸಿನಿಮಾ ಯಾಕೆ ನೋಡಿದ್ರಿ?" ಕನ್ನಡಿಗರಿಗೆ ದರ್ಶನ್ ಪ್ರಶ್ನೆ

ಕಾವೇರಿ ಕಿಚ್ಚು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಪ್ರತಿಭಟನೆಗಳು ನಡೆಯುತ್ತಿವೆ. ರೈತರು ಬೀದಿಗೆ ಇಳಿದಿದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ ಇದೇ ಸೆಪ್ಟೆಂಬರ್ 26ರಂದು ಕರ್ನಾಟಕ ಬಂದ್‌ಗೂ ಕರೆ ನೀಡಲಾಗಿದೆ.

ಇತ್ತ ಸ್ಯಾಂಡಲ್‌ವುಡ್‌ನ ಕಲಾವಿದರು ಕೂಡ ಒಬ್ಬೊಬ್ಬರಾಗಿಯೇ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ರೈತರ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ರೈತರ ಬೆಂಬಲಕ್ಕೆ ನಿಂತಿದ್ದಾರೆ. ರೈತ ಸಂಘಟನೆ ಹಮ್ಮಿಕೊಂಡಿದ್ದ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮಿಳು ನಟ ಹಾಗೂ ಅವರ ಸಿನಿಮಾಗಳ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Cauvery Issue: Darshan took Shivarajakumar, Sudeep, Yash, Rajinikanth name in Protest

ದರ್ಶನ್​, ಸುದೀಪ್, ಶಿವಣ್ಣ ಮಾತ್ರ ಕಾಣಿಸೋದಾ?

ಕಾವೇರಿ ವಿವಾದ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಬಗ್ಗೆ ಸೂಪರ್‌ಸ್ಟಾರ್‌ಗಳು ಯಾಕೆ ಧ್ವನಿ ಎತ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿತ್ತು. ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರ ಬಳಿ ಒಂದೇ ಒಂದು ಟ್ವೀಟ್ ಕೇಳಿಲ್ಲ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ ? ಎಂದು ಕನ್ನಡ ಕಲಾವಿದರ ಬಗ್ಗೆ ಟೀಕೆ ಮಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದರ್ಶನ್ ಹೇಳಿದ್ದೇನು?

" ಸುಮಾರು ದಿನದಿಂದ ಈ ಕಲಾವಿದರು ಅದಕ್ಕೆ ಬರಲಿಲ್ಲ. ಈ ಕಲಾವಿದರು ಇದಕ್ಕೆ ಬರಲಿಲ್ಲ ಅಂತ ಹೇಳುತ್ತಿದ್ದೀರಲ್ಲ ಸ್ವಾಮಿ. ಮೊನ್ನೆ ಮೊನ್ನೆಯಷ್ಟೇ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಒಬ್ಬ ವಿತರಕ 6 ಕೋಟಿಗೆ ಸಿನಿಮಾ ತಗೊಂಡ. 35, 36 ಕೋಟಿ ಮಾಡಿದ. ಆ ಸಿನಿಮಾವನ್ನು ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಈಗ ಬಾರಯ್ಯ ಕಾವೇರಿ ಗಲಾಟೆ ನಡೀತಿದೆ ಅಂತ ಕರೆದ್ರಾ? ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ." ಎಂದು ಪ್ರಶ್ನೆ ಮಾಡಿದ್ದಾರೆ.

Cauvery Issue: Darshan took Shivarajakumar, Sudeep, Yash, Rajinikanth name in Protest

"ನೀವು ಕನ್ನಡ ಕಲಾವಿದರಿಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ. ಅವರು ದೊಡ್ಡ ಕಲಾವಿದರು. ನಾನು ಇಲ್ಲ ಅಂತ ಹೇಳುವುದಿಲ್ಲ. ನಾನು ಅವರ ಬಗ್ಗೆ ಮಾತಾಡುತ್ತಿಲ್ಲ. ಕರ್ನಾಟಕದಿಂದ 35, 36 ಕೋಟಿ ಹೋಯ್ತು ಸ್ವಾಮಿ. ಯಾಕೆ ಅವರ ಬಾಯ್ ಬಂದ್ ಮಾಡಿಲ್ಲ." ಎಂದು ದರ್ಶನ್ ಸವಾಲೆಸೆದಿದ್ದಾರೆ.

"ನಾನು ಕಾವೇರಿ ನೀರಿನಲ್ಲೇ ಬೆಳೀತಿನಿ"

ಯಾಕೆ ಸುದೀಪ್ ಅವರು, ದರ್ಶನ್, ಶಿವಣ್ಣ ಯಶ್ ನಮ್ಮ ಅಭಿನೋ ಇನ್ನೊಬ್ರೋ ಮತ್ತೊಬ್ರೋ ನಾವೇ ಕಾಣಿಸುತ್ತಿರೋದಾ? ಯಾಕೆ ಅವರು ಯಾರೂ ಕಾಣಿಸುತ್ತಿಲ್ವಾ? ಹೀಗೆ ಹೇಳಿದ ಕೂಡ ದರ್ಶನ್‌ ಮಾತು ಖಾರವಾಗಿರುತ್ತೆ. ಕೆಟ್ಟದಾಗಿರುತ್ತೆ. ದರ್ಶನ್‌ಗೆ ಮಾನ ಮರ್ಯಾದೆ ಇಲ್ಲ. ಇನ್ನೊಂದಿಲ್ಲ ಮತ್ತೊಂದಿಲ್ಲ. ನಾನು ಇದನ್ನು ಸುತ್ತಿಕೊಂಡೇ ಬರುತ್ತಿರೋದು. ನಾನು ರೈತನೇ. ನಾನು ದನಗಳನ್ನು ಸಾಕಿದ್ದೀನಿ. ನಾನು ಹಾಲು ಹಾಕ್ತಿನಿ. ಇದೇ ಕಾವೇರಿ ನೀರಿನಲ್ಲೇ ನಾನು ಬೆಳೆ ಬೆಳೆಯುತ್ತಿದ್ದೇನೆ."

"ನಾನು ಇಲ್ಲಿಗೆ ಸೀಮಿತ. ನಾನು ಇಲ್ಲಿಗೆ ಸಿನಿಮಾ ಮಾಡೋದು. ನಮ್ಮನ್ನು ಯಾಕೆ ಕರೀತಿರ. ಅವರನ್ನು ಕರೆಯಿರಿ. ಇಲ್ಲಿಂದ 34 ಕೋಟಿ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ. ಅದು ಒಬ್ಬ ರೈತನ ದುಡ್ಡೇನೆ. ಇಲ್ಲ ಕೂಲಿ ಕಾರ್ಮಿಕನ ದುಡ್ಡೇನೆ." ಎಂದು ಕಿಡಿಕಾರಿದ್ದಾರೆ.

More from Filmibeat

English summary
Cauvery Issue: Darshan took Shivarajakumar, Sudeep, Yash, Rajinikanth name in Protest:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X