"ದರ್ಶನ್, ಸುದೀಪ್, ಶಿವಣ್ಣ, ಯಶ್ ಅಷ್ಟೇ ಕಾಣಿಸೋದು?": ಕಾವೇರಿ ಹೋರಾಟಗಾರರು ರಾಂಗ್.. ದರ್ಶನ್ ಕ್ಷಮೆಗೆ ಪಟ್ಟು!

By ಫಿಲ್ಮಿಬೀಟ್ ಡೆಸ್ಕ್

ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಕ್ಕೆ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ವಿವಿಧ ರೈತಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.

ನಾಳೆ (ಸೆಪ್ಟೆಂಬರ್ 26) ಬೆಂಗಳೂರು ಬಂದ್ ರೈತ ಸಂಘಟನೆಗಳು ಕರೆ ನೀಡಿವೆ. ಹಾಗೇ ಸೆಪ್ಟೆಂಬರ್ 29ಕ್ಕೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಈ ವಾರ ಕಾವೇರಿ ಹೋರಾಟ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ. ಈ ಮಧ್ಯೆ ಕನ್ನಡದ ನಟರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿಲ್ಲ ಅಂತ ಹೋರಾಟಗಾರರು ಕಿಡಿಕಾರಿದ್ದರು.

kaveri-protesters-against-drashan

ಈ ವಿಚಾರಕ್ಕೆ ದರ್ಶನ್ ರೈತ ಸಂಘಟನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ದರ್ಶನ್, ಸುದೀಪ್, ಶಿವಣ್ಣ, ಯಶ್ ಅಷ್ಟೇ ಕಾಣಿಸೋದಾ? ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಕನ್ನಡದಿಂದ ದೋಚಿಕೊಂಡು ಹೋಯ್ತು. ಆ ನಟನನ್ನು ಕರೆಯಿರಿ ಎಂದಿದ್ದರು. ಈ ಹೇಳಿಕೆ ಕಾವೇರಿ ಹೋರಾಟಗಾರರನ್ನು ಕೆರಳಿಸಿದೆ.

ದರ್ಶನ್ ಹೇಳಿದ್ದಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಕಾವೇರಿ ವಿವಾದದ ಬಗ್ಗೆ ಕನ್ನಡದ ಸೂಪರ್‌ಸ್ಟಾರ್‌ಗಳು ಧ್ವನಿ ಎತ್ತದೆ ಇದ್ದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಆ ವೇಳೆ ದರ್ಶನ್ ಸೇರಿದಂತೆ ಕನ್ನಡದ ಹಲವು ನಟರು ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದರು. ನಿನ್ನೆಯಷ್ಟೇ ರೈತ ಸಂಘಟನೆ ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ತಿರುಗೇಟು ನೀಡಿದ್ದರು. "ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರ ಬಳಿ ಒಂದೇ ಒಂದು ಟ್ವೀಟ್ ಕೇಳಿಲ್ಲ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ ?" ಟೀಕಿಸಿದವರ ವಿರುದ್ಧ ದರ್ಶನ್ ತಮ್ಮದೇ ಸ್ಟೈಲ್‌ನಲ್ಲಿ ಕಿಡಿಕಾರಿದ್ದರು.

ಇದೇ ಹೇಳಿಕೆಗೆ ತಿರುಗಿಬಿದ್ದ ಹೋರಾಟಗಾರರು

ದರ್ಶನ್ ಕೊಟ್ಟ ಈ ಹೇಳಿಕೆ ಕಾವೇರಿ ಪರ ಹೋರಾಟಗಾರರ ನಿದ್ದೆ ಕೆಡಿಸಿದೆ. ದರ್ಶನ್ ನೀಡಿದ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ವಿಷಯದಲ್ಲಿ ದರ್ಶನ್ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆಂದು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರಹಾಕಿದೆ. ಪ್ರತಿಭಟನೆಯಲ್ಲಿ ನಟ ದರ್ಶನ್ ವಿರುದ್ಧ ಘೋಷಣೆಯನ್ನೂ ಕೂಗಿದ್ದಾರೆ.

kaveri-protesters-against-drashan

"ದರ್ಶನ್ ಕ್ಷಮೆ ಕೇಳಬೇಕು"

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ದರ್ಶನ್ ವಿರುದ್ಧ ಅಸಮಧಾನ ಹೊರಹಾಕಿದೆ. ಈ ಹೋರಾಟಕ್ಕೆ ದರ್ಶನ್ ಬಂದರೆ ಬಲ ಬರುತ್ತೆ ಎಂದು ಭಾವಿಸಿದ್ದೆವು. ಆದರೆ, ಕಾರ್ಯಕ್ರಮಕ್ಕೆ ಬಂದು ಕಾವೇರಿ ಹೋರಾಟಗಾರರ ಬಗ್ಗೆನೇ ಕೇವಲವಾಗಿ ಮಾತನಾಡಿದ್ದಾರೆ. ಒಬ್ಬ ನಟನಾಗಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿ. ತಮ್ಮ ಹೇಳಿಕೆ ಬಗ್ಗೆ ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಿಂದ 36 ಕೋಟಿ ರೂ. ಹೋಗಿದೆ

ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಲಾಭ ಮಾಡಿದೆ. ಕರ್ನಾಟಕದಿಂದ 36 ಕೋಟಿ ರೂಪಾಯಿ ಹೋಗಿದೆ. ಅದನ್ನು ಕನ್ನಡಿಗರೇ ಕೊಟ್ಟಿದ್ದು. ಹೀಗಾಗಿ ಅವರನ್ನೂ ಕರೆಯಿರಿ ಎಂದು ಹೇಳಿದ್ದರು. ದರ್ಶನ್ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಚರ್ಚೆಗಳಾಗುತ್ತಿವೆ.

More from Filmibeat

English summary
Cauvery protesters angry on Darshan statement Demands apology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X