ದರ್ಶನ್ ಬಳಿಕ ಸಂಜನಾ ಗಲ್ರಾನಿಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು; ಮಾದಕ ವಸ್ತು ಕೇಸ್‌.. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ಮಾದಕ ವಸ್ತು ಕೇಸ್ ಪ್ರಕರಣದಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿತ್ತು. ಈ ಸಂಬಂಧ ನಟಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಸಂಜನಾ ಗಲ್ರಾನಿಯನ್ನು ನ್ಯಾಯಾಂಗ ಬಂಧಿನದಲ್ಲಿ ಇಡಲಾಗಿತ್ತು. ಸುಮಾರು ನಾಲ್ಕು ತಿಂಗಳುಗಳ ಕಾಲ ಈ ನಟಿ ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕಾಗಿತ್ತು.

ಕೊನೆಗೂ ಕರ್ನಾಟಕದ ಹೈ ಕೋರ್ಟ್‌ನಿಂದ ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು ಆಗಿತ್ತು. ಸಂಜನಾ ಗಲ್ರಾನಿ ಕೂಡ ಅನಾರೋಗ್ಯ ಹಿನ್ನೆಲೆಯಲ್ಲಿ ಜಾಮೀನು ಕೋರಿ ಮನವಿ ಮಾಡಿಕೊಂಡಿದ್ದರು. ಆನಂತ್ರ ತನ್ನ ಮೇಲಿನ ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೈ ಕೋರ್ಟ್ ಅವರ ಮೇಲಿದ್ದ ಎಫ್‌ಐಆರ್‌ರನ್ನು ರದ್ದು ಗೊಳಿಸಿತ್ತು.

CCB police appeal to the supreme court on the Sanjjana Galrani case challenging the high court order

ಅಲ್ಲಿಗೆ ಸಂಜನಾ ಗಲ್ರಾನಿ ಮಾದಕ ವಸ್ತು ಪ್ರಕರಣದಿಂದ ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗ ಮತ್ತೆ ಸಂಕಷ್ಟ ಎದುರಾಗಿದೆ. ಸಂಜನಾ ಗಲ್ರಾನಿ ಪರ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡ್ರಗ್ ಪ್ರಕರಣದಿಂದ ಹೊರ ಬಂದಿದ್ದ ನಟಿಗೆ ಈಗ ಮತ್ತೆ ಆತಂಕ ಶುರುವಾಗಿದೆ. ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿಕೆ ನೀಡಿದ್ದಾರೆ. ಅದೇನು ಅಂತ ನೋಡುವುದಾದರೇ.

ಡ್ರಗ್ ಕೇಸ್ ನಟಿ ಸಂಜನಾ ಗಲ್ರಾನಿಯನ್ನು ಬಿಡುವಂತೆ ಕಾಣಿಸುತ್ತಿಲ್ಲ. ಹೈಕೋರ್ಟ್‌ನಲ್ಲಿ ಪ್ರಕರಣ ವಜಾ ಆದ ಬಳಿಕ ಸಂಜನಾ ತಮ್ಮ ವಿರುದ್ಧ ದಾಖಲಾಗಿದ್ದ ಕೇಸ್‌ಗಳ ಬಗ್ಗೆ ಹೇಳಿಕೆಗಳನ್ನು ಕೊಟ್ಟಿದ್ದರು. ತಮಗೂ ಈ ಡ್ರಗ್ ಕೇಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಪ್ರಕರಣ ವಜಾ ಆಗುತ್ತಿದ್ದಂತೆ ಕೆಲವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.

ಆದ್ರೀಗ ಸಂಜನಾ ಗಲ್ರಾನಿಗೆ ಮತ್ತೆ ಅದೇ ಪ್ರಕರಣ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಯಿದೆ. ಅದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ನೀಡಿದ ಹೇಳಿಕೆಯೇ ಕಾರಣ. "ಸಂಜನಾ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಸಭೆ ಮಾಡಿ, ಅರ್ಜಿ ರೆಡಿ ಮಾಡಿಟ್ಟುಕೊಳ್ಳಲಾಗಿದೆ. ಪ್ರಾಸಿಕ್ಯೂಷನ್‌ನಿಂದ ಅನುಮತಿ ಬರುತ್ತಿದ್ದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದಾರೆ.

CCB police appeal to the supreme court on the Sanjjana Galrani case challenging the high court order

ಈ ಹಿಂದೆ ಸಂಜನಾ ಗಲ್ರಾನಿ ಫಿಲ್ಮಿಬೀಟ್‌ ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಆಗ "ಮೂರು ನಾಲ್ಕು ತಿಂಗಳು ಬರೀ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಹರಿದಾಡುತ್ತಿತ್ತು. ಎಲ್ಲೇ ಹೋದರೂ ಜನರು ತಪ್ಪು ಕಣ್ಣುಗಳಿಂದಲೇ ನೋಡುತ್ತಿದ್ದರು. ಇವರ ಮೇಲೆ ಕೇಸ್ ಇದೆ. ಇವರು ಅಪರಾಧಿ ಅಂತ ನೋಡುತ್ತಿದ್ದರು. ನಮ್ಮ ಭಾರತದಲ್ಲಿ ಇವರು ಜೈಲಿಗೆ ಹೋಗಿ ಬಂದರೆ, ಇವರು ಅಪರಾಧಿ ಅಂತ ಡಿಕ್ಲೇರ್ ಮಾಡಿಬಿಡುತ್ತಾರೆ. ಆರೋಪಿ ಹಾಗೂ ಅಪರಾಧಿ ಮಧ್ಯೆ ಜನರಿಗೆ ವ್ಯತ್ಯಾಸ ಗೊತ್ತಿಲ್ಲ." ಎಂದು ಸಂಜನಾ ಫಿಲ್ಮಿಬೀಟ್ ಜೊತೆ ಅಳಲು ತೋಡಿಕೊಂಡಿದ್ದರು.

ಇನ್ನು ಸಂಜನಾ ಗಲ್ರಾನಿಯ ಪ್ರಕರಣ ಏನು ಅಂತ ನೋಡುವುದಾರೇ, ನಟಿ ಸಂಜನಾ ಗಲ್ರಾನಿಯನ್ನು ಡ್ರಗ್ ಪ್ರಕರಣದ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ 8 ರಂದು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದ್ದರಿಂದ ಪರಪ್ಪರ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಸುಮಾರು ಮೂರು ತಿಂಗಳ ಬಳಿಕ 2020 ಡಿಸೆಂಬರ್ 11 ರಂದು ಕರ್ನಾಟಕದ ಹೈಕೋರ್ಟ್‌ ಸಂಜನಾ ಗಲ್ರಾನಿಗೆ ಜಾಮೀನು ನೀಡಿತ್ತು.

ಸಂಜನಾ ಗಲ್ರಾನಿಗೂ ಜೈಲಿನಲ್ಲಿ ಇರುವಾಗ ಅನಾರೋಗ್ಯ ಕಾರಣವನ್ನು ನೀಡಿ ಜಾಮೀನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಆಗಿತ್ತು. ಆ ನಂತರ ಸಂಜನಾ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಕೂಡ ಸಂಜನಾ ಮೇಲಿನ ಪ್ರಕರಣವನ್ನು ರದ್ದುಗೊಳಿಸಿತ್ತು. ಈಗ ಸಿಸಿಬಿ ಪೊಲೀಸರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಪ್ರಕರಣದಲ್ಲೂ ಕೂಡ ಇದೇ ಆಗಿದೆ.

More from Filmibeat

English summary
CCB police appeal to the supreme court on the Sanjjana Galrani case, challenging the high court order
Read more about: sanjjana galrani actress court
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X