CCL 2023: ಪಂಜಾಬ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್‌ಗೆ ಭರ್ಜರಿ ಜಯ: ಬೆಸ್ಟ್ ಬೌಲರ್, ಬ್ಯಾಟ್ಸ್‌ಮನ್ ಯಾರು?
ಸೆಲೆಬ್ರೆಟಿ ಕ್ರಿಕೆಟ್ ಲೀಗ್ 2023 ಅದ್ಧೂರಿಯಾಗಿ ಆರಂಭ ಆಗಿತ್ತು. ಕಳೆದ ತಿಂಗಳು ಫೆಬ್ರವರಿ 18ರಂದು ಆರಂಭ ಆದ ಪಂದ್ಯಗಳು ಇನ್ನು ನಡೆಯುತ್ತಿದೆ. ಮಾರ್ಚ್ 19ರಂದು ಸಿಸಿಎಲ್ 2023 ಫೈನಲ್ ಪಂದ್ಯಗಳು ನಡೆಯಲಿವೆ. 8 ತಂಡಗಳು ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಿವೆ.
ನಿನ್ನೆ (ಮಾರ್ಚ್ 11) ಪಂಜಾಬ್ ದಿ ಶೇರ್ ಹಾಗೂ ಕರ್ನಾಟಕ ಬುಲ್ಡೋಜರ್ ತಂಡದ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಪಂಜಾಬ್ ಅನ್ನು ಮಣಿಸಿ ಅಗ್ರಸ್ಥಾನಕ್ಕೇರಿದೆ. ಜೋದ್‌ಪುರದ ಬರ್ಕತುಲ್ಲಾ ಖಾನ್ ಸ್ಟೇಡಿಯಂನಲ್ಲಿ ಈ ಸಿಸಿಎಲ್ 2023 ಕ್ರಿಕೆಟ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ನೀಡಿದೆ.

ಮೊದಲನೇ ಇನ್ನಿಂಗ್ಸ್ ಹೇಗಿತ್ತು?
ಟಾಸ್ ಗೆದ್ದಿದ್ದ ಪಂಜಾಬ್ ದಿ ಶೇರ್ ತಂಡ ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 80 ರನ್‌ಗಳನ್ನು ಪಂಜಾಬ್ ತಂಡ ಕಲೆಹಾಕಿತ್ತು. ಪಂಜಾಬ್ ಪರ ದೇವ್ ಖರೊಡ್ ಗರಿಷ್ಠ 20 ರನ್‌ಗಳನ್ನು ಬಾರಿಸಿದ್ರೆ, ಅಮಿತ್ ಬಲ್ಲ ಹಾಗೂ ಹಾರ್ಡಿ ಸಂಧು ಕ್ರಮವಾಗಿ 19 ಹಾಗೂ 15 ರನ್‌ಗಳನ್ನು ಕಬಳಿಸಿದ್ರು. ಕರ್ನಾಟಕ ಬುಲ್ಡೋಜರ್ಸ್ ಪರ ಕಾರ್ತಿಕ್, ಪ್ರದೀಪ್, ಸುನೀಲ್ ರಾವ್ ತಲಾ ಒಂದು ವಿಕೆಟ್ ಪಡೆದರೆ, ಆರ್ಯನ್ 2 ವಿಕೆಟ್ ಸಿಕ್ಕಿತ್ತು.
ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರರು ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮೊತ್ತ ಕಲೆಹಾಕಿದ್ರು. ಡಾರ್ಲಿಂಗ್ ಕೃಷ್ಣ 16 ಎಸೆತಗಳಲ್ಲಿ 39, ಪ್ರದೀಪ್ 29 ಎಸೆತಗಳಲ್ಲಿ 50, ರಾಜೀವ್ 9 ಎಸೆತಗಳಲ್ಲಿ 33 ರನ್, ನಿರೂಪ್ ಭಂಡಾರಿ 10 ಬಾರಿಸಿ, 140 ರನ್ ಕಲೆ ಹಾಕಿದ್ರು. ಪಂಜಾಬ್ ಪರ ಅಜಿತ್ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದ್ರು.
ಎರಡನೇ ಇನ್ನಿಂಗ್ಸ್ ಹೇಗಿತ್ತು?
ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಪಂಜಾಬ್ ದಿ ಶೇರ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಲ ಪೈಪೋಟಿ ನೀಡಿದ್ರು. ಪಂಜಾಬ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಹಾರ್ಡಿ ಸಂಧು 25 ಎಸೆತಗಳಲ್ಲಿ 43 ರನ್ ಗಳಿಸಿದ್ರು. ಅನುಜ್ ಖುರಾನಾ 21, ಸುಯ್ಯಾಂಶ್ ರೈ 12 ರನ್ ಗಳಿಸಿ, 100 ರನ್‌ಗಳನ್ನು ಕೆಲ ಹಾಕುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಪರ ಸುನೀಲ್ ರಾವ್ ಮಿಂಚಿನ ದಾಳಿ ನಡೆಸಿ, ಎರಡು ಓವರ್‌ಗಳಲ್ಲಿ ಕೇವಲ 5 ನೀಡಿ, 2 ವಿಕೆಟ್ ಪಡೆದರು. ನಿರೂಪ್ ಭಂಡಾರಿಗೆ 2, ಕಾರ್ತಿಕ್,ಕುಮಾರ್,ಕೃಷ್ಣಗೆ ತಲಾ 1 ವಿಕೆಟ್ ಪಡೆದುಕೊಂಡ್ರು,
ಕರ್ನಾಟಕಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 41 ರನ್‌ಗಳ ಟಾರ್ಗೆಟ್ ಇತ್ತು. ರಾಜೀವ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಇಳಿದಿದ್ದರು. ರಾಜೀವ್ 28 ರನ್ ಗಳಿಸಿದ್ರೆ, ಸುದೀಪ್ 3, ಜಯರಾಂ 6, ಅರುಣ್ 4 ಗಳಿಸಿ ಪಂಜಾಬ್ ವಿರುದ್ಧ ಜಯಭೇರಿ ಬಾರಿಸಿದ್ರು.
ಬೆಸ್ಟ್ ಬೌಲರ್, ಮ್ಯಾನ್ ಆಫ್ ಮ್ಯಾಚ್ ಯಾರು?
ಕರ್ನಾಟಕ ಬುಲ್ಡೋಜರ್ ತಂಡ ಅದ್ಧೂರಿ ಪ್ರದರ್ಶನ ನೀಡಿತ್ತು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸುನೀಲ್ ರಾವ್ ಬೆಸ್ಟ್ ಬೌಲರ್ ಎನಿಸಿಕೊಂಡಿದ್ರೆ, ತಂಡದ ನಾಯಕ ಪ್ರದೀಪ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡರು. ಹಾಗೇ ಪಂಜಾಬ್ ತಂಡದ ಪರ ಹಾರ್ಡಿ ಸಂಧು ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡರು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಪಾಯಿಂಟ್ಸ್ ಟೆಬಲ್‌ನಲ್ಲಿ ಟಾಪ್‌ನಲ್ಲಿದೆ. ಇದೂವರೆಗೂ ಬೋಜ್ಪಪುರಿ ತಂಡ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲೂ ಸೋಲದೆ ಟಾಪ್‌ನಲ್ಲಿತ್ತು. ಈಗ ಕರ್ನಾಟಕ ರನ್ ರೇಟ್ ಆಧಾರದ ಮೇಲೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಬೋಜ್ಪುರಿ ತಂಡವಿದೆ. ಮೂರನೇ ಸ್ಥಾನದಲ್ಲಿ ತೆಲುಗು ವಾರಿಯರ್ಸ್ ಇದೆ.


Click it and Unblock the Notifications











