CCL 2023: ಚಿನ್ನಸ್ವಾಮಿಯಲ್ಲಿ ಕರ್ನಾಟಕ ಬುಲ್ಡೋಜರ್ Vs ಚೆನ್ನೈ ರೈನೋಸ್ ಪಂದ್ಯ: ಹೈಲೈಟ್ಸ್ ಏನು?
ಸಿನಿಮಾ ಸೆಲೆಬ್ರೆಟಿಗಳು ಸದ್ಯ ಕ್ರಿಕೆಟ್ ಆಡುವ ಮೂಡಿನಲ್ಲಿದ್ದಾರೆ. ಇತ್ತೀಚೆಗಷ್ಟೇ 2023ನೇ ಸಾಲಿನ KCC ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈಗ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಕಡೆಗೆ ಎಲ್ಲರೂ ಮುಖ ಮಾಡಿದ್ದಾರೆ. ವಾರಾಂತ್ಯದಲ್ಲಿ ನಡೆಯುವ ಈ ಪಂದ್ಯಾವಳಿಗಳನ್ನು ನೋಡಲು ಜನರು ಆಸಕ್ತಿ ತೋರುತ್ತಿದ್ದಾರೆ. ಈ ಸೀಸನ್‌ನಲ್ಲಿ CCL ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಪಂದ್ಯವನ್ನು ನಡೆಸುತ್ತಿದೆ. ಅದಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ಎರಡು ವಾರಗಳಿಂದ ನಡೆದ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ಪಂದ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮೂರನೇ ವೀಕೆಂಡ್‌ನಲ್ಲಿ ಹೈ ವೋಲ್ಟೇಜ್ ಪಂದ್ಯಗಳು ನಡೆಯಲಿವೆ. ವಿಶೇಷ ಅಂದ್ರೆ, ಶನಿವಾರ (ಮಾರ್ಚ್ 4) ಹಾಗೂ ಭಾನುವಾರ (ಮಾರ್ಚ್ 5) ಈ ಎರಡೂ ದಿನಗಳು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ಸಿಸಿಎಲ್‌ನ ರೋಚಕ ಪಂದ್ಯಗಳಿಗೆ ಸಜ್ಜಾಗಿದೆ.

ಶನಿವಾರ ಮಾರ್ಚ್ 4 ರಂದು ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಸಿಸಿಎಲ್ ಪಂದ್ಯಗಳೂ ಬಲು ರೋಚಕ. ಸಿಸಿಎಲ್ ತಂಡಗಳ ಪಟ್ಟಿಯಲ್ಲಿ ಅಗ್ರ ಕ್ರಮಾಂಕಕ್ಕೆ ತಲುಪಲು ತೆಲುಗು ವಾರಿಯರ್ಸ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಕ್ರಮವಾಗಿ ಒಂದೊಂದು ಪಂದ್ಯಗಳನ್ನು ಬೇರೆ ಬೇರೆ ತಂಡದ ಜೊತೆ ಆಡಲಿವೆ. ಈ ಎರಡು ಪಂದ್ಯಗಳಲ್ಲಿ ಯಾರೇ ಗೆದ್ದರೂ, ತಂಡಗಳ ಪಟ್ಟಿಯಲ್ಲಿ ನಂ 1 ಸ್ಥಾನಕ್ಕೆ ಏರುತ್ತಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಪಂದ್ಯಗಳು ಜೈಪುರದಿಂದ ಬೆಂಗಳೂರಿಗೆ ಶಿಫ್ಟ್ ಆಗಿವೆ. ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಗೆ ರೋಮಾಂಚನಕಾರಿ ಪಂದ್ಯಗಳು ಸಿಗಲಿವೆ. ರಾಯಪುರ ಮತ್ತು ಜೈಪುರದಲ್ಲಿ 2 ವಾರಗಳ ಯಶಸ್ವಿ ಜರುಗಿದ ಬಳಿಕ ಬೆಂಗಳೂರಿನಲ್ಲಿ ಪಂಜಾಬ್ ದಿ ಶೇರ್ ಮತ್ತು ತೆಲುಗು ವಾರಿಯರ್ಸ್ ನಡುವೆ ಶನಿವಾರ (ಮಾರ್ಚ್ 4) ಮೊದಲ ಪಂದ್ಯ ನಡೆಯಲಿದೆ. ಮಧ್ಯಾಹ್ನ 2:30 ರಿಂದ 6:30 ರವರೆಗೆ ಈ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ ಕೊಡಲಿದೆ.
ಕರ್ನಾಟಕ ಪಂದ್ಯದ ಟಿಕೆಟ್‌ಗೆ ಬೇಡಿಕೆ
ಮೊದಲ ಪಂದ್ಯದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಆರಂಭ ಆಗಲಿದೆ. ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಸಂಜೆ 7:00 ರಿಂದ 11:00 ರವರೆಗೆ ಹಣಾಹಣಿ ನಡೆಯಲಿದೆ. ಈ ಪಂದ್ಯ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ವೀಕೆಂಡ್‌ನಲ್ಲಿ ಮ್ಯಾಚ್ ನೋಡಲು ಬೆಂಗಳೂರು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.
ಸಿಸಿಎಲ್ 2023 ಬೆಂಗಳೂರು ಪಂದ್ಯಗಳಿಗೆ ಕರ್ನಾಟಕ ಬುಲ್ಡೋಜರ್ ತಂಡದ ನಾಯಕ ಕಿಚ್ಚ ಸುದೀಪ್, ಚೆನ್ನೈ ರೈನೋಸ್ ತಂಡದ ನಾಯಕ ಆರ್ಯ, ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ, ಪಂಜಾಬ್ ದಿ ಶೇರ್ ತಂಡದ ನಾಯಕ ಸೋನು ಸೂದ್ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿಯ ಕೆಲವು ಪ್ರಮುಖ ನಟರು ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ತೆಲುಗು ಸೂಪರ್‌ಸ್ಟಾರ್ ವಿಕ್ಟರಿ ವೆಂಕಟೇಶ್ ಪ್ರಮುಖ ಆಕರ್ಷಣೆ. ಇವರೊಂದಿಗೆ ರೆಜಿನಾ ಕಸ್ಸಾಂಡ್ರಾ, ಪ್ರಣೀತಾ ಸುಭಾಷ್, ಅದಾ ಶರ್ಮಾ ಮತ್ತು ಇನ್ನೂ ನಟಿಯರು ರಾಯಬಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಂ 1 ತಂಡಕ್ಕಾಗಿ ಕರ್ನಾಟಕ ಬುಲ್ಡೋಜರ್ ಫೈಟ್
ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ ತಂಡ ನಂ 1 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಈಗಾಗಲೇ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿವೆ. ರನ್ ರೇಟ್‌ನಲ್ಲಿ ತೆಲುಗು ವಾರಿಯರ್ಸ್ ಮುಂದಿದ್ದು, ಕರ್ನಾಟಕ ಬುಲ್ಡೋಜರ್ಸ್ ಹಿಂದಿದೆ. ಹೀಗಾಗಿ ಮೂರನೇ ಪಂದ್ಯ ಭಾರಿ ಅಂತರದಿಂದ ಗೆಲ್ಲಲೇಬೇಕಿದೆ. ಈ ಎರಡು ತಂಡಗಳೊಂದಿಗೆ ಬೋಜ್‌ಪುರಿ ದಬಾಂಗ್ಸ್ ತಂಡ ಕೂಡ ಎರಡೂ ಪಂದ್ಯಗಳನ್ನು ಗೆದ್ದು ಪೈಪೋಟಿ ನೀಡುತ್ತಿದೆ. ಇದೂವರೆಗೂ ನಡೆದಿರೋ ಪಂದ್ಯ ಪಾಯಿಂಟ್ಸ್ ಟೇಬಲ್ ಇಲ್ಲಿದೆ.

ಇನ್ನು ಈ ಭಾರಿ ನಟ-ನಿರ್ಮಾಪಕ ಮುಂಬೈ ಹೀರೋಸ್ ನಾಯಕನಾಗಿ ರಿತೇಶ್ ದೇಶ್‌ಮುಖ್ , ಪಂಜಾಬ್ ಡಿ ಶೇರ್ ತಂಡದ ನಾಯಕನಾಗಿ ನಟ ಸೋನು ಸೂದ್, ಭೋಜ್ಪುರಿ ದಬಾಂಗ್ಸ್ ನಾಯಕ ನಟ ಮನೋಜ್ ತಿವಾರಿ, ಬಂಗಾಳ ಟೈಗರ್ಸ್‌ನ ನಾಯಕ ಜಿಶು ಸೇನು ಗುಪ್ತಾ, ಕರ್ನಾಟಕ ಬುಲ್ಡೋಜರ್ಸ್ ನಾಯಕ ನಟ ಪ್ರದೀಪ್, ತೆಲುಗು ವಾರಿಯರ್ಸ್ ನಾಯಕ ನಟ ಅಖಿಲ್ ಅಕ್ಕಿನೇನಿ, ಕೇರಳ ಸ್ಟ್ರೈಕರ್ಸ್ ನಾಯಕ ಕುಂಚಾಕೊ ಬೋಬನ್ ಮತ್ತು ಚೆನ್ನೈ ರೈನೋಸ್ ತಂಡದ ನಾಯಕ ಆರ್ಯ ಸಿಸಿಎಲ್‌ನಲ್ಲಿ ತಮ್ಮ ತಂಡವನ್ನು ಮುನ್ನೆಡೆಸುತ್ತಿದ್ದಾರೆ.


Click it and Unblock the Notifications











