CCL 2023: ಮುಂದಿನ ಸಿಸಿಎಲ್ ಮ್ಯಾಚ್ ಎಲ್ಲೆಲ್ಲಿ ನಡೆಯುತ್ತೆ? ಕರ್ನಾಟಕ ಬುಲ್ಡೋಜರ್ಸ್ ಯಾವ ಸ್ಥಾನದಲ್ಲಿದೆ?
ಸಿನಿಮಾರಂಗದಲ್ಲೂ ಈಗ ಸೆಲೆಬ್ರೆಟಿ ಕ್ರಿಕೆಟ್ ಜ್ವರ ಜೋರಾಗಿದೆ. ಒಂದ್ಕಡೆ ಸಿಸಿಎಲ್ ಆದರೆ, ಇನ್ನೊಂದು ಕಡೆ ಕೆಸಿಸಿ ಪಂದ್ಯಾವಳಿಗಳು ನಡೆಯಲಿವೆ. ಈಗಾಗಲೇ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಿಸಿಎಲ್ ಮತ್ತೆ ಆರಂಭ ಆಗಿದೆ. ಈಗಾಗಲೇ ಕಳೆದ ಶನಿವಾರ ಹಾಗೂ ಭಾನುವಾರ ಪಂದ್ಯಗಳು ಪಂದ್ಯಗಳು ನಡೆದಿವೆ.
ಭಾರತೀಯ ಚಿತ್ರರಂಗದ ಎಂಟು ತಂಡಗಳು ಈ ಸಿಸಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. 2023ರ ಸಿಸಿಎಲ್ ಕಪ್ ಅನ್ನು ಗೆಲ್ಲವು ಎಂಟೂ ತಂಡಗಳು ಅಖಾಡಕ್ಕೆ ಇಳಿದಿವೆ. ಕ್ರಿಕೆಟ್ ಜೊತೆ ಜೊತೆಗೆ ಮನರಂಜನೆಯನ್ನೂ ನೀಡುವ ಈ ಲೀಗ್ 2011ರಲ್ಲಿ ಶುರುವಾಗಿತ್ತು. ಭಾರತದ ಪ್ರಮುಖ ಚಿತ್ರರಂಗದ ಕಲಾವಿದರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಇದಾಗಿತ್ತು. ಕೋವಿಡ್ ಕಾರಣದಿಂದ ಈ ಲೀಗ್ ಕೆಲವು ದಿನಗಳು ನಿಂತಿತ್ತು. ಈಗ ಮತ್ತೆ ಆರಂಭ ಆಗಿದೆ.
2023 ಸಾಲಿನ ಸಿಸಿಎಲ್ ಈಗಾಗಲೇ ಶುರುವಾಗಿದೆ. ನಿರಂತರವಾಗಿ ಮುಂದಿನ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ತಾರೆಯರು ಮೈದಾನಕ್ಕಿಳಿದು ಕ್ರಿಕೆಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಬಾರಿ ಯಾವ ತಂಡ ಅಖಾಡಕ್ಕಿಳಿದಿದೆ? ಕರ್ನಾಟಕ ಬುಲ್ಡೋಜರ್ ಯಾವ ಸ್ಥಾನದಲ್ಲಿದೆ? ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಮುಂದಿನ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

8 ತಂಡಗಳು.. 19 ಪಂದ್ಯ
2023 ಸಿಸಿಎಲ್‌ನಲ್ಲಿ ಮುಂಬೈ ಹೀರೋಸ್, ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರಿನೋಸ್, ತೆಲುಗು ವಾರಿಯರ್ಸ್, ಕೆರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ದೇ ಶೇರ್,ಭೋಜ್ಪುರಿ ದಬಾಂಗ್ಸ್ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಈ ಎಂಟೂ ತಂಡಗಳು ಪ್ರತಿ ಶನಿವಾರ ಹಾಗೂ ಭಾನುವಾರ ಸುಮಾರು ಒಟ್ಟು 19 ಪಂದ್ಯಗಳನ್ನು ಆಡುತ್ತಿದೆ. ಫೈನಲ್ ಪಂದ್ಯ ಮಾರ್ಚ್ 19ರಂದು ನಡೆಯಲಿದೆ. ಸುದೀಪ್, ಸೊಹೇಲ್ ಖಾನ್, ರಿತೇಶ್ ದೇಶ್‌ಮುಖ್, ಸುನೀಲ್ ಶೆಟ್ಟಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಭಾರತೀಯ ಚಿತ್ರರಂಗ ದಿಗ್ಗಜರು ಅಖಾಡಕ್ಕಿಳಿದು ಬ್ಯಾಟ್ ಬೀಸುತ್ತಿದ್ದಾರೆ.

ಕರ್ನಾಟಕ ಬುಲ್ಡೋಜರ್ ಯಾವ ಸ್ಥಾನದಲ್ಲದೆ?
ಈಗಾಗಲೇ ಎರಡು ದಿನಗಳ ಕಾಲ ಸಿಸಿಎಲ್ 2023 ಪಂದ್ಯಗಳು ನಡೆದಿವೆ. ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್,ಚೆನ್ನೈ ರಿನೋಸ್ ಹಾಗೂ ಮುಂಬೈ ಹೀರೋಸ್ ಮಧ್ಯೆ ಪಂದ್ಯಗಳು ನಡೆದಿವೆ. ಇದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರಿನೋಸ್ ತಂಡಗಳು ತಲಾ ಒಂದೊಂದು ಪಂದ್ಯಗಳು ಗೆದ್ದಿವೆ. ಯಾವ್ಯಾವ ತಂಡಕ್ಕೆ ಎಷ್ಟೆಷ್ಟು ಪಾಯಿಂಟ್ಸ್ ಸಿಕ್ಕಿದೆ? ಅನ್ನೋದರ ಪಟ್ಟಿ ಇಲ್ಲಿದೆ.

ಎಲ್ಲೆಲ್ಲಿ ಸಿಸಿಎಲ್ ಪಂದ್ಯ ನಡೆಯುತ್ತೆ?
ಈ ಬಾರಿ ಸಿಸಿಎಲ್ ಪಂದ್ಯಾವಳಿಗಳು ಜೈಪುರ, ಹೈದರಾಬಾದ್, ರಾಯ್‌ಪುರ,ಜೋದ್‌ಪುರ, ಬೆಂಗಳೂರು ಹಾಗೂ ತಿರುವನಂತಪುರಂನಲ್ಲಿ ನಡೆಯಲಿದೆ. ಫೆಬ್ರವರಿ 18 ಹಾಗೂ 19ರಂದು ನಾಲ್ಕು ಪಂದ್ಯಗಳು ನಡೆದಿವೆ. ಹಾಗೇ ಫೆಬ್ರವರಿ 25 ಹಾಗೂ 26ರಂದು ನಾಲ್ಕು ಪಂದ್ಯಗಳು, ಮಾರ್ಚ್ 4 ಹಾಗೂ 5ರಂದು ನಾಲ್ಕು ಪಂದ್ಯ, ಮಾರ್ಚ್ 11 ಹಾಗೂ 12 ನಾಲ್ಕು ಪಂದ್ಯ, ಮಾರ್ಚ್ 18ರಂದು ಎರಡು ಸೆಮಿಫೈನಲ್ ಪಂದ್ಯಗಳು ಹಾಗೂ 19ರಂದು ಫೈನಲ್ ಪಂದ್ಯ ನಡೆಯಲಿದೆ.

ಸಿಸಿಎಲ್ 2023 ಗೆಲ್ಲುತ್ತಾ ಕರ್ನಾಟಕ?
ಕರ್ನಾಟಕ ಬುಲ್ಡೋಜರ್ ಮೊದಲ ಪಂದ್ಯವನ್ನೇ ಗೆದ್ದು ಬೀಗಿದೆ. ಕಿಚ್ಚ ಸುದೀಪ್, ಗಣೇಶ್, ಲವ್ ಮಾಕ್ಟೇಲ್ ಕೃಷ್ಣ, ನಿರೂಪ್ ಭಂಡಾರಿ, ಪ್ರದೀಪ್, ರಾಜೀವ ಸೇರಿದಂತೆ ಬಲಿಷ್ಠ ತಂಡವಿದೆ. ಕರ್ನಾಟಕ ತಂಡಕ್ಕೆ ತೆಲುಗು ವಾರಿಯರ್ಸ್ ಹಾಗೂ ಚೆನ್ಣೈ ತಂಡ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಈ ಮೂರು ತಂಡಗಳ ನಡುವೆ ಪೈಪೋಟಿ ಬೀಳುವ ಸಾಧ್ಯತೆಯಿದೆ.


Click it and Unblock the Notifications











