IPL ಆರಂಭಕ್ಕೂ ಧೂಳೆಬ್ಬಿಸಿದ CCL;ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ Vs ಬೆಂಗಾಲ್ ಟೈಗರ್

ಇನ್ನೇನು ಕೆಲವು ದಿನಗಳಲ್ಲಿ ಐಪಿಎಲ್ ಪಂದ್ಯಾವಳಿಗಳು ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL) ಪಂದ್ಯಗಳೂ ಕೊನೆಯ ಹಂತಕ್ಕೆ ತಲುಪಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಸಿಸಿಎಲ್ ಪಂದ್ಯವಳಿಯನ್ನು ಮುಗಿಸಲೇಬೇಕಾದ ಅನಿವಾರ್ಯತೆಯಿದೆ. ಈಗಾಗಲೇ ಈ ಪಂದ್ಯಾವಳಿಗಳು ಕೊನೆಯ ಹಂತದ ತಲುಪಿದ್ದು, ಕ್ವಾಲಿಫೈಯರ್ ಹಂತ ತಲುಪಿದೆ.

ಈ ಬಾರಿಯ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಸುಮಾರು 8 ಸಿನಿಮಾ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ನಾಲ್ಕು ತಂಡಗಳು ಕ್ವಾಲಿಫೈಯರ್ ಹಂತಕ್ಕೆ ತಲುಪಿದೆ. ಇಂದಿನಿಂದ (ಮಾರ್ಚ್ 15) ಸಿಸಿಎಲ್ ಕ್ವಾಲಿಫೈಯರ್ ಪಂದ್ಯಾವಳಿಗಳು ಆರಂಭ ಆಗುತ್ತಿವೆ. 2024ರ ಸಿಸಿಎಲ್ ಅಂಕ ಪಟ್ಟಿಯಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಟಾಪ್ ಸ್ಥಾನದಲ್ಲಿದೆ. ಇಂದು (ಮಾರ್ಚ್ 15) ಕ್ವಾಲಿಫೈಯರ್ ಪಂದ್ಯಗಳು ಆರಂಭ ಆಗಿದ್ದು, ಕರ್ನಾಟಕ ಬುಲ್ಡೋಜರ್ ಟೀಮ್ ಜೊತೆ ಬೆಂಗಾಲ್ ಟೈಗರ್ ತಂಡ ಸೆಣೆಸಾಡಲಿದೆ.

CCL 2024 Qualifier Match Karnataka Bulldozers Vs Bengal Tigers here is details

ಕರ್ನಾಟಕ ಬುಲ್ಡೋಜರ್ ತಂಡ ಹಾಗೂ ಬೆಂಗಾಲ್ ಟೈಗರ್ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿವೆ. ಎರಡೂ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದು, ಒಂದರಲ್ಲಿ ಸೋಲು ಕಂಡಿವೆ. ಸದ್ಯ ಕರ್ನಾಟಕ ಬುಲ್ಡೋಜರ್ ಅಂಕ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದು, ಕಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ ಪಂದ್ಯ ಗೆದ್ದರೆ ಆರಾಮಾಗಿ ಫೈನಲ್ ಹೋಗಲಿದೆ. ಹಾಗೇ ಬೆಂಗಾಲ್ ಟೈಗರ್ ಗೆದ್ದರೂ ಕೂಡ ಫೈನಲ್ ತಲುಪಲಿದೆ.

ಕರ್ನಾಟಕ ಬುಲ್ಡೋಜರ್ ತಂಡ ಇದೂವರೆಗೂ ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಇದೂವರೆಗೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ ಆಟಗಾರರು ಅದ್ಭುತವಾಗಿ ಆಡಿದ್ದಾರೆ. ಹೀಗಾಗಿ ಇಂದಿನ (ಮಾರ್ಚ್ 15) ಪಂದ್ಯದಲ್ಲಿ ಕರ್ನಾಟಕ ಬಲ್ಡೋಜರ್ ತಂಡ ಗೆದ್ದು ಫೈನಲ್ ತಲುಪುವ ಎಲ್ಲಾ ಸಾಧ್ಯತೆಗಳಿವೆ.

CCL 2024 Qualifier Match Karnataka Bulldozers Vs Bengal Tigers here is details

ಕರ್ನಾಟಕ ಬುಲ್ಡೋಜರ್ ಹಾಗೂ ಬೆಂಗಾಲ್ ಟೈಗರ್ ನಡುವಿನ ಇಂದಿನ ಪಂದ್ಯ ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಮಾರ್ಚ್ 15ರಂದು ಸಂಜೆ ಸರಿ ಸುಮಾರು 6.30ಕ್ಕೆ ನಡೆಯಲಿದೆ. ಈ ಪಂದ್ಯವನ್ನು ಜಿಯೋ ಸಿನಿಮಾ ಓಟಿಟಿ ವೇದಿಕೆಯಲ್ಲಿ ನೋಡಬಹುದಾಗಿದೆ. ಇದರೊಂದಿಗೆ ಸೋನಿ ಸ್ಪೋರ್ಟ್ಸ್ ಟೆನ್ 5, ಸುವರ್ಣ ಪ್ಲಸ್ (ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳು) ನಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಜಯ್ ಸೂಪರ್ ಪ್ಲಸ್ (ಚೆನ್ನೈ ರೈನೋಸ್ ಪಂದ್ಯಗಳು) ಮತ್ತು ಡಿಡಿ ಸ್ಪೋರ್ಟ್ಸ್ (ಹಿಂದಿ), ಪ್ರಸಾರ ಮಾಡುತ್ತಿದೆ.

ಅಂದಹಾಗೆ, ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡ ಎಲಿಮಿನೆಟರಿ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಆಡುವ ಅವಕಾಶಗಳನ್ನು ಪಡೆದುಕೊಳ್ಳಲಿದೆ. ಅಲ್ಲಿ ಗೆದ್ದರೆ ಎರಡನೇ ಕ್ವಾಲಿಫೈಯರ್ 2ರ ಮೂಲಕ ಫೈನಲ್‌ಗೆ ಎಂಟ್ರಿ ಕೊಡುವುದಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಸದ್ಯ ಚೆನ್ನೈ ರೈನೋಸ್ ಮತ್ತು ಮುಂಬೈ ಹೀರೋಸ್ ನಡುವಿನ ಪಂದ್ಯದಲ್ಲಿ ಗೆದ್ದವರ ಮೇಲೆ ಕ್ವಾಲಿಫೈಯರ್ 1ರಲ್ಲಿ ಸೋತವರು ಸೆಣೆಸಾಡಲಿದ್ದಾರೆ.

ಮಾರ್ಚ್ 22ರಂದು ಐಪಿಎಲ್ ಆರಂಭ ಆಗಲಿದ್ದು, ಅಷ್ಟರೊಳಗೆ ಸಿಸಿಎಲ್ ಪಂದ್ಯಾವಳಿ ಮುಕ್ತಾಯ ಆಗಲಿದೆ. ಈ ಬಾರಿಯ ಸಿಸಿಎಲ್ ಪಂದ್ಯಗಳು ವೀಕ್ಷಕರಿಗೆ ಸಖತ್ ಮನರಂಜನೆ ನೀಡಿವೆ. ಹೀಗಾಗಿ 10ನೇ ಸೀಸನ್ ಐಪಿಎಲ್ ಪಂದ್ಯಗಳಂತೆ ಕ್ರೇಜ್ ಹುಟ್ಟಿಸಿದ್ದವು. ಸದ್ಯ ಕರ್ನಾಟಕ ಬುಲ್ಡೋಜರ್ ಪಂದ್ಯ ಗೆಲ್ಲುತ್ತಾ? ಗೆದ್ದು ಫೈನಲ್ ಪ್ರವೇಶ ಮಾಡುತ್ತಾ? ಸಿಸಿಎಲ್ 10ನೇ ಸೀಸನ್ ಗೆಲ್ಲುತ್ತಾ? ಅನ್ನುವ ಕುತೂಹಲ ಹುಟ್ಟಿದೆ.

More from Filmibeat

English summary
CCL 2024:Karnataka Bulldozers Vs Bengal Tigers match details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X