CCL 2025:ತೆಲುಗು ಟೀಂ ಸೋಲಿಸಿದ್ದಾಯ್ತು; ಚೆನ್ನೈ ರೈನೋಸ್-ಮುಂಬೈ ಹೀರೋಸ್ ಮೇಲೆ ಕಣ್ಣಿಟ್ಟ ಕರ್ನಾಟಕ ಬುಲ್ಡೋಜರ್ಸ್

ಸಿಸಿಎಲ್ 2025 (CCL) 11ನೇ ಸೀಸನ್ ಭರ್ಜರಿಯಾಗಿ ಆರಂಭ ಆಗಿದೆ. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವಿನ ರೋಚಕ ಪಂದ್ಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇಡೀ ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಪ್ರಬಲ ಎದುರಾಳಿಗಳ ಜೊತೆ ಮೈದಾನದಲ್ಲಿ ಸೆಣೆಸಾಡುವುದನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು.

ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಈ ಪಂದ್ಯ ನೋಡುವುದಕ್ಕೆ ಸುಮಾರು 30 ಸಾವಿರ ಮಂದಿ ಸೇರಿದ್ದರು. ಇದು ಸಿಸಿಎಲ್‌ಗೆ ಇದೂವರೆಗೂ ಸಿಕ್ಕಿರೋ ಅದ್ಭುತ ರೆಸ್ಪಾನ್ಸ್. ಕರ್ನಾಟಕ ತಂಡ ರೋಚಕ ಗೆಲುವಿನ ಬಳಿಕ ಈ ವಾರ ಕಿಚ್ಚ ಸುದೀಪ್ ತಂಡ ಎರಡು ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಆಡಲಿದೆ.

CCL 2025 Karnataka Buldozors practicing for next two matches with Chennai Rhinos and Mumbai Heroes

ಈ ಬಾರಿ ಶುಕ್ರವಾರದಿಂದಲೇ (ಫೆಬ್ರವರಿ 14) ಪಂದ್ಯಗಳು ಆರಂಭ ಆಗುತ್ತಿವೆ. ಕರ್ನಾಟಕ ಬುಲ್ಡೋಜರ್ ತಂಡ ಶುಕ್ರವಾರ ಹಾಗೂ ಭಾನುವಾರ ಎರಡು ಪಂದ್ಯಗಳನ್ನು ಆಡುತ್ತಿದೆ. ಶುಕ್ರವಾರ ಚೆನ್ನೈ ರೈನೋಸ್ ಜೊತೆ ಆಡಿದರೆ, ಶನಿವಾರ ಮುಂಬೈ ಹೀರೋಸ್ ಜೊತೆ ಹೈದರಾಬಾದ್‌ನಲ್ಲಿ ಸೆಣೆಸಾಡಲಿದೆ. ಈ ಎರಡೂ ಪಂದ್ಯಗಳು ರೋಚಕತೆಯಿಂದ ಕೂಡಿರುವುದರಿಂದ ಭರ್ಜರಿಯಾಗಿ ಅಭ್ಯಾಸ ಆರಂಭ ಆಗಿದೆ. ಕರ್ನಾಟಕ ತಂಡದ ಪ್ರಾಕ್ಟೀಸ್ ಹೇಗಿದೆ ಅನ್ನೋದನ್ನು ನೋಡುವುದಕ್ಕೆ ವಿಡಿಯೋ ನೋಡಿ.

ಕರ್ನಾಟಕ ಬುಲ್ಡೋಜರ್ ತಂಡ ಸಿಸಿಎಲ್ ಪಂದ್ಯಗಳು ಆರಂಭ ಆಗುವುದಕ್ಕೆ ಎರಡು ವಾರಗಳು ಇವೆ ಅನ್ನುವಾಗಲೇ ಅಭ್ಯಾಸವನ್ನು ಶುರುವಾಗಿದೆ. ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆಗಳು ಆಗಿವೆ. ಕಿಚ್ಚ ಸುದೀಪ್ ಗೇಮ್ ಪ್ಲ್ಯಾನ್ ಬದಲಾಯಿಸಿದ್ದಾರೆ. ಬ್ಯಾಟಿಂಗ್ ಆರ್ಡರ್ ಹಾಗೂ ಬೌಲಿಂಗ್ ಆರ್ಡರ್ ಬದಲಾಗಿದೆ. ಫೀಲ್ಡಿಂಗ್ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಫೀಲ್ಡಂಗ್‌ನಿಂದಾಗಿ ಪಂದ್ಯ ಕೈ ಚೆಲ್ಲುವಂತಾಗಿತ್ತು.

ಮೊದಲ ಪಂದ್ಯ ಗೆದ್ದ ಬೆನ್ನಲ್ಲೇ ಕರ್ನಾಟಕ ಬುಲ್ಡೋಜರ್ಸ್ ತಂಡ ರಿಲ್ಯಾಕ್ಸ್ ಆಗಿಲ್ಲ. ಮುಂದಿನ ಪಂದ್ಯಗಳಿಗೆ ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡ ಹೆಡ್ ಕೋಚ್ ರಿತೇಶ್ ಭಟ್ಕಳ್ ಆಟಗಾರರಿಗೆ ಭರ್ಜರಿ ಅಭ್ಯಾಸ ಮಾಡಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆನೆ ತಂಡಕ್ಕೆ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡಿಸುತ್ತಿದ್ದಾರೆ. ಅಲ್ಲದೆ ಕೆಲವು ಬ್ಯಾಟಿಂಗ್ ಟಿಪ್ಸ್‌ ಅನ್ನು ನೀಡುತ್ತಿದ್ದಾರೆ.

ತೆಲುಗು ವಾರಿಯರ್ಸ್ ಜೊತೆಗಿನ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಅದರಲ್ಲೂ ಡಾರ್ಲಿಂಗ್ ಕೃಷ್ಣ, ರಾಜೀವ್, ಕರಣ್ ಆರ್ಯನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಚೆನ್ನೈ ರೈನೋಸ್ ಆಗಿದ್ದರಿಂದ ಈ ಪಂದ್ಯವನ್ನು ಗೆಲ್ಲುವುದಕ್ಕೆ ಕಠಿಣ ಅಭ್ಯಾಸದಲ್ಲಿ ತೊಡಗಿದೆ ಕರ್ನಾಟಕ ಬುಲ್ಡೋಜರ್ಸ್ ತಂಡ.

ನೆಟ್‌ನಲ್ಲಿ ಪ್ರತಾಪ್ ನಾರಾಯಣ್ ಹಾಗೂ ಕರಣ್ ಆರ್ಯನ್ ಭರ್ಜರಿ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡಿದ್ದಾರೆ. ಈ ವಿಡಿಯೋಗಳನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಮುಂದಿನ ಪಂದ್ಯಗಳಲ್ಲಿ ವಿಕ್ರಮ್ ಹಾಗೂ ಪ್ರತಾಪ್ ನಾರಾಯಣ್ ಇಬ್ಬರೂ ಆಡಬೇಕು ಅಂತ ಬಯಸುತ್ತಿದ್ದಾರೆ. ಆದರೆ, ಕ್ಯಾಪ್ಟನ್ ಕಿಚ್ಚ ಸುದೀಪ್ ತಂತ್ರವೇನಿದೆಯೋ ಅದು ಶುಕ್ರವಾರ ತಿಳಿಯಲಿದೆ.

More from Filmibeat

English summary
The Karnataka Bulldozers are preparing for their next two matches in CCL 2025 against Chennai Rhinos and Mumbai Heroes
Read more about: ccl 2025 kichcha sudeep cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X