CCL 2025:ಯಾವ ತಂಡಕ್ಕೆ ಹೇಗಿದೆ ಕ್ರೇಜ್? ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಎಷ್ಟನೇ ಸ್ಥಾನ?
ಫೆಬ್ರವರಿ, ಮಾರ್ಚ್ ಬಂತು ಅಂದರೆ ದೇಶದಲ್ಲಿ ಕ್ರಿಕೆಟ್ ಜ್ವರ ಶುರುವಾಗಿಬಿಡುತ್ತೆ. ಒಂದ್ಕಡೆ ಐಪಿಎಲ್ ಮ್ಯಾಚ್‌ಗಳು ಶುರುವಾದರೆ, ಅದಕ್ಕೂ ಮೊದಲು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭ ಆಗುತ್ತೆ. ಭಾರತದ ಬೇರೆ ಬೇರೆ ಚಿತ್ರರಂಗದ ಸ್ಟಾರ್ ನಟರು ಈ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗಾಗಿ ಮೈದಾನಕ್ಕೆ ಇಳಿಯುತ್ತಾರೆ. ಕಳೆದ ಹಲವು ವರ್ಷಗಳಿಂದ ಸಿಸಿಎಲ್ ಪ್ರೇಕ್ಷಕರನ್ನು ರಂಜಿಸುತ್ತಲೇ ಇದೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಸಿಸಿಎಲ್ 2025 ಆರಂಭ ಆಗುತ್ತಿದೆ. ಅದಕ್ಕೆ ಬೇಕಿರು ಸಿದ್ಧತೆಗಳನ್ನು ಈಗಾಗಲೇ ತಂಡಗಳು ಮಾಡುತ್ತಿವೆ. ತಮ್ಮ ನೆಲದಲ್ಲಿ ಪ್ರಾಕ್ಟೀಸ್ ಮಾಡುವುದಕ್ಕೆ ಶುರು ಮಾಡಿವೆ. ಅದರಲ್ಲೂ ಕರ್ನಾಟಕ ಬುಲ್ಡೋಜರ್ ತಂಡ ಈಗಾಗಲೇ ಕಿಚ್ಚನ ನೇತೃತ್ವದಲ್ಲಿ ಪ್ರಾಕ್ಟೀಸ್ ಶುರು ಮಾಡಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿಗ್ಗಜರು ಕಿಚ್ಚನ ತಂಡಕ್ಕೆ ಮಾರ್ಗದರ್ಶನ ನೀಡುತ್ತಿವೆ.

ಸಿಸಿಎಲ್ ಪಂದ್ಯಗಳು ಯಾವ ಅಂತರಾಷ್ಟ್ರೀಯ ಮ್ಯಾಚ್‌ಗಳಿಗೂ ಕಮ್ಮಿಯಿರುವುದಿಲ್ಲ. ಇಲ್ಲೂ ಎದುರಾಳಿ ತಂಡಗಳಿವೆ. ಹೈ ವೋಲ್ಟೇಜ್ ಪಂದ್ಯಗಳು ನಡೆಯುತ್ತವೆ. ಸ್ಟಾರ್‌ಗಳ ಬ್ಯಾಟ್‌ಗಳಿಂದ ರನ್‌ಗಳ ಸುರಿಮಳೆನೇ ಸುರಿಯುತ್ತೆ. ಇನ್ನೊಂದು ಕಡೆ ತಾರೆಯರನ್ನು ಚೀಯರ್ ಮಾಡುವುದಕ್ಕೆ ನಟಿಯರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಸ್ಟೇಡಿಯಂ ಕೂಡ ತುಂಬಿ ತುಳುಕುತ್ತವೆ. ಹಾಗಿದ್ದರೆ ಸಿಸಿಎಲ್‌ನಲ್ಲಿ ಭಾಗವಹಿಸುವ ಯಾವ ತಂಡಕ್ಕೆ ಹೆಚ್ಚು ಕ್ರೇಜ್ ಇದೆ? ಅಂತ ನೋಡುವುದಾರೇ..
ಸಿಸಿಎಲ್‌ನಲ್ಲಿ ಈ ಬಾರಿ (2025) ಏಳು ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ ಕೇರಳ ಸ್ಟ್ರೈಕರ್ಸ್ ಈ ಬಾರಿ ಭಾಗವಹಿಸುತ್ತಿಲ್ಲ. ಹೇಮಾ ಕಮಿಟಿಯ ವರದಿ ಬಳಿಕ ನಟರಲ್ಲಿ ಒಮ್ಮತ ಮೂಡದ ಕಾರಣ ಕೇರಳ ತಂಡ ಈ ಬಾರಿ ಸಿಸಿಎಲ್‌ನಲ್ಲಿ ಭಾಗವಹಿಸದೇ ಇರುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಏಳು ತಂಡಗಳು ಭಾವಹಿಸುತ್ತಿವೆ. ಇವುಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಹೆಚ್ಚು ಫ್ಯಾನ್ಸ್ ಫಾಲೋವಿಂಗ್ ಇದೆ.

ಅಂದ್ಹಾಗೆ ಈ ಬಾರಿ ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಭೋಜ್‌ಪುರಿ ದಬಾಂಗ್ಸ್, ಪಂಜಾಬ್ ದಿ ಶೇರ್ ತಂಡಗಳು ಭಾಗವಹಿಸುತ್ತಿವೆ. ಕಳೆದ ಸೀಸನ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡ 12 ರನ್‌ಗಳಿಂದ ಕರ್ನಾಟಕ ಬುಲ್ಡೋಜರ್ ತಂಡವನ್ನು ಮಣಿಸಿತ್ತು. ಹೀಗಾಗಿ ಈ ಬಾರಿ ಕರ್ನಾಟಕ ತಂಡ ಕಪ್ ಗೆಲ್ಲಲೇ ಬೇಕು ಅಂತ ಪಟ್ಟು ಹಿಡಿದು ಕೂತಿದೆ.
ಕರ್ನಾಟಕದ ಬುಲ್ಡೋಜರ್ಸ್ ಸಿಸಿಎಲ್‌ನ ಫೇವರಿಟ್ ಟೀಮ್. ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕ ತಂಡಕ್ಕೆ ಅತೀ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಸುಮಾರು 1 ಲಕ್ಷದ 47 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಫಾಲೋವರ್ಸ್ ಲೆಕ್ಕದಲ್ಲಿ ನಂ 1 ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಕೇರಳ ಸ್ಟ್ರೈಕರ್ಸ್ ಇದ್ದು, ಇವರಿಗೆ 50 ಸಾವಿರ ಫಾಲೋವರ್ಸ್ ಇದ್ದಾರೆ. 3ನೇ ಸ್ಥಾನದಲ್ಲಿ ಭೋಜ್‌ಪುರಿ ದಬಾಂಗ್ಸ್ ತಂಡವಿದ್ದು 35.8 ಸಾವಿರ ಫಾಲೋವರ್ಸ್ ಇದ್ದಾರೆ. 4ನೇ ಸ್ಥಾನದಲ್ಲಿ ಚೆನ್ನೈ ರೈನೋಸ್ ತಂಡವಿದ್ದು ಇವರಿಗೆ 17 ಸಾವಿರ ಫಾಲೋವರ್ಸ್ ಇದ್ದಾರೆ. 5ನೇ ಸ್ಯಾನದಲ್ಲಿ ಪಂಜಾಬ್ ದಿ ಶೇರ್ 11.2 ಸಾವಿರ ಫಾಲೋವರ್ಸ್, 6ನೇ ಸ್ಥಾನದಲ್ಲಿ ತೆಲುಗು ವಾರಿಯರ್ಸ್‌ಗೆ 7 ಸಾವಿರ ಫಾಲೋವರ್ಸ್, 7ನೇ ಸ್ಥಾನದಲ್ಲಿ ಮುಂಬೈ ಹೀರೋಸ್ 4 ಸಾವಿರ ಹಾಗೂ 8ನೇ ಸ್ಥಾನದಲ್ಲಿ ಬೆಂಗಾಲ್ ಟೈಗರ್ಸ್ 3 ಸಾವಿರ ಫಾಲೋವರ್ಸ್ ಇದ್ದಾರೆ.
ಇದು ಇನ್‌ಸ್ಟಾಗ್ರಾಂ ಕಥೆಯಾದರೆ, ಫೇಸ್‌ಬುಕ್ ಫಾಲೋವರ್ಸ್‌ನಲ್ಲೂ ಕರ್ನಾಟಕ ಬುಲ್ಡೋಜರ್ಸ್‌ಗೆ ಮೊದಲ ಸ್ಥಾನವಿದೆ. ಕರ್ನಾಟಕ ಬುಲ್ಡೋಜರ್ಸ್‌ಗೆ 47 ಸಾವಿರ ಫಾಲೋವರ್ಸ್ ಇದ್ದು ಮೊದಲನೇ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಪಂಜಾಬ್ ದಿ ಶೇರ್ ತಂಡವಿದ್ದು 36 ಸಾವಿರ, ತೆಲುಗು ವಾರಿಯರ್ಸ್‌ಗೆ 24 ಸಾವಿರ, ಮುಂಬೈ ಹೀರೋಸ್‌ಗೆ 20 ಸಾವಿರ, ಚೆನ್ನೈ ತಂಡಕ್ಕೆ 19 ಸಾವಿರ, ಬೆಂಗಾಲ್ ಟೈಗರ್ಸ್ ತಂಡಕ್ಕೆ 13 ಸಾವಿರ, ಕೇರಳ ಸ್ಟ್ರೈಕರ್ಸ್ ತಂಡಕ್ಕೆ 13 ಸಾವಿರ, ಭೋಜ್‌ಪುರಿ ತಂಡಕ್ಕೆ 7 ಸಾವಿರ ಫಾಲೋವರ್ಸ್ ಇದ್ದಾರೆ.


Click it and Unblock the Notifications











