CCL 2025: ಸಿಸಿಎಲ್‌ನಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ತೆಗೆದ ವಿಕೆಟ್‌ಗಳೆಷ್ಟು?
ಸಿಸಿಎಲ್ 2025 ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಲವರ್ಸ್ ಕಾದು ಕೂತಿದ್ದ ಇವೆಂಟ್. ಪ್ರತಿ ವರ್ಷದಂತೆ ಈ ವರ್ಷ ಕೂಡ ಸಿಸಿಎಲ್ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. 11ನೇ ಸೀಸನ್‌ನಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡವೇ ಎಲ್ಲರ ಫೇವರಿಟ್ ಟೀಮ್. ಈ ಬಾರಿ ಕೂಡ ಕರ್ನಾಟಕ ತಂಡ ಮಸ್ತ್ ಆಗಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಅಖಾಡಕ್ಕೆ ಇಳಿಯುತ್ತಿದ್ದಾರೆ.
ಕಳೆದ ಸೀಸನ್ ಮಿಸ್ ಮಾಡಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ಲೇಯಿಂಗ್ 11ನಲ್ಲಿ ಇದ್ದಾರೆ. ಕಿಚ್ಚ ಸುದೀಪ್ ಜೊತೆ ಗಣೇಶ್ ಕೂಡ ಕಳೆದ ಎರಡು ವಾರಗಳಿಂದ ಭರ್ಜರಿಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಂದ್ಹಾಗೇ ಗಣೇಶ್ ಸ್ಟ್ರೆಂಥ್ ಅಂದರೆ ಅದು ಬೌಲಿಂಗ್. ಕೆಲವು ಪಂದ್ಯಗಳಲ್ಲಿ ಇವರ ಬೌಲಿಂಗ್ ತಂಡಕ್ಕೆ ನೆರವಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರದ್ದು ಮೀಡಿಯಂ ಫೇಸ್ ಬೌಲಿಂಗ್. ಆಡಿದ ಪಂದ್ಯಗಳಲ್ಲಿ ಒಂದು ಇಲ್ಲವೇ ಎರಡು ವಿಕೆಟ್‌ಗಳನ್ನು ಪಡೆದುಕೊಂಡು ತಂಡದ ಗೆಲುವಿಗೆ ನೆರವಾಗಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಗಣೇಶ್ ಒಂದು ಒಳ್ಳೆಯ ಬಲ ಅನ್ನಬಹುದು. ಹಾಗಿದ್ದರೆ, ಇದೂವರೆಗೂ ಗೋಲ್ಡನ್ ಸ್ಟಾರ್ ಗಣೇಶ್ ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಎಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ? ಅನ್ನೋದನ್ನು ನೋಡುವುದಾರೆ.
ಗಣೇಶ್ ಕೆಲವು ದಿನಗಳಿಂದ ಅಭ್ಯಾಸ ಪಂದ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಫಾಸ್ಟ್ ಬೌಲಿಂಗ್ ಸ್ಟ್ರೆಂಥ್ ಇದೆ. ಅದರೊಂದಿಗೆ ಮೀಡಿಯಂ ಫಾಸ್ಟ್ ಬೌಲರ್‌ಗಳ ಅವಶ್ಯಕತೆ ಇತ್ತು. ಆ ಸ್ಥಾನವನ್ನು ಗಣೇಶ್ ತುಂಬಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಕೇವಲ ಸ್ಟಾರ್ ಅಟ್ರ್ಯಾಕ್ಷನ್ ಅಷ್ಟೇ ಅಲ್ಲ. ಬೌಲಿಂಗ್‌ನಲ್ಲೂ ಎಕ್ಸ್‌ಪರ್ಟ್ ಅನ್ನೋದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಈ ಬಾರಿ ಕೂಡ ಗಣೇಶ್ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಿದೆ.
ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ ಪರ ಗೋಲ್ಡನ್ ಸ್ಟಾರ್ ಗಣೇಶ್ ಇದೂವರೆಗೂ ಐದು ಪಂದ್ಯಗಳನ್ನು ಆಡಿದ್ದಾರೆ. ಈ ಐದು ಪಂದ್ಯಗಳಿಂದ 7 ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. 89 ರನ್‌ಗಳನ್ನು ನೀಡಿದ್ದು, 8.57 ಸ್ಟ್ರೈಕ್ ರೇಟ್ ಇದೆ. ಈ ಬಾರಿ ಗಣೇಶ್‌ಗೆ ಹೆಚ್ಚು ಬೌಲಿಂಗ್ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಆಲ್‌ರೌಂಡರ್ ಪ್ರದೀಪ್ ಈ ಬಾರಿ ಸಿಸಿಎಲ್‌ನಿಂದ ದೂರು ಉಳಿದಿದ್ದರಿಂದ ಗಣೇಶ್‌ಗೆ ಹೆಚ್ಚು ಓವರ್‌ಗಳು ಸಿಗಬಹುದು. ಗಣೇಶ್ ಸಿಸಿಎಲ್ ಕರಿಯರ್ ಹೀಗಿದೆ.
ಗಣೇಶ್ ಸಿಸಿಎಲ್ ಕರಿಯರ್
ಪಂದ್ಯ 7
ಬೌಲ್‌ಗಳು 60
ನೀಡದ ರನ್ 89
ವಿಕೆಟ್‌ಗಳು 07
ಎಕಾನಮಿ 8.9
ಸ್ಟ್ರೈಕ್ ರೇಟ್ 8.57
ಸಿಸಿಎಲ್‌ನಲ್ಲಿ ಗಣೇಶ್ ಕರಿಯರ್ ಉತ್ತಮವಾಗಿದೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು. ಮಧ್ಯಮ ವರ್ಗದಲ್ಲಿ ಗಣೇಶ್ ಉತ್ತಮ ಬೌಲಿಂಗ್ ಮಾಡಬಲ್ಲರು. ಈ ಬಾರಿ ಕೂಡ ಗಣೇಶ್ ಕಾನ್ಫಿಡೆಂಟ್ ಆಗಿರುವ ಹಾಗಿದೆ. ಈಗಾಗಲೇ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಕ್ಷೇತ್ರದಲ್ಲಿ ಗೋಲ್ಡ್‌ಸ್ಟಾರ್ ಭರ್ಜರಿ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಉತ್ತಮ ನಿರೀಕ್ಷೆಯಲ್ಲಿ ಇದ್ದಾರೆ.
ಕರ್ನಾಟಕ ಬುಲ್ಡೋಜರ್ ತಂಡದ ಪರ ಸ್ಟಾರ್ ಆಟಗಾರರ ಲಿಸ್ಟ್‌ನಲ್ಲಿ ಗಣೇಶ್ ಇದ್ದಾರೆ. ಇವರೊಂದಿಗೆ ಕಿಚ್ಚ ಸುದೀಪ್, ಡಾರ್ಲಿಂಗ್ ಕೃಷ್ಣ, ಜಯರಾಮ್ ಕಾರ್ತಿಕ್, ಚಂದನ್ ಕುಮಾರ್, ಪವರ್ ಹಿಟ್ಟರ್ ರಾಜೀವ್, ತ್ರಿವಿಕ್ರಮ್, ಅನುಪ್ ಭಂಡಾರಿ, ನಿರೂಪ್ ಭಂಡಾರಿ ಆಡುತ್ತಿದ್ದಾರೆ.


Click it and Unblock the Notifications











