CCL 2025:ಸಿಸಿಎಲ್ ಇತಿಹಾಸದಲ್ಲಿ ಪವರ್ ಹಿಟ್ಟರ್ ರಾಜೀವ್ ಗಳಿಸಿದ ರನ್ ಎಷ್ಟು? ಗಳಿಸಿದ ಗರಿಷ್ಠ ರನ್ ಎಷ್ಟು?

ಇದೇ ಫೆಬ್ರವರಿ 8 ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 11ನೇ ಸೀಸನ್ (CCL) ಆರಂಭ ಆಗುತ್ತಿದೆ. ಈ ಟೂರ್ನಿಯಲ್ಲಿ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದು ಕರ್ನಾಟಕ ಬುಲ್ಡೋಜರ್ಸ್. ಕಿಚ್ಚ ಸುದೀಪ್ ಮುಂದಾಳತ್ವದ ತಂಡ ಸಿಸಿಎಲ್‌ನ 11 ಸೀಸನ್‌ಗಳಲ್ಲೂ ಟಫ್ ಕಾಂಪಿಟೇಷನ್ ಕೊಡುತ್ತಲೇ ಬಂದಿದೆ. ಹೀಗಾಗಿ 2025ರ ಸೀಸನ್‌ನಲ್ಲೂ ಅತೀ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿರುವ ತಂಡ ಕರ್ನಾಟಕ ಬುಲ್ಡೋಜರ್ಸ್.

ಕಳೆದ ಎರಡು ವಾರಗಳಿಂದ ಕಿಚ್ಚ ಸುದೀಪ್ ತಮ್ಮ ತಂಡದೊಂದಿಗೆ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಮಾಡಿದ್ದರು. ಇನ್ನು ನಾಲ್ಕೈದು ದಿನಗಳು ಹೈದರಾಬಾದ್‌ನಲ್ಲಿ ಪ್ರಾಕ್ಟೀಸ್ ಮಾಡಿ ಈಗ ಬೆಂಗಳೂರಿಗೆ ಹಿಂತಿರುಗಿದೆ. ಮೊದಲ ಪಂದ್ಯ ಆಡುವುದಕ್ಕೂ ಮುನ್ನ ಒಂದು ಫ್ರೆಂಡ್ಲಿ ಮ್ಯಾಚ್ ಆಡಲಿದ್ದು, ಬಳಿಕ ನೇರವಾಗಿ ತೆಲುಗು ವಾರಿಯರ್‌ ಜೊತೆ ಸೆಣೆಸಾಡಲಿದೆ.

CCL 2025 Karnataka Bulldozers player Rajeev Hanu Batting career stats and key movements

ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ಕಳೆದ 11 ಸೀಸನ್‌ಗಳಲ್ಲಿ ಅದ್ಭುತ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಅದರಲ್ಲಿ ರಾಜೀವ್ ಕೂಡ ಒಬ್ಬರು. ಆರಂಭಿಕ ಆಟಗಾರನಾಗಿ ಅಖಾಡಕ್ಕೆ ಇಳಿಯುವ ರಾಜೀವ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಫೇಮಸ್. ಇಲ್ಲಿವರೆಗೂ ನಡೆದ ಸಿಸಿಎಲ್ 11 ಸೀಸನ್‌ಗಳಲ್ಲಿ ಕರ್ನಾಟಕ ಬುಲ್ಡೋಜರ್‌ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹಾಗಿದ್ದರೆ ರಾಜೀವ್ ಇಲ್ಲಿವರೆಗೂ ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಕರ್ನಾಟಕ ಬುಲ್ಡೋಜರ್ ಪರ ಎಷ್ಟು ರನ್‌ಗಳನ್ನು ಗಳಿಸಿದ್ದಾರೆ? ಸ್ಟ್ರೈಟ್ ರೇಟ್ ಎಷ್ಟಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ರಾಜೀವ್ ಹನು ಕರ್ನಾಟಕ ಬುಲ್ಡೋಜರ್ ಪರ ಆರಂಭಿಕ ಆಟಗಾರನಾಗಿ ಅಖಾಡಕ್ಕೆ ಇಳಿಯುತ್ತಾರೆ. ಪ್ರತಿ ಸೀಸನ್‌ನಲ್ಲೂ ಇವರ ಆಕ್ರಮಣಕಾರಿ ಬ್ಯಾಟಿಂಗ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿದೆ. ಸಿಕ್ಸ್ ಹಾಗೂ ಫೋರ್‌ಗಳಿಂದಲೇ ರನ್ ಕದಿಯುವ ಆಟಗಾರ. ರಾಜೀವ್ ಬ್ಯಾಟಿಂಗ್ ಕೈ ಹಿಡಿದಿದೆ ಅಂದರೆ, ಕರ್ನಾಟಕ ಬುಲ್ಡೋಜರ್ ತಂಡ ದೊಡ್ಡ ಮಟ್ಟದಲ್ಲಿ ಸ್ಕೋರ್ ಅನ್ನು ಕಲೆ ಹಾಕುತ್ತೆ ಅನ್ನೋದು ಕನ್ಫರ್ಮ್. ಇಲ್ಲಿವರೆಗೂ ರಾಜೀವ್ ಆಡಿದ ಪಂದ್ಯ ಹಾಗೂ ರನ್‌ಗಳ ವಿವರ ಇಲ್ಲಿದೆ.

ರಾಜೀವ್ ಬ್ಯಾಟಿಂಗ್ ಕರಿಯರ್

ಪಂದ್ಯಗಳು 43
ಇನ್ನಿಂಗ್ಸ್ 52
ರನ್‌ಗಳು 1542
ಸ್ಟ್ರೈಕ್ ರೇಟ್ 200
ಸರಾಸರಿ ಅಂಕ 53.86
ಅತೀ ಹೆಚ್ಚು ಅಂಕ 154

ಕಳೆದ ಕೆಲವು ಸೀಸನ್‌ಗಳಲ್ಲಿ ರಾಜೀವ್ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಹಿಂದೆ ಬಿದ್ದಿದ್ದರು. ಈ ಬಾರಿ ಫುಲ್ ಸ್ವಿಂಗ್‌ನಲ್ಲಿ ಅಖಾಡಕ್ಕೆ ಇಳಿಯುತ್ತಾರೆ ಅನ್ನೋದು ಭರವಸೆ ಅಭಿಮಾನಿಗಳಲ್ಲಿ ಇದೆ. ಟೂರ್ನಿಮೆಂಟ್ ಉದ್ದಕ್ಕೂ ರಾಜೀವ್ ಆಕ್ರಮಕಾರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರೆ, ಕರ್ನಾಟಕ ಬುಲ್ಡೋಜರ್ ತಂಡ ಫೈನಲ್ ಪ್ರವೇಶ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕರ್ನಾಟಕ ಬುಲ್ಡೋಸರ್ ತಂಡ 2011ರಿಂದ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿದೆ. ಅಶೋಕ್ ಖೇಣಿ ಮಾಲಿಕತ್ವದ ತಂಡ ಎರಡು ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. 2013 ಹಾಗೂ 2014ರಲ್ಲಿ ಸಿಸಿಎಲ್ ಕಪ್ ಅನ್ನು ತನ್ನದಾಗಿಸಿಕೊಂಡಿದೆ. ಅಲ್ಲಿಂದ ಹಲವು ಬಾರಿ ಫೈನಲ್‌ಗೆ ಪ್ರವೇಶ ಮಾಡಿದ್ದರೂ, ಕಪ್ ಗೆಲ್ಲುವಲ್ಲಿ ಸಾಧ್ಯವಾಗಿಲ್ಲ. ಇಲ್ಲಿವರೆಗೂ ಕರ್ನಾಟಕ ಬುಲ್ಡೋಜರ್ಸ್ ತಂಡ ಐದು ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಸಿಸಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಇನ್ನೊಂದು ತಂಡವಿಲ್ಲ.

ಇನ್ನು ಕಿಚ್ಚ ಸುದೀಪ್ ಮತ್ತೆ ನಾಯಕನಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಈ ಬಾರಿ ಮತ್ತೊಬ್ಬರ ಆಕ್ರಮಣಕಾರಿ ಆಟಗಾರ ಪ್ರದೀಪ್ ವೈಯಕ್ತಿಕ ಕಾರಣಗಳಿಗಾಗಿ ಹಿಂದೆ ಸರಿದಿದ್ದಾರೆ. ಅವರ ಸ್ಥಾನದಲ್ಲಿ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್ ಆಡುತ್ತಿದ್ದಾರೆ. ಈ ಮೂಲಕ ಎಡಗೈ ಬ್ಯಾಟ್ಸ್‌ಮನ್ ಕೊರತೆಯನ್ನು ತ್ರಿವಿಕ್ರಮ್ ನೀಗಿಸಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಸದಸ್ಯರ ಪಟ್ಟಿ ಇಲ್ಲಿದೆ.

ಕರ್ನಾಟಕ ಬುಲ್ಡೋಜರ್ಸ್‌ ಆಟಗಾರರ ಲಿಸ್ಟ್

ಕಿಚ್ಚ ಸುದೀಪ್ (C)
ಗೋಲ್ಡನ್‌ಸ್ಟಾರ್ ಗಣೇಶ್
ಕಾರ್ತಿಕ್ ಜಯರಾಂ
ಡಾರ್ಲಿಂಗ್ ಕೃಷ್ಣ
ಸುನೀಲ್ ರಾವ್
ರಾಜೀವ್ ಹನು
ಚಂದನ್ ಕುಮಾರ್
ಪ್ರತಾಪ್ ನಾರಾಯಣ್
ನಿರೂಪ್ ಭಂಡಾರಿ
ಅನುಪ್ ಭಂಡಾರಿ
ಕರಣ್ ಆರ್ಯನ್
ತ್ರಿವಿಕ್ರಮ್
ಮಂಜುನಾಥ್ ಗೌಡ
ಸಾಗರ್ ಗೌಡ
ಅಲಕ್ನಂದ
ಸಿದ್ದು ಮೂಲಿಮನಿ

More from Filmibeat

English summary
CCL 2025: Explore Rajeev Hanu's batting career stats and key movements with Karnataka Bulldozers;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X