CCL 2025: ಡಾರ್ಲಿಂಗ್ ಕೃಷ್ಣ, ಕರಣ್, ಚಂದನ್, ರಾಜೀವ್ ಆಟಕ್ಕೆ ಬೆದರಿ ಬೆಂಡಾದ ತೆಲುಗು ವಾರಿಯರ್ಸ್
ಸಿಸಿಎಲ್ 2025 ನಿನ್ನೆ (ಫೆಬ್ರವರಿ 8) ಅದ್ಧೂರಿಯಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ನಡೆದಿದ್ದರೂ, ಎರಡನೇ ಪಂದ್ಯದ ಮೂಲಕ ಅಫಿಷಿಯಲ್ ಆಗಿ ಆರಂಭಗೊಂಡಿದೆ. ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಸಿಎಲ್ 11ನೇ ಸೀಸನ್‌ಗೆ ಅದ್ಧೂರಿ ಚಾಲನೆ ನೀಡಿದ್ದರು.
ಕರ್ನಾಟಕ ಬುಲ್ಡೋಜರ್ ಹಾಗೂ ತೆಲುಗು ವಾರಿಯರ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಕನ್ನಡ ಹಾಗೂ ತೆಲುಗು ತಾರೆಯರ ಕ್ರಿಕೆಟ್ ಪಂದ್ಯವನ್ನು ನೋಡುವುದಕ್ಕೆ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಎರಡು ಪ್ರಬಲ ತಂಡಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆಕ್ ಟು ನೆಕ್ ಫೈಟ್ ಕೊಟ್ಟಿದ್ದು ಥ್ರಿಲ್ ಆಗಿತ್ತು. ಯಾವುದೇ ಆರ್‌ಸಿಬಿ ಮ್ಯಾಚ್‌ಗೂ ಕಮ್ಮಿಯಿಲ್ಲ ಅನ್ನೋ ಹಾಗಿತ್ತು.

ಟಾಪ ಸೋತ ಕಿಚ್ಚ ಸುದೀಪ್ ತಂಡ ಕರ್ನಾಟಕ ಬುಲ್ಡೋಜರ್ಸ್ ಬ್ಯಾಟಿಂಗ್‌ಗೆ ಇಳಿದಿತ್ತು. ಆರಂಭದಲ್ಲೇ ರಾಜೀವ್ ಹಾಗೂ ಜಯರಾಂ ಕಾರ್ತಿಕ್ ವಿಕೆಟ್‌ಗಳು ಉರುಳಿಸಿ ತೆಲುಗು ವಾರಿಯರ್ಸ್ ಮೇಲುಗೈ ಸಾಧಿಸಿದ್ದರು. ಮೊದಲ ಮೂರು ಓವರ್ ಕರ್ನಾಟಕ ರನ್‌ಗಳನ್ನು ಕದಿಯುವುದಕ್ಕೆ ಪರದಾಡಿತ್ತು. ಆದರೆ, ರನ್‌ಗಳ ಸುರಿಮಳೆಯನ್ನೇ ಸುರಿಸಿದ್ದರು. ಕರ್ನಾಟಕ ಬುಲ್ಡೋಜರ್ ತಂಡದ ಪರ ಡಾರ್ಲಿಂಗ್ ಕೃಷ್ಣ, ರಾಜೀವ್, ಕರಣ್ ಆರ್ಯನ್, ಚಂದನ್ ಕುಮಾರ್, ಮಂಜುನಾಥ್ ಗೌಡ ಟಾಪ್ ಪರ್ಫಾಮರ್ ಆಗಿ ಹೊರ ಹೊಮ್ಮಿದ್ದಾರೆ. ಕರ್ನಾಟಕ ತಂಡಕ್ಕೆ ಈ ಎಲ್ಲಾ ಆಟಗಾರರ ಕೊಡುಗೆ ಏನು ಅಂತ ನೋಡುವುದಾರೆ.
ಡಾರ್ಲಿಂಗ್ ಕೃಷ್ಣ
ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಡಾರ್ಲಿಂಗ್ ಕೃಷ್ಣ ಟಾಪ್ ಪರ್ಫಾಮರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಗಟ್ಟಿಯಾಗಿ ನಿಲ್ಲದೆ ಹೋಗಿದ್ದರು. ಮ್ಯಾಚ್ ಕೈ ಚೆಲ್ಲಬೇಕಾಗುತ್ತಿತ್ತು. ವಿಲಿತರಾಗದೆ ಪಂದ್ಯದುದ್ದಕ್ಕೂ ಡಾರ್ಲಿಂಗ್ ಕೃಷ್ಣ ರನ್‌ಗಳ ಸುರಿಮಳೆ ಸುರಿಸಿದ್ದರು. ಸಿಕ್ಸ್, ಫೋರ್‌ಗಳನ್ನು ಬಾರಿಸಿ ಟೀಮ್ ಗೆಲುವಿಗೆ ಗಟ್ಟಿಯಾಗಿ ನಿಂತರು. ಮೊದಲ ಇನ್ನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ 39 ಎಸೆತಗಳಲ್ಲಿ 80 ರನ್ ಭಾರಿಸಿದ್ದರು. 5 ಫೋರ್ ಹಾಗೂ 5 ಸಿಕ್ಸ್ ಇದರಲ್ಲಿ ಸೇರಿಕೊಂಡಿದೆ. 205.13 ಸ್ಟ್ರೈಕ್ ರೇಟ್.
ಕರಣ್ ಆರ್ಯನ್
ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದರೂ, ತೆಲುಗು ವಾರಿಯರ್ಸ್ ಸರಿಯಾಗಿಯೇ ತಿರುಗೇಟು ನೀಡಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್ ಕೂಡ ದೊಡ್ಡ ಮೊತ್ತ ಕಲೆ ಹಾಕಬೇಕಿತ್ತು. ಕರ್ನಾಟಕದ ಪರ ಭರ್ಜರಿ ಬ್ಯಾಟ್ ಬೀಸಿದವರೇ ಕರಣ್ ಆರ್ಯನ್. 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ಬಾಲ್‌ಗಳಿಗೆ 34 ರನ್ ಸಿಡಿಸಿದ್ದರು. 3 ಫೋರ್ ಹಾಗೂ 2 ಸಿಕ್ಸ್ ಬಾರಿಸಿದ್ದರು. ಇವರ ಸ್ಟ್ರೈಕ್ ರೇಟ್ 261.54.
ರಾಜೀವ್
ಎರಡನೇ ಇನ್ನಿಂಗ್‌ನಲ್ಲಿ ತಂಡಕ್ಕೆ ನೆರವಾದವರು ರಾಜೀವ್. 15 ಎಸೆತಗಳಲ್ಲಿ 26 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಒಂದು ಫೋರ್ ಹಾಗೂ 2 ಸಿಕ್ಸ್ ಸೇರಿಕೊಂಡಿದೆ. ಇವರ ಸ್ಟ್ರೈಕ್ ರೇಟ್ 173.33.
ಗೋಲ್ಡನ್ ಸ್ಟಾರ್ ಗಣೇಶ್
ಮೊದಲ ಇನ್ನಿಂಗ್ಸ್‌ನಲ್ಲಿ ಗಣೇಶ್ ಬೌಲಿಂಗ್ ಕೈ ಕೊಟ್ಟಿತ್ತು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ ಗಣೇಶ್ ಕೇವಲ 5 ರನ್ ಕೊಟ್ಟು 4 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಪಂದ್ಯದ ಗೆಲುವಿಗೆ ಟರ್ನಿಂಗ್ ಪಾಯಿಂಟ್.
ಚಂದನ್ ಕುಮಾರ್
ಕರ್ನಾಟಕ ಬುಲ್ಡೋಜರ್ ತಂಡದ ಅನಿಲ್ ಕುಂಬ್ಳೆ ಅಂತಲೇ ಕರೆಸಿಕೊಳ್ಳುವ ಬೌಲರ್ ಚಂದನ್ ಕುಮಾರ್. ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ಓವರ್ ಬೌಲ್ ಮಾಡಿದ್ದರು. ಅದರಲ್ಲಿ 12 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ತೆಲುಗು ವಾರಿಯರ್ಸ್ ತಂಡವನ್ನು 91 ರನ್‌ಗಳಿಗೆ ಕಟ್ಟಿ ಹಾಕಿದ್ದರು.
ಮಂಜುನಾಥ್ ಗೌಡ
ಮೊದಲ ಇನ್ನಿಂಗ್ಸ್‌ನಲ್ಲಿ ಮಂಜುನಾಥ್ ಗೌಡ ಬೌಲಿಂಗ್ ದಾಳಿಗೆ ತೆಲುಗು ವಾರಿಯರ್ಸ್ ತಂಡದ ಎರಡು ವಿಕೆಟ್‌ಗಳು ಉರುಳಿದವು. 23 ರನ್ ನೀಡಿ ಸ್ವಲ್ಪ ದುಬಾರಿ ಅನಿಸಿದರೂ, ಎರಡು ಪ್ರಮುಖ ವಿಕೆಟ್‌ಗಳು ತಂಡದ ಗೆಲುವಿಗೆ ಕಾರಣ ಆಗಿತ್ತು.
ಅನುಪ್ ಭಂಡಾರಿ
ಮೊದಲ ಇನ್ನಿಂಗ್ಸ್‌ನಲ್ಲಿ ಅನುಪ್ ಭಂಡಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮಾಡಿರಲಿಲ್ಲ. ಆದರೆ, ಎರಡನೇ ಇನ್ನಿಂಗ್‌ನಲ್ಲಿ ಅನುಪ್ ಭಂಡಾರಿ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಉರುಳಿದ್ದವು. ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.


Click it and Unblock the Notifications











