CCL 2025: ಕಳೆದ ವರ್ಷ ಚೆನ್ನೈ ರೈನೋಸ್ ವಿರುದ್ಧದ ಪಂದ್ಯದಲ್ಲಿ ಕಿಚ್ಚನ ಹುಡುಗರ ದಾಖಲೆ ಒಂದೆರೆಡಲ್ಲ!

ಕಳೆದ ವಾರದಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2025) ಆರಂಭ ಆಗಿದೆ. ಮೊದಲ ದಿನವೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಅದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡದ ನಡುವಿನ ಪಂದ್ಯ ಕೂಡ ಒಂದು. ಇಂದು (ಫೆಬ್ರವರಿ 14) ಹೈದರಾಬಾದ್‌ನಲ್ಲಿ ಕರ್ನಾಟಕ ಬುಲ್ಡೋಜರ್ ಹಾಗೂ ಚೆನ್ನೈ ರೈನೋಸ್ ಮಧ್ಯೆ ಪಂದ್ಯ ನಡೆಯಲಿದೆ.

ಕರ್ನಾಟಕ ಬುಲ್ಡೋಜರ್ಸ್‌ನ ಸಂಪ್ರದಾಯಿಕ ಎದುರಾಳಿ ಚೆನ್ನೈ ರೈನೋಸ್ ತಂಡವನ್ನು ಹೈದರಾಬಾದ್‌ನಲ್ಲಿ ಎದುರಿಸಲಿದೆ. ಕಳೆದ 11 ಸೀಸನ್‌ಗಳಲ್ಲಿ ನಡೆದ ಪಂದ್ಯಗಳಲ್ಲಿ ಈ ಎರಡೂ ತಂಡಗಳ ನಡುವಿನ ಪಂದ್ಯ ರೋಚಕ ಎನಿಸಿವೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಿಚ್ಚನ ಹುಡುಗರು ದಾಖಲೆಗಳನ್ನು ಬರೆದಿದ್ದಾರೆ. ಕಳೆದ ವರ್ಷ ನಡೆದ ಪಂದ್ಯ ಕೂಡ ಅಷ್ಟೇ ರೋಚಕವಾಗಿತ್ತು.

CCL 2025 Karnataka Bulldozers vs Chennai Rhinos last year match Darling Krishna Karyan Aryan records

2024ರಲ್ಲೂ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವಿನ ಪಂದ್ಯ ಹೈದರಾಬಾದ್‌ನಲ್ಲಿ ನಡೆದಿತ್ತು. ಎರಡೂ ಪಂದ್ಯಗಳು ರನ್‌ಗಳ ಸುರಿಮಳೆಯನ್ನೇ ಸುರಿಸಿದ್ದವು. ಎರಡೂ ಇನ್ನಿಂಗ್ಸ್‌ನಿಂದ ಎರಡೂ ತಂಡಗಳು ಒಂದೇ ಪಂದ್ಯದಲ್ಲಿ 503 ರನ್‌ಗಳನ್ನು ಬಾರಿಸಿದ್ದವು. ಆದರೆ, ಆ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ಸ್ ಗೆದ್ದು ಬೀಗಿತ್ತು. ಈ ಪಂದ್ಯದ ಕೆಲವು ಕ್ಷಣಗಳೇನು? ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಬರೆದ ದಾಖಲೆಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

40 ಓವರ್‌ಗಳಲ್ಲಿ 503 ರನ್

2024ರ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವಿನ ಪಂದ್ಯ ರೋಚಕವಾಗಿತ್ತು. ಎರಡೂ ತಂಡಗಳು 40 ಓವರ್‌ಗಳಲ್ಲಿ 503 ರನ್‌ಗಳನ್ನು ಕಲೆ ಹಾಕಿದ್ದವು. ಎರಡೂ ಪಂದ್ಯ ಹೈದರಾಬಾದ್ ಮೈದಾನದಲ್ಲಿ ರೊಚ್ಚಿಗೆದ್ದು ಆಟವನ್ನು ಆಡಿದ್ದವು. ಎರಡೂ ಇನ್ನಿಂಗ್ಸ್‌ನಲ್ಲೂ ಎರಡೂ ತಂಡಗಳಿಂದ ರನ್‌ಗಳ ಸುರಿಮಳೆಯೇ ಸುರಿದಿದ್ದವು. ಈ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ 67 ರನ್‌ಗಳಿಂದ ಗೆದ್ದಿತ್ತು. ಆ ಪಂದ್ಯ ಸ್ಕೋರ್ ಕಾರ್ಟ್ ಹೀಗಿದೆ.

CCL 2025 Karnataka Bulldozers vs Chennai Rhinos last year match Darling Krishna Karyan Aryan records

ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್ 137/2 (10)
ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್ 84/10 (10)
ಕರ್ನಾಟಕ ಬುಲ್ಡೋಜರ್ಸ್ ಎರಡನೇ ಇನ್ನಿಂಗ್ಸ್ 148/3 (10)
ಚೆನ್ನೈ ರೈನೋಸ್ ಎರಡನೇ ಇನ್ನಿಂಗ್ಸ್ 134/ 3 (10)

ಡಾರ್ಲಿಂಗ್ ಕೃಷ್ಣ ದಾಖಲೆ ಏನು?

ಕರ್ನಾಟಕ ಬುಲ್ಡೋಜರ್ಸ್ ತಂಡದ ಆರಂಭಿಕ ಆಟಗಾರ ಡಾರ್ಲಿಂಗ್ ಕೃಷ್ಣ ಕಳೆದ ವರ್ಷ ರನ್‌ಗಳ ಸುರಿಮಳೆಯನ್ನೇ ಸುರಿಸಿದ್ದರು. ಅದರಲ್ಲೂ ಚೆನ್ನೈ ರೈನೋಸ್ ಪಂದ್ಯದಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿ ಸಿಸಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದರು. ಕೇವಲ 15 ಎಸೆಗಳಲ್ಲಿ 50 ರನ್‌ಗಳನ್ನು ಬಾರಿಸಿ ಹೊಸ ದಾಖಲೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ 22 ಎಸೆತಗಳಲ್ಲಿ 57 ರನ್ ಬಾರಿಸಿದ್ದರು.

ಕರಣ್ ಆರ್ಯನ್ ಹ್ಯಾಟ್ರಿಕ್

ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 137 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ರೈನೋಸ್ ಕೇವಲ 84 ರನ್‌ಗಳಿಗೆ ಮೊದಲ ಇನ್ನಿಂಗ್ ಅಂತ್ಯಗೊಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಚೆನ್ನೈ ತಂಡವನ್ನು ಕಟ್ಟಿ ಹಾಕಿದ್ದು ಕರಣ್ ಆರ್ಯನ್. ಈ ಪಂದ್ಯದಲ್ಲಿ ಕರಣ್ ಮೂರು ಹ್ಯಾಟ್ರಿಕ್ ವಿಕೆಟ್‌ಗಳನ್ನು ತೆಗೆದಿದ್ದರು.

2025 ಪಂದ್ಯದ ನಿರೀಕ್ಷೆಗಳೇನು?

ಇಂದು (ಫೆಬ್ರವರಿ 14) ಕರ್ನಾಟಕ ಬುಲ್ಡೋಜರ್ ಹಾಗೂ ಚೆನ್ನೈ ರೈನೋಸ್ ತಂಡದ ನಡುವೆ ಪಂದ್ಯ ನಡೆಯಲಿದೆ. ಹೈದರಾಬಾದ್‌ನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಎರಡೂ ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಬಾರಿ ಕೂಡ ಕಿಚ್ಚನ ಹುಡುಗರು ದಾಖಲೆ ರನ್‌ಗಳನ್ನು ಗಳಿಸುತ್ತಾರೆ ಅನ್ನೋ ನಂಬಿಕೆಯಲ್ಲಿ ವೀಕ್ಷಕರು ಇದ್ದಾರೆ. ಒಟ್ನಲ್ಲಿ ಎರಡೂ ತಂಡಗಳ ರೋಚಕ ಆಟವನ್ನಂತೂ ನಿರೀಕ್ಷೆ ಮಾಡಬಹುದು.

More from Filmibeat

English summary
CCL 2025: Karnataka Bulldozers vs Chennai Rhinos last year match summary, records, runs details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X