CCL 2025: ಕರ್ನಾಟಕ ಬುಲ್ಡೋಜರ್ಸ್ Vs ತೆಲುಗು ವಾರಿಯರ್ಸ್ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 (CCL) ಕಿಕ್ ಸ್ಟಾರ್ಟ್ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ಶನಿವಾರ ಅಂದರೆ, ಫೆಬ್ರವರಿ 8ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಮೊದಲ ಪಂದ್ಯ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ ಮಧ್ಯೆ ನಡೆಯುತ್ತಿದೆ. ಎರಡನೇ ಪಂದ್ಯ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಮಧ್ಯೆ ನಡೆಯುತ್ತಿದೆ.

ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ಒಂದು ದಿನ ಸಿಸಿಎಲ್ ಪಂದ್ಯಗಳು ನಡೆಯಲಿವೆ. ಈ ಎರಡು ಪಂದ್ಯಗಳು ಬಿಟ್ಟರೆ ಮತ್ತೆ ಚಿನ್ನಸ್ವಾಮಿಯಲ್ಲಿ ಮ್ಯಾಚ್‌ಗಳು ಇಲ್ಲ. ಅದರಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡ ತೆಲುಗು ವಾರಿಯರ್ಸ್ ತಂಡದ ಜೊತೆ ಮೈದಾನದಲ್ಲಿ ಸೆಣೆಸಾಡುವುದನ್ನು ಕಣ್ತುಂಬಿಕೊಳ್ಳುವುದಕ್ಕೆ ಜನರು ಎದುರು ನೋಡುತ್ತಿದ್ದಾರೆ.

CCL 2025 Karnataka Bulldozers Vs Telugu Warriors feb 8th match bengaluru ticket sold out

ಫೆಬ್ರವರಿ 8ರಂದು ಸಂಜೆ 6 ಗಂಟೆಯಿಂದ ಕರ್ನಾಟಕ ಬುಲ್ಡೋಜರ್ಸ್ ತಂಡ ಹಾಗೂ ತೆಲುಗು ವಾರಿಯರ್ಸ್ ತಂಡ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ವೀಕ್ಷಿಸಲು ವೀಕ್ಷಕರು ಉತ್ಸಾಹ ತೋರಿದ್ದಾರೆ. ಹೀಗಾಗಿ ಪಂದ್ಯ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಆಗಿವೆ. ಇನ್ನೂ ಟಿಕೆಟ್‌ಗಳಿಗೆ ಬೇಡಿಕೆ ಇದ್ದು, ಪಂದ್ಯ ಆರಂಭ ಆಗುವುದಕ್ಕೂ ಎರಡು ದಿನ ಮುನ್ನವೇ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಹೀಗಾಗಿ ಕರ್ನಾಟಕ ಬುಲ್ಡೋಜರ್ ಪಂದ್ಯದ ವೇಳೆ ವೀಕ್ಷಕರಿಂದ ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ನೋಡಬಹುದು.

ಕರ್ನಾಟಕ ಬುಲ್ಡೋಜರ್ ತಂಡದಿಂದ ಈ ಬಾರಿ ಸ್ಟಾರ್ ಪ್ಲೇಯರ್‌ಗಳು ಆಡುತ್ತಿದ್ದಾರೆ. ಕಿಚ್ಚ ಸುದೀಪ್ ನಾಯಕನಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಹಾಗೇ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಜೆಕೆ, ರಾಜೀವ್ ಅಂತಹ ನಟರು ಮೈದಾನಕ್ಕೆ ಇಳಿದು ತೆಲುಗು ವಾರಿಯಸ್ಸ್ ತಂಡವನ್ನು ಎದುರಿಸಲಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ.

ಇನ್ನು ಕರ್ನಾಟಕ ಬುಲ್ಡೋಜರ್ಸ್ Vs ತೆಲುಗು ವಾರಿಯರ್ಸ್ ಪಂದ್ಯಕ್ಕೆ ಟಿಕೆಟ್‌ ಮಿಸ್ ಮಾಡಿಕೊಂಡವರು ಟಿವಿಗಳಲ್ಲಿ ಪಂದ್ಯವನ್ನು ವೀಕ್ಷಣೆ ಮಾಡಬಹುದು. ಸೋನಿ ಸ್ಪೋರ್ಟ್ಸ್ 3 ಸಿಸಿಎಲ್‌ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತಿದೆ. ಹಾಗೇ ಓಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲೂ ನೇರ ಪ್ರಸಾರ ಆಗಲಿದೆ. ಈ ವಿಕೆಂಡ್ ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಹಬ್ಬ ಅಂತಲೇ ಹೇಳಬಹುದು.

ಇನ್ನು ಕರ್ನಾಟಕ ಬುಲ್ಡೋಜರ್‌ ತಂಡದಲ್ಲಿ ಆಕ್ರಮಣಕಾರಿ ಆಟಗಾರರು ಇದ್ದಾರೆ. ಬ್ಯಾಟಿಂಗ್‌, ಬೌಲಿಂಗ್ ಹಾಗೂ ಅಲ್‌ರೌಂಡರ್‌ ಇದ್ದಾರೆ. ಈ ಬಾರಿ ಪ್ರದೀಪ್ ಸಿಸಿಎಲ್ ಟೂರ್ನಿಯಿಂದ ಹೊರ ಉಳಿದಿದ್ದಾರೆ.

ಕರ್ನಾಟಕ ಬುಲ್ಡೋಜರ್ ತಂಡ ಹೀಗಿದೆ.

ಕಿಚ್ಚ ಸುದೀಪ್ (C)
ಗೋಲ್ಡನ್‌ಸ್ಟಾರ್ ಗಣೇಶ್
ಕಾರ್ತಿಕ್ ಜಯರಾಂ
ಡಾರ್ಲಿಂಗ್ ಕೃಷ್ಣ
ಸುನೀಲ್ ರಾವ್
ರಾಜೀವ್ ಹನು
ಚಂದನ್ ಕುಮಾರ್
ಪ್ರತಾಪ್ ನಾರಾಯಣ್
ನಿರೂಪ್ ಭಂಡಾರಿ
ಅನುಪ್ ಭಂಡಾರಿ
ಕರಣ್ ಆರ್ಯನ್
ತ್ರಿವಿಕ್ರಮ್
ಮಂಜುನಾಥ್ ಗೌಡ
ಸಾಗರ್ ಗೌಡ
ಅಲಕ್ನಂದ
ಸಿದ್ದು ಮೂಲಿಮನಿ

ಇನ್ನು ಎದುರಾಳಿ ತಂಡಗಳ ತೆಲುಗು ವಾರಿಯರ್ಸ್ ತಂಡದ ಆಟಗಾರರ ಲಿಸ್ಟ್ ಹೀಗಿದೆ.

ಅಖಿಲ್ ಅಕ್ಕಿನೇನಿ (ನಾಯಕ)
ವೆಂಕಟೇಶ್,
ಸಚಿನ್ ಜೋಷಿ
ಸುಧೀರ್ ಬಾಬು
ತರುಣ್
ಪ್ರಿನ್ಸ್ ಸಿಸಿಲ್
ಸಾಯಿ ಧರಂ ತೇಜ್
ಅಜಯ್
ಇಎಸ್‌ಡಿ
ಅಶ್ವಿನ್ ಬಾಬು
ಆದರ್ಶ್ ಬಾಲಕೃಷ್ಣ
ನಂದ ಕಿಶೋರ್
ನಿಖಿಲ್ ಸಿದ್ಧಾರ್ಥ್
ಸಿದ್ಧಾರ್ಥ್
ಪ್ರಭು
ರಾಘು
ಸುಶಾಂತ್
ಶ್ರೀಕಾಂತ್
ತಾರಕ್ ರತ್ನ
ಸಾಮ್ರಾಟ್ ರೆಡ್ಡಿ
ವಿಶ್ವ

More from Filmibeat

English summary
Tickets for the CCL 2025 match Karnataka Bulldozers and Telugu Warriors on February 8 in Bengaluru have sold out, highlighting fan enthusiasm;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X