CCL 2025: ಮೈಸೂರಿನಲ್ಲಿ ಸಿಸಿಎಲ್ ಸೆಮಿಫೈನಲ್ & ಫೈನಲ್; ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್

ಸಿಸಿಎಲ್ 2025 ಫೆಬ್ರವರಿ 8ರಿಂದ ಭರ್ಜರಿಯಾಗಿ ಆರಂಭ ಆಗಿತ್ತು. ಕಳೆದ ಎರಡು ವಾರಗಳಿಂದ ಬೆಂಗಳೂರು, ಹೈದರಾಬಾದ್ ಹಾಗೂ ಕಟಕ್‌ನಲ್ಲಿ ಪಂದ್ಯಗಳು ನಡೆದಿವೆ. ಏಳು ತಂಡಗಳು ಈ ಬಾರಿ ಸಿಸಿಎಲ್‌ನಲ್ಲಿ ಭಾಗಿಯಾಗಿದ್ದವು. ಕರ್ನಾಟಕ ಬುಲ್ಡೋಜರ್ಸ್, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಮುಂಬೈ ಹೀರೋಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್ , ಪಂಜಾಬ್ ದೆ ಶೇರ್ ತಂಡಗಳು ಭಾಗಿಯಾಗಿವೆ.

ಪ್ರತಿಯೊಂದು ತಂಡವೂ ಸಿಸಿಎಲ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿ ಆಟ ಆಡಿವೆ. ಈ ಬಾರಿಯ ಎಲ್ಲಾ ಪಂದ್ಯಗಳು ರೋಚಕವಾಗಿದ್ದವು. ಸಿನಿಮಾ ತಾರೆಯರು ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡಿ ಖುಷಿ ಪಟ್ಟಿದ್ದಾರೆ. ಇನ್ನೊಂದು ವಾರ ಸೂರತ್‌ನಲ್ಲಿ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ಅದಾದ ಬಳಿಕ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯ ಎಲ್ಲಿ ನಡೆಯುತ್ತೆ ಅನ್ನೋದು ಕ್ಲಾರಿಟಿ ಸಿಕ್ಕಿರಲಿಲ್ಲ. ಆ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ (ಎಕ್ಸ್) ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

CCL 2025 Kichcha Sudeep revealed that two semifinal and final will be played at Mysuru

ಸಿಸಿಎಲ್ 2025 ಪಂದ್ಯ ಕೊನೆಯ ಹಂತಕ್ಕೆ ಬಂದಿವೆ. ಇನ್ನೊಂದು ವಾರ ಕಳೆದರೆ ಲೀಗ್ ಹಂತದ ಪಂದ್ಯಗಳು ಮುಗಿದು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಆರಂಭ ಆಗಲಿದೆ. ಈ ಎರಡೂ ಹಂತದ ಪಂದ್ಯಗಳು ಕರ್ನಾಟಕದಲ್ಲಿ ಅದರಲ್ಲೂ ಮೈಸೂರಿನಲ್ಲಿ ನಡೆಯಲಿವೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಸಿನಿ ತಾರೆಯರೇ ಆಡುವ ಸಿಸಿಎಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ. ಒಟ್ಟು ಮೂರು ಪಂದ್ಯಗಳು ಎರಡು ದಿನಗಳ ಕಾಲ ಮಾರ್ಚ್ 1 ಹಾಗೂ ಮಾರ್ಚ್ 2ರಂದು ಮೈಸೂರಿನಲ್ಲಿ ಜರುಗಲಿದೆ. ಈ ಪಂದ್ಯಗಳಿಗೆ ಟಿಕೆಟ್ ಖರೀದಿ ಹಾಗೂ ಇನ್ನಿತರ ಸಂಗತಿಗಳ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಸದ್ಯ ಕಿಚ್ಚ ಸುದೀಪ್ ಮೈಸೂರಿನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ ಎಂದು ಟ್ವೀಟ್ (ಎಕ್ಸ್) ಮಾಡಿದ್ದಾರೆ.

"ಸಿಸಿಎಲ್‌ 2025 ನಮ್ಮ ಮೈಸೂರಿಗೆ ಬರಲಿದೆ ಎಂದು ಹೇಳುವುದಕ್ಕೆ ಖುಷಿಯಾಗುತ್ತಿದೆ. ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಮಾರ್ಚ್ 1 ಹಾಗೂ 2ರಂದು ಮೈಸೂರಿನಲ್ಲಿಯೇ ನಡೆಯಲಿದೆ. ಮೈದಾನ ನೀಡಿದ್ದಕ್ಕೆ ಹಾಗೂ ಬೆಂಬಲ ಕೊಟ್ಟಿದ್ದಕ್ಕೆ ಸಿಸಿಎಲ್ ಹಾಗೂ ಕೆಎಸ್‌ಸಿಎಗೆ ಧನ್ಯವಾದಗಳನ್ನು ಹೇಳುತ್ತೇನೆ. ಕರ್ನಾಟಕ ಬುಲ್ಡೋಜರ್ಸ್ ತಂಡ ನಿಮ್ಮೆಲ್ಲರನ್ನು ಅಲ್ಲಿ ನೋಡುವುದಕ್ಕೆ ಕಾಯುತ್ತಿದ್ದೇವೆ. ಟಿಕೆಟ್‌ಗಳ ಸಿಗುವ ವಿಚಾರ ಹಾಗೂ ಆನ್‌ಲೈನ್ ಸೇಲ್‌ಗಳು ಶೀಘ್ರದಲ್ಲಿಯೇ ಶುರುವಾಗಲಿವೆ. ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದೇನೆ" ಎಂದಿದ್ದಾರೆ.

ಇನ್ನು ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ ಸ್ಥಾನದಲ್ಲಿದೆ. ಕರ್ನಾಟಕ ಇದೂವರೆಗೂ ಆಡಿದ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಮೊದಲ ಪಂದ್ಯವನ್ನು ತೆಲುಗು ವಾರಿಯರ್ಸ್ ಜೊತೆ ಆಡಿತ್ತು. ಎರಡನೇ ಪಂದ್ಯವನ್ನು ಚೆನ್ನೈ ರೈನೋಸ್ ಜೊತೆ ಹಾಗೂ ಮೂರನೇ ಪಂದ್ಯ ಮುಂಬೈ ಹೀರೋಸ್ ಎದುರು ಆಡು ಭರ್ಜರಿ ಗೆಲುವು ಸಾಧಿಸಿ ಟಾಪ್ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಇನ್ನೊಂದು ಪಂದ್ಯವನ್ನು ಆಡಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡದಷ್ಟೇ ಸದ್ದು ಮಾಡುವುತ್ತಿರುವುದು ಬೆಂಗಾಲ್ ಟೈಗರ್ಸ್. ಕಳೆದ ಸೀಸನ್‌ನಲ್ಲಿ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಇದೇ ಬೆಂಗಾಲ್ ಟೈಗರ್ಸ್ ತಂಡ ಮಣಿಸಿತ್ತು. ಈ ಸೀಸನ್‌ನಲ್ಲಿ ಕೂಡ ಬೆಂಗಾಲ್ ಟೈಗರ್ಸ್ ತಂಡ ಕೂಡ ಮೂರು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಸೆಮಿ ಫೈನಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಎರಡೂ ತಂಡಗಳು ಯಾರೊಂದಿಗೆ ಸೆಣೆಸಾಡಲಿವೆ ಅನ್ನೋದು ಇನ್ನಷ್ಟೇ ತಿಳಿಯಬೇಕು.

More from Filmibeat

English summary
CCL 2025: Kichcha Sudeep revealed that two semifinals and a final will be played at Mysuru on March 1st and March 2nd;
Read more about: ccl 2025 kichcha sudeep cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X