CCL 2025: ಸಿಸಿಎಲ್‌ನಲ್ಲಿ ಡಾರ್ಲಿಂಗ್ ಕೃಷ್ಣ ರನ್‌ಗಳ ಸುರಿಮಳೆ: ಮಗಳ ರಿಯಾಕ್ಷನ್ ಹೇಗಿತ್ತು ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2025) ಈ ಬಾರಿ ಸಿನಿ ಪ್ರಿಯರು ಹಾಗೂ ಅಭಿಮಾನಿಗಳನ್ನು ರಂಜಿಸುತ್ತಿವೆ. ಎಲ್ಲಾ ತಂಡಗಳು ಪೈಪೋಟಿಗೆ ಬಿದ್ದು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿವೆ. ಸಿಸಿಎಲ್‌ನಲ್ಲಿ ಭಾಗವಹಿಸಿರುವ ಎಲ್ಲಾ ತಂಡದ ಆಟಗಾರರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅನ್ನು ಗಂಭೀರವಾಗಿ ಪರಿಗಣಿಸಿವೆ. ಇನ್ನು ಕೆಲವು ಆಟಗಾರರು 11ನೇ ಸೀಸನ್‌ನಲ್ಲಿ ಮಿಂಚಿದ್ದಾರೆ. ಅದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು.
ಈ ಸೀಸನ್‌ನಲ್ಲಿ ಡಾರ್ಲಿಂಗ್ ಕೃಷ್ಣ ಪಂದ್ಯಗಳನ್ನು ಆಡಿದ್ದಾರೆ. ಎರಡೂ ಪಂದ್ಯಗಳಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ತೆಲುಗು ವಾರಿಯಸ್ಸ್ ಹಾಗೂ ಚೆನ್ನೈ ರೈನೋಸ್ ತಂಡದ ನಡುವಿನ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಅಬ್ಬರಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಇವರ ಅಬ್ಬರ ಬ್ಯಾಟಿಂಗ್‌ನಿಂದ ಎರಡೂ ಪಂದ್ಯವನ್ನು ಗೆಲ್ಲುವುದಕ್ಕೆ ಸಾಧ್ಯವಾಗಿದೆ. ಅದಕ್ಕೆ ತಂಡದ ನಾಯಕ ಕಿಚ್ಚ ಸುದೀಪ್ ಫುಲ್ ಖುಷಿಯಾಗಿದ್ದಾರೆ. ಹಾಗೇ ಪತ್ನಿ ಮಿಲನಾ ನಾಗರಾಜ್ ಹಾಗೂ ಮಗಳು ಪರಿ ಕೂಡ ಸಖತ್ ಹ್ಯಾಪಿಯಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನಾ ನಾಗರಾಜ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಗಳು ಪರಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸಿನಿ ಪ್ರಿಯರು ಹಾಗೂ ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪುತ್ರಿ ಪರಿ ವಿಡಿಯೋ ನೋಡಿ ಅವರ ಫ್ಯಾನ್ಸ್ ಏನೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ? ತಿಳಿಯಲು ಮುಂದೆ ಓದಿ.
ಸಿಸಿಎಲ್ 2025ರಲ್ಲಿ ಕರ್ನಾಟಕ ಬುಲ್ಡೋಜರ್ ಆಡಿದ ಎರಡೂ ಪಂದ್ಯಗಳಲ್ಲಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್ ಸಖತ್ ಖುಷಿ ಕೊಟ್ಟಿದೆ. ಪ್ರೊಫೆಷನಲ್ ಕ್ರಿಕೆಟರ್ ಆಡುವಂತೆಯೇ ಆಡಿದ್ದಾರೆ. ಸಿಕ್ಸ್ ಹಾಗೂ ಫೋರ್ ಬಾರಿ ಜನರನ್ನು ರಂಜಿಸಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್‌ಗೆ ತೆಲುಗು ವಾರಿಯರ್ಸ್ ಹಾಗೂ ಚೆನ್ನೈ ರೈನೋಸ್ ತಂಡ ಪತರಗುಟ್ಟಿತ್ತು. ಎರಡೂ ತಂಡಗಳೂ ಡಾರ್ಲಿಂಗ್ ಕೃಷ್ಣರನ್ನು ಟಾರ್ಗೆಟ್ ಮಾಡಿ ಬೌಲಿಂಗ್ ಮಾಡಿದ್ದವು. ಕೃಷ್ಣ ಬ್ಯಾಟಿಂಗ್ ಕನ್ನಡಿಗರಿಗಂತೂ ಸಖತ್ ಮನರಂಜನೆ ನೀಡಿತ್ತು.
ಸಿಸಿಎಲ್‌ನಲ್ಲಿ ಡಾರ್ಲಿಂಗ್ ಕೃಷ್ಣ ಶೈನ್ ಆಗುತ್ತಿರುವುದಕ್ಕೆ ಪತ್ನಿ ಮಿಲನಾ ನಾಗರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ತಮ್ಮ ಮಗಳು ಪರಿ ಅಪ್ಪ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ತೆಲುಗು ವಾರಿಯರ್ಸ್ ವಿರುದ್ಧ ತಂದೆ ಸಿಕ್ಸ್ ಮೇಲೆ ಸಿಕ್ಸ್ ಬಾರಿತ್ತಿದ್ದರೆ, ಇತ್ತ ಪರಿ ಖುಷಿಯಲ್ಲಿ ಕುಣಿದಾಡಿದ್ದಾರೆ. ಈ ವಿಡಿಯೋವನ್ನು ಮಿಲನಾ ನಾಗರಾಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫೆಬ್ರವರಿ 14, 2021ರಂದು ವಿವಾಹವಾಗಿದ್ದರು. ನಿನ್ನೆ (ಫೆಬ್ರವರಿ 14) ಅವರ ವೆಡ್ಡಿಂಗ್ ಆನಿವರ್ಸರಿ ಇತ್ತು. ಅದೇ ಇದ ಕರ್ನಾಟಕ ಬುಲ್ಡೋಜರ್ ಮ್ಯಾಚ್ ಇದ್ದಿದ್ದರಿಂದ ಡಾರ್ಲಿಂಗ್ ಕೃಷ್ಣ ಮಿಸ್ ಮಾಡಿಕೊಂಡಿದ್ದರು. ಇತ್ತ ಮಿಲನಾ ನಾಗರಾಜ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತಿ ಡಾರ್ಲಿಂಗ್ ಕೃಷ್ಣ ಅವರಿಗೆ ವೆಡ್ಡಿಂಗ್ ಆನಿವರ್ಸರಿ ಶುಭಾಶಯವನ್ನು ಕೋರಿದ್ದಾರೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರಿಗೆ ಪರಿ ಎಂಬ ಮುದ್ದಾಗ ಮಗಳು ಇದ್ದಾಳೆ. ಅಪ್ಪನ ಬ್ಯಾಟಿಂಗ್ ಮೆಚ್ಚಿ ಸಂಭ್ರಮಿಸಿದ ಪರಿಯ ವಿಡಿಯೋವನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಪ್ಪನ ಬ್ಯಾಟಿಂಗ್‌ಗೆ ಮಗಳು ಪರಿನೇ ಚೀಯರ್ ಲೀಡರ್ ಎಂದು ಮಿಲನಾ ಹೇಳಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











