CCl 2025: ಮೈಸೂರಿನಲ್ಲಿ ಸಿಸಿಎಲ್ ಪಂದ್ಯ ಎಲ್ಲಿ ನಡೆಯುತ್ತೆ? ಟಿಕೆಟ್ ಖರೀದಿ ಎಲ್ಲಿ?

ಕಳೆದ ಮೂರು ವಾರಗಳಿಂದ ಸಿಸಿಎಲ್ ಪಂದ್ಯಗಳು ನಡುಯುತ್ತಿದೆ. 2025 ಪಂದ್ಯಗಳು ದೇಶದ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ಈ ಬಾರಿ ಭಾಗವಹಿಸಿದ ಏಳೂ ಪಂದ್ಯಗಳೂ ಕೂಡ ರೋಚಕತೆಯಿಂದ ಕೂಡಿತ್ತು. ಈ ವೀಕೆಂಡ್‌ನಲ್ಲಿ ಸೂರತ್‌ನಲ್ಲಿ ನಾಲ್ಕು ಹೈ ವೋಲ್ಟೇಜ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಕಿಚ್ಚ ಸುದೀಪ್ ಮುನ್ನಡೆಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಕೂಡ ಇದೆ.

ಈ ವೀಕೆಂಡ್‌ಗೆ ಲೀಗ್ ಪಂದ್ಯಗಳು ಮುಕ್ತಾಯ ಆಗಲಿವೆ. ಮುಂದಿನ ವಾರ ಮೈಸೂರಿನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದೆ. ಅದರಲ್ಲೂ ಮುನ್ನ ಸೂರತ್‌ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಫೆಬ್ರವರಿ 22ರಂದು ಸೂರತ್‌ನಲ್ಲಿ ಸಂಜೆ 6.30ಕ್ಕೆ ಆರಂಭ ಆಗುತ್ತಿದೆ.

CCl 2025 semifinal and final match in mysore location ticket and other details

ಫೆಬ್ರವರಿ 22 ಹಾಗೂ ಫೆಬ್ರವರಿ 23ರಂದು ಪಂದ್ಯಗಳು ಮುಗಿಯುತ್ತಿದ್ದಂತೆ ಮಾರ್ಚ್ 1 ಹಾಗೂ ಮಾರ್ಚ್ 2ರಂದು ಮೈಸೂರಿನಲ್ಲಿ ಪಂದ್ಯಗಳು ನಡೆಯಲಿದೆ. ಹಾಗಿದ್ದರೆ, ಮೈಸೂರಿನಲ್ಲಿ ಎಲ್ಲಿ ಮೂರು ಪಂದ್ಯಗಳು ನಡೆಯುತ್ತವೆ? ಈ ಮೂರು ಪಂದ್ಯಗಳಿಗೆ ಎಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಬಹುದು? ಸೆಮಿಫೈನಲ್ ಹಾಗೂ ಫೈನಲ್‌ಗೆ ಯಾವ ತಂಡಗಳು ಬರಬಹುದು? ಏನು ಲೆಕ್ಕಾಚಾರ ತಿಳಿಯುವುದಕ್ಕೆ ಮುಂದೆ ಓದಿ.

ಈ ಬಾರಿ ನಡೆದ ಸಿಸಿಎಲ್‌ನ ಎಲ್ಲಾ ಮ್ಯಾಚ್‌ಗಳು ಹೈ ವೋಲ್ಟೇಜ್ ಪಂದ್ಯಗಳಾಗಿದ್ದವು. ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ತೆಲುಗು ವಾರಿಯರ್ಸ್ ಸೇರಿದಂತೆ ಎಲ್ಲಾ ಟೀಮ್‌ನ ಆಟಗಾರರು ಪ್ರೊಫೆಷನಲ್‌ ಕ್ರಿಕೆಟರ್‌ಗಳ ರೀತಿಯಲ್ಲಿಯೇ ಆಟ ಆಡಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಹೈದರಾಬಾದ್‌ನಲ್ಲಿ ನಡೆದ ಪಂದ್ಯಗಳಿಗೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಪಂದ್ಯಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಚಿನ್ನಾಸ್ವಾಮಿ ಸ್ಟೇಡಿಯಂ ಫುಲ್ ಆಗಿತ್ತು. ಈ ಪಂದ್ಯವನ್ನು ವೀಕ್ಷಣೆ ಮಾಡುವುದಕ್ಕೆ ಸುಮಾರು 30 ಸಾವಿರ ಮಂದಿ ಸೇರಿಕೊಂಡಿದ್ದರು. ಕರ್ನಾಟಕದಲ್ಲಿ ಸಿಕ್ಕಿರುವ ರೆಸ್ಪಾನ್ಸ್ ಕಂಡು ತಾರೆಯರಿಗೆ ಹೊಸ ಹುರುಪು ಬಂದಿತ್ತು. ಅಲ್ಲದೇ ಆಯೋಜಕರು ಕೂಡ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯವನ್ನು ಕರ್ನಾಟಕದಲ್ಲಿಯೇ ನಡೆಯುವುದಕ್ಕೆ ತೀರ್ಮಾನಿಸಿದ್ದಾರೆ.

CCl 2025 semifinal and final match in mysore location ticket and other details

ಈ ಕಾರಣಕ್ಕೆ ಮೈಸೂರಿನಲ್ಲಿ ಎರಡು ಸೆಮಿ ಫೈನಲ್ ಪಂದ್ಯ ಹಾಗೂ ಒಂದು ಫೈನಲ್ ಪಂದ್ಯ ನಡೆಯಲಿದೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗ್ರೌಂಡ್ ಮೈಸೂರಿನಲ್ಲಿ ಮೂರು ಪಂದ್ಯಗಳು ಕೂಡ ನಡೆಯಲಿವೆ. ಈಗಾಗಲೇ ಟಿಕೆಟ್ ಖರೀದಿ ಮಾಡುವುದಕ್ಕೆ ಬುಕಿಂಗ್ ಕೂಡ ಓಪನ್ ಆಗಿದೆ. ಟಿಕೆಟ್ ಜೀನಿಯಲ್ಲಿ ಆಪ್ ಮೂಲಕ ಈ ಮೂರು ಪಂದ್ಯಗಳ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಸಿಕ್ಕಂತೆ ಮೈಸೂರಿನಲ್ಲೂ ಅದೇ ರೆಸ್ಪಾನ್ಸ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ತಾರೆಯರು ಇದ್ದಾರೆ.

ಇನ್ನು ಸೆಮಿಫೈನಲ್‌ಗೆ ಯಾವ ತಂಡಗಳು ಬರಬಹುದು ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್‌ ತಂಡ ಆಡಿದ ಮೂರು ಪಂದ್ಯಗಳನ್ನು ಗೆದ್ದಿವೆ. ಎರಡೂ ತಂಡಗಳ ರನ್‌ ರೇಟ್ ಕೂಡ ಅಷ್ಟೇ ಉತ್ತಮವಾಗಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿ ಫೈನಲ್‌ಗೆ ಈಗಾಗಲೇ ಎಂಟ್ರಿ ಕೊಟ್ಟಿವೆ. ಇನ್ನ ಎರಡು ಸ್ಥಾನಗಳಿಗೆ ನಾಲ್ಕು ಪಂದ್ಯಗಳು ಸೆಣೆಸಾಡಲಿವೆ. ಭೋಜ್‌ಪುರಿ ದಬಾಂಗ್ಸ್, ಪಂಜಾಬ್ ದೇ ಶೇರ್, ಚೆನ್ನೈ ರೈನೋಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳಲ್ಲಿ ಯಾರು ಸೆಮಿ ಫೈನಲ್‌ಗೆ ಬರುತ್ತಾರೆ ಅನ್ನೋದು ಈ ವೀಕೆಂಡ್‌ನಲ್ಲಿ ಗೊತ್ತಾಗಲಿದೆ.

More from Filmibeat

English summary
CCl 2025: semifinal and final match in mysore location, ticket and other details;
Read more about: ccl 2025 mysore cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X