CCL 2025: ಸೆಮಿಫೈನಲ್ ವೇಳೆ ಬುಲ್ಡೋಜರ್ ತಂಡ ಸೇರಿಕೊಂಡ ಡೇಂಜರಸ್ ಬ್ಯಾಟ್ಸ್‌ಮ್ಯಾನ್: ಯಾರಿವರು?
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2025) ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ವೀಕೆಂಡ್‌ನಲ್ಲಿ ಎರಡು ಸೆಮಿ ಫೈನಲ್ ಪಂದ್ಯ ಹಾಗೂ ಫೈನಲ್ ನಡೆಯಲಿದೆ. ನಾಳೆ (ಮಾರ್ಚ್ 1) ಬೆಂಗಾಲ್ ಟೈಗರ್ಸ್ ಹಾಗೂ ಪಂಜಾಬ್ ದೆ ಶೇರ್ ಮಧ್ಯೆ ಮೊದಲ ಸೆಮಿ ಫೈನಲ್ ಪಂದ್ಯಗಳು ನಡೆದರೆ, ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ಮಧ್ಯೆ ಎರಡನೇ ಸೆಮಿ ಫೈನಲ್ ಪಂದ್ಯಗಳು ನಡೆಯಲಿದೆ.
ಈ ಎರಡು ಪಂದ್ಯಗಳಲ್ಲಿ ಗೆಲ್ಲುವವರು ಭಾನುವಾರ (ಮಾರ್ಚ್ 2) ನಡೆಯಲಿರುವ ಫೈನಲ್ ಆಡಲಿದ್ದಾರೆ. ಸದ್ಯ ಎರಡು ಸೆಮಿ ಫೈನಲ್ ಪಂದ್ಯಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡದ ಮಧ್ಯೆ ರೋಚಕ ಪಂದ್ಯ ನಡೆಯುವುದಂತೂ ಗ್ಯಾರಂಟಿ. ಸೆಮಿ ಫೈನಲ್ ಪಂದ್ಯ ನಡೆಯುವ ಹೊತ್ತಲ್ಲೇ ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಡೇಂಜರಸ್ ಬ್ಯಾಟ್ಸ್‌ಮ್ಯಾನ್ಸ್ ಸೇರ್ಪಡೆಯಾಗಿದ್ದಾರೆ.

ಕಳೆದ ಸಿಸಿಎಲ್ ಸೀಸನ್‌ನಲ್ಲಿ ಈ ಡೇಂಜರಸ್ ಬ್ಯಾಟ್ಸ್‌ಮ್ಯಾನ್ ಚೆನ್ನೈ ರೈನೋಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಚೆನ್ನೈ ತಂಡ ಇನ್ನೂ ಆ ಬ್ಯಾಟಿಂಗ್ ಅನ್ನು ಮರೆತಿಲ್ಲ. ಆ ಆಟಗಾರ ಸಿಸಿಎಲ್ 11ನೇ ಸೀಸನ್‌ನ ಲೀಗ್ ಮ್ಯಾಚ್‌ಗಳಲ್ಲಿ ಆಡಿಲ್ಲ. ಆದರೆ, ಅಚ್ಚರಿ ಎಂಬಂತೆ ಸೆಮಿಫೈನಲ್ ಪಂದ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಆಗಿದೆ. ಹಾಗಿದ್ದರೆ, ಆ ಬ್ಯಾಟ್ಸ್‌ಮ್ಯಾನ್ ಯಾರು? ಸ್ಪೋಟಕ ಬ್ಯಾಟ್ಸ್‌ಮ್ಯಾನ್ ಈಗ ಎಂಟ್ರಿ ಕೊಟ್ಟಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೈಸೂರಿನ ಶ್ರೀ ಕಂಠದತ್ತ ನರಸಿಂಹರಾಜ ದತ್ತ ಒಡೆಯರ್ ಮೈದಾನದಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತಿವೆ. ಇಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡ ಸೀಸನ್‌ನಲ್ಲಿ ಎರಡನೇ ಬಾರಿ ಸೆಣೆಸಾಡಲಿದೆ. ಲೀಗ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕರ್ನಾಟಕ ಬುಲ್ಡೋರ್ಸ್ ತಂಡ ಮತ್ತೊಮ್ಮೆ ಕಾದಟಕ್ಕೆ ಇಳಿಯಲಿದೆ. ಇಬ್ಬರೂ ಬಲಿಷ್ಠ ತಂಡಗಳಾಗಿದ್ದು ಕ್ರಿಕೆಟ್ ಪ್ರಿಯರಿಗೆ ರೋಚಕ ಪಂದ್ಯ ನೋಡುವುದಕ್ಕೆ ಸಿಗಲಿದೆ.
ಅಂದ್ಹಾಗೆ, ಕರ್ನಾಟಕ ಬುಲ್ಡೋಜರ್ ತಂಡವನ್ನು ಸೇರಿಕೊಂಡಿರುವ ಆ ಸ್ಪೋಟಕ ಬ್ಯಾಟ್ಸ್‌ಮ್ಯಾನ್ ಮತ್ಯಾರೂ ಅಲ್ಲ ಅರುಣ್ ಬಚ್ಚನ್. ಕರ್ನಾಟಕ ಬುಲ್ಡೋಜರ್ ತಂಡ ಅರುಣ್ ಬಚ್ಚನ್ ಅವರನ್ನು ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿದೆ. ಇಷ್ಟು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಅರಣ್ ಬಚ್ಚನ್ ಸೆಮಿ ಫೈನಲ್ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಇವೆ. ಈ ಮೂಲಕ ಡಾರ್ಲಿಂಗ್ ಕೃಷ್ಣಗೆ ಒಳ್ಳೆಯ ಕಂಪನಿ ಸಿಕ್ಕಿದಂತೆ ಆಗಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅರುಣ್ ಬಚ್ಚನ್ ಕರ್ನಾಟಕ ಬುಲ್ಡೋಜರ್ ತಂಡದ ಪರ ಆಡಿದ್ದಾರೆ. ತಮ್ಮ ಸ್ಪೋಟಕ ಹೊಡೆತಗಳಿಗೆ ಅರುಣ್ ಬಚ್ಚನ್ ಜನಪ್ರಿಯರಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಅರುಣ್ ಬಚ್ಚನ್ ಇದೇ ಚೆನ್ನೈ ರೈನೋಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಬೆಚ್ಚಿ ಬೌಲರ್‌ಗಳ ಬೆವರಿಳಿಸಿದ್ದರು. ಕೇವಲ 18 ಎಸೆತಗಳಿಗೆ ಅರುಣ್ ಬಚ್ಚನ್ 57 ರನ್‌ಗಳನ್ನು ಸಿಡಿಸಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಿದ್ದರು. ಈಗ ಮತ್ತೆ ಚೆನ್ನೈ ರೈನೋಸ್ ತಂಡದ ವಿರುದ್ಧವೇ ಸೆಮಿ ಫೈನಲ್ ತಂಡದ ವಿರುದ್ಧ ಆಟ ಆಡಲಿದ್ದಾರೆ ಎನ್ನಲಾಗಿದೆ.
ಅರುಣ್ ಬಚ್ಚನ್ ಎಂಟ್ರಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಬಲ ಬಂದಂತೆ ಆಗಿದೆ. ಇನ್ನು ಕಿಚ್ಚ ಸುದೀಪ್ ಹಾಗೂ ಅವರ ತಂಡ ಈಗಾಗಲೇ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಭರ್ಜರಿ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದೆ. ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಟ್ಟ ದರ್ಶನವನ್ನು ಪಡೆದು ಬಂದಿದ್ದಾರೆ. ಹೀಗಾಗಿ ನಾಳೆಯ (ಮಾರ್ಚ್ 1) ಪಂದ್ಯ ಕರ್ನಾಟಕ ಬುಲ್ಡೋಜರ್ ಹಾಗೂ ಚೆನ್ನೈ ರೈನೋಸ್ ಮಧ್ಯೆ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಬಹುದು.


Click it and Unblock the Notifications











