CCL 2025: ಶತಕ ವೀರ ಡಾರ್ಲಿಂಗ್ ಕೃಷ್ಣ 10ನೆ ನಂಬರ್ ಜೆರ್ಸಿಯನ್ನೇ ಧರಿಸೋದೇಕೆ?

ಸಿಸಿಎಲ್ ಸೀಸನ್ 11 (CCL 2025) ರೋಚಕವಾಗಿದೆ. ಪ್ರತಿಯೊಂದು ತಂಡವೂ ರೊಚ್ಚಿಗೆದ್ದು ಪಂದ್ಯವನ್ನು ಆಡುತ್ತಿವೆ. ಈ ಬಾರಿ ಸಿಸಿಎಲ್ ಗೆಲ್ಲುವುದಕ್ಕೆ ಭಾಗವಹಿಸಿದ ಏಳೂ ತಂಡವೂ ಕಠಿಣ ಶ್ರಮ ಹಾಕುತ್ತಿವೆ. ಅದರಲ್ಲೂ ಕರ್ನಾಟಕ ಬುಲ್ಡೋಜರ್ಸ್ ಟೀಮ್ ಮೊದಲ ಮೂರು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ವಿನ್ ದಾಖಲಿಸಿದೆ. ಈ ಮೂರು ಪಂದ್ಯಗಳಲ್ಲಿ ಡಾರ್ಲಿಂಗ್ ಕೃಷ್ಣ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ.

ಕರ್ನಾಟಕ ಬುಲ್ಡೋಜರ್ ತಂಡದ ಆರಂಭಿಕ ಆಟಗಾರನಾಗಿ ಡಾರ್ಲಿಂಗ್ ಕೃಷ್ಣ ಕಣಕ್ಕಿಳಿಯುತ್ತಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲೂ ಡಾರ್ಲಿಂಗ್ ಕೃಷ್ಣ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್‌ಗಳ ಸುರಿಮಳೆಯನ್ನು ಸುರಿಸಿದ್ದಾರೆ. ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್ ಹಾಗೂ ಮುಂಬೈ ಹೀರೋಸ್ ನಡುವಿನ ಪಂದ್ಯದಲ್ಲಿ ಮಿಂಚಿದ್ದಾರೆ.

CCL 2025 why Karnataka Bulldozers power hitter Darling Krishna choose jersey no 10

ಡಾರ್ಲಿಂಗ್ ಕೃಷ್ಣ ಈ ಮೂರು ಪಂದ್ಯಗಳಲ್ಲೂ ರನ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ತೆಲುಗು ವಾರಿಯರ್ಸ್ ತಂಡದಿಂದ ಶುಭಾರಂಭ ಮಾಡಿದ್ದ ಡಾರ್ಲಿಂಗ್ ಕೃಷ್ಣ ರನ್‌ ಮಷಿನ್ ಆಗಿ ಹೊರಹೊಮ್ಮಿದ್ದಾರೆ. ಅದಕ್ಕೂ ಡಾರ್ಲಿಂಗ್ ಕೃಷ್ಣ ಅವರ ಸ್ಪೋಟಕ ಬ್ಯಾಟಿಂಗ್‌ಗೆ ಪ್ರೇರಣೆ ಯಾರು? 10 ನಂಬರ್ ಜೆರ್ಸಿ ಹಿಂದಿನ ಕಥೆಯೇನು? ಅನ್ನೋದನ್ನು ಫಿಲ್ಮಿಬೀಟ್ ತೆಲುಗು ಜೊತೆ ಹಂಚಿಕೊಂಡಿದ್ದಾರೆ. ಅಲ್ಲಿ ಏನು ಹೇಳಿದ್ದಾರೆ? ಅನ್ನೋದನ್ನು ನೋಡೋಣ.

ಡಾರ್ಲಿಂಗ್ ಕೃಷ್ಣ ತೆಲುಗು ವಾರಿಯರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 80 ರನ್‌ಗಳನ್ನು ಬಾರಿಸಿದ್ದರು. ಎರಡನೇ ಪಂದ್ಯ ಚೆನ್ನೈ ರೈನೋಸ್ ಜೊತೆ ಮೊದಲ ಇನ್ನಿಂಗ್ಸ್‌ನಲ್ಲಿ 23 ಎಸೆತಗಳಿಗೆ 50 ರನ್ ಗಳಿಸಿದ್ದರು. ಇನ್ನು ಮುಂಬೈ ಹೀರೋಸ್ ಜೊತೆಗಿನ ಮೂರನೇ ಪಂದ್ಯದಲ್ಲಿ 36 ಎಸೆತಗಳಿಗೆ 111 ರನ್‌ ಗಳಿಸಿದ್ದರು. ಆಡಿದ ಮೂರು ಪಂದ್ಯಗಳಿಂದ 241 ರನ್‌ಗಳನ್ನು ಬಾರಿಸಿ ಸಿಸಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

ಈ ವೇಳೆ ಡಾರ್ಲಿಂಗ್ ಕೃಷ್ಣ ಫಿಲ್ಮಿಬೀಟ್‌ ಜೊತೆ ಮಾತಿಗೆ ಸಿಕ್ಕಿದ್ದರು. ಈ ವೇಳೆ ತನಗಿರುವ ಕ್ರಿಕೆಟ್ ಮೇಲಿನ ಆಸಕ್ತಿಗೆ ಪ್ರೇರಣೆ ಯಾರು? ತನ್ನ ಜೆರ್ಸಿ ನಂಬರ್‌ 10 ಗುಟ್ಟೇನು ಅನ್ನೋದನ್ನು ರಟ್ಟು ಮಾಡಿದ್ದಾರೆ. "ಎಲ್ಲಾ 80 ಹಾಗೂ 90ರ ದಶಕದಲ್ಲಿ ಹುಟ್ಟಿದವರಿಗೆ ಸಚಿನ್ ತೆಂಡೂಲ್ಕರ್ ಪ್ರೇರಣೆ. ನನ್ನ ಜೆರ್ಸಿ ನಂಬರ್ ಕೂಡ 10. ಎಲ್ಲರೂ ಕ್ರಿಕೆಟ್ ಶುರು ಮಾಡುವುದಕ್ಕೆ ಸಚಿನ್ ತೆಂಡೂಲ್ಕರ್ ಪ್ರೇರಣೆಯಾಗಿರುತ್ತಾರೆ. ಕ್ರಿಕೆಟ್ ಬಗ್ಗೆ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾನು ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿದ್ದೇನೆ." ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.

ಇನ್ನು ಭವಿಷ್ಯದಲ್ಲಿ ಕ್ರಿಕೆಟ್ ಅನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. "ನಾವು ಸಿನಿಮಾ ಸ್ಟಾರ್‌ಗಳು. ಕ್ರಿಕೆಟ್ ಅನ್ನು ಫ್ಯೂಚರ್ ಅಂತೇನು ಇಟ್ಟುಕೊಂಡಿಲ್ಲ. ಸದ್ಯದ ಮಟ್ಟಿಗೆ ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿದ್ದೇನೆ. ನಮ್ಮ ದೇಹ ಹಾಗೂ ವಯಸ್ಸು ಎಲ್ಲಿವರೆಗೂ ಒಗ್ಗಿಕೊಳ್ಳುತ್ತೋ ಅಲ್ಲಿವರೆಗೂ ಕ್ರಿಕೆಟ್ ಅನ್ನು ಎಂಜಾಯ್ ಮಾಡೋಣ." ಎಂದು ಹೇಳಿದ್ದಾರೆ.

ಇನ್ನು ಕಿಚ್ಚ ಸುದೀಪ್ ನಾಯಕತ್ವದಲ್ಲಿ ಆಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ನಾನು ಕಿಚ್ಚ ಸುದೀಪ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ನಾನು ಅವರೊಂದಿಗೆ ಕೇವಲ ಕ್ರಿಕೆಟ್ ಅನ್ನು ಅಷ್ಟೇ ಆಡುತ್ತಿಲ್ಲ. ಸಾಕಷ್ಟು ಸಮಯವನ್ನು ಅಂತಹ ದೊಡ್ಡ ಸ್ಟಾರ್ ನಟನೊಂದಿಗೆ ಕಲಿಯೋದು ಬಹಳಷ್ಟಿದೆ. ಅವರೊಂದಿಗೆ ಬಹಳಷ್ಟು ಕಲಿತಿದ್ದೇನೆ. ಅವರ ಹತ್ತಿರದಲ್ಲಿ ಇದ್ದು ಇನ್ನಷ್ಟು ಕಲಿಯಬೇಕಿದೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

More from Filmibeat

English summary
CCL 2025: why Karnataka Bulldozers power hitter Darling Krishna choose jersey no 10;
Read more about: ccl 2025 darling krishna cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X