CCL 2026:ಚೆನ್ನೈ ವಿರುದ್ಧ ಜೆಕೆ 50 ರನ್ ಸಿಡಿಸಿದ ಸೀಕ್ರೆಟ್ ಏನು? ಜೇಬಿನಲ್ಲಿದ್ದ ಚೀಟಿಯಲ್ಲಿ ಏನಿತ್ತು?

ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL) ಕೊನೆಯ ಹಂತಕ್ಕೆ ಬಂದಿದೆ. ನಿನ್ನೆ (ಜನವರಿ 31) ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ರೋಚಕವಾಗಿತ್ತು. ಎರಡೂ ತಂಡಗಳ ಸೆಣೆಸಾಟ ಅಂತರಾಷ್ಟ್ರೀಯ ತಂಡಗಳ ನೀಡುವ ಪೈಪೋಟಿಗೇನು ಕಮ್ಮಿಯಿರಲಿಲ್ಲ. 2ನೇ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಪಂದ್ಯ ಗೆದ್ದು ಫೈನಲ್ ತಲುಪಿದೆ.

ಕರ್ನಾಟಕ ಹಾಗೂ ಚೆನ್ನೈ ಎರಡೂ ತಂಡಗಳೂ ಪರಸ್ಪರ ಪ್ರತಿಸ್ಪರ್ಧಿಗಳು. ಪ್ರತಿ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ಹಣಾಹಣಿ ರೋಚಕವಾಗಿರುತ್ತೆ. ಕಳೆದ ಬಾರಿ ಕರ್ನಾಟಕ ತಂಡವನ್ನು ಚೆನ್ನೈ ತಂಡದ ಸೋಲಿಸಿ ಫೈನಲ್ ತಲುಪಿತ್ತು. ಈ ಬಾರಿ ಮತ್ತೆ ಸೆಮಿಫೈನಲ್‌ನಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಿತ್ತು.

CCL 2026 Karnataka Bulldozers JK revealed his secret match winning 50 against Chennai Rhinos

ಪಂದ್ಯದ ಆರಂಭದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದ್ದರೂ, ಚೆನ್ನೈ 161 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಚೆನ್ನೈ ರೈನೋಸ್ ರನ್ ಚೇಸಿಂಗ್ ಮಾಡಲು ಮುಂದಾದ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಬ್ಯಾಟಿಂಗ್ ಶುರು ಮಾಡಿತ್ತು. ಆದರೆ, ಒಂದು ನಿರೂಪ್ ಭಂಡಾರಿ ರನ್ ಔಟ್ ಆಗುತ್ತಿದ್ದಂತೆ ಕಿಚ್ಚ ಪಡೆಯ ವಿಕೆಟ್‌ಗಳು ಉದುರುವುದಕ್ಕೆ ಶುರುವಾಗಿದ್ದವು. ಆಗ ತಂಡಕ್ಕೆ ಆಸೆಯಾಗಿ ನಿಂತಿದ್ದು ಜಯರಾಮ್ ಕಾರ್ತಿಕ್.

ಚೆನ್ನೈ ತಂಡ ಒಂದ್ಕಡೆ ಕರ್ನಾಟಕ ಬುಲ್ಡೋಜರ್ಸ್ ತಂಡದ ವಿಕೆಟ್ ಉರುಳಿಸುತ್ತಿದ್ದರೆ, ಇನ್ನೊಂದು ಕಡೆ ಜೆಕೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಕರ್ನಾಟಕ್ಕೆ ಸಿಗುವ ಎಸೆತಗಳಿಗಿಂತ ದುಪ್ಪಟ್ಟು ರನ್‌ಗಳ ಅವಶ್ಯಕತೆ ಇದೆ ಎನ್ನುವಾಗಲೂ ಜೆಕೆ ತಾಳ್ಮೆಯ ಆಟವನ್ನೇ ಆಡುತ್ತಿದ್ದರು. ಇನ್ನೇನು ಈ ಬಾರಿ ಕೂಡ ಸೆಮಿ ಫೈನಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ ಔಟ್ ಎನ್ನುವಾಗಲೇ ಜೆಕೆ ಸಿಡಿದೆದ್ದಿದ್ದರು.

ಕೊನೆಯ ನಾಲ್ಕು ಓವರ್‌ಗಳು ಇದೆ ಎನ್ನುವಾಗ ಜೆಕೆ ಆರ್ಭಟ ಶುರುವಾಗಿತ್ತು. ಚೆನೈ ರೈನೋಸ್ ತಂಡದ ನಾಯಕ ವಿಕ್ರಮ್ ಬೌಲಿಂಗ್‌ಗೆ ಸಿಕ್ಸ್, ಫೋರ್‌ಗಳನ್ನು ಸಿಡಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಇನ್ನೂ ಸ್ವಲ್ಪ ತಾಳ್ಮೆಯಿಂದ ಆಟ ಆಡಿದ್ದರೆ, ಅವರೇ ನಿಂತು ಗೆಲ್ಲಿಸಬಹುದಿತ್ತು. ಆದರೆ, ಇನ್ನೇನು ಕೆಲವೇ ರನ್‌ಗಳು ಬಾಕಿಯಿದೆ ಎನ್ನುವಾಗಲೇ ಜೆಕೆ 50 ರನ್ ಗಳಿಸಿ ಔಟ್ ಆದರು.

ಜೆಕೆ 44 ಎಸೆತಗಳಲ್ಲಿ 50 ರನ್ ಗಳಿಸಿ ಔಟ್ ಆಗಿದರು. ಇದರಲ್ಲಿ 4 ಫೋರ್ ಹಾಗೂ 3 ಸಿಕ್ಸ್‌ ಸೇರಿವೆ. ಸೆಮಿ ಫೈನಲ್‌ನಲ್ಲಿ ಜೆಕೆ ಹೀಗೆ ರೊಚ್ಚಿಗೆದ್ದು ಬ್ಯಾಟಿಂಗ್ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಕಾರಣ. ಪಂದ್ಯ ಆರಂಭಕ್ಕೂ ಮುನ್ನ ಜೆಕೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತೇನೆಂದು ಒಂದು ಚೀಟಿಯಲ್ಲಿ ಬರೆದು ತನ್ನ ಬಳಿ ಇಟ್ಟುಕೊಳ್ಳುವಂತೆ ಹೇಳಿದ್ದರಂತೆ. ಅದರಂತೆ ಜೆಕೆ ಚೀಟಿ ಬರೆದು ಇಟ್ಟುಕೊಂಡಿದ್ದರು. ಅದೇ ಸೆಮಿಫೈನಲ್‌ನಲ್ಲಿ 50 ರನ್ ಬಾರಿಸಿ ಕರ್ನಾಟಕ ಬುಲ್ಡೋಜರ್ಸ್ ಗೆಲುವಿನ ರೂವಾರಿಯಾಗುವುದಕ್ಕೆ ಕಾರಣ ಎಂದು ಹೇಳಿದ್ದಾರೆ.

ಜಯರಾಮ್ ಕಾರ್ತಿಕ್‌ಗೆ ಕಿಚ್ಚ ಸುದೀಪ್ ಹೀಗೆ ಮ್ಯಾನಿಫೆಸ್ಟೇಷನ್ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರಂತೆ. ಕಿಚ್ಚ ಹೇಳಿದಂತೆ ಜೆಕೆ ಕೂಡ ನಡೆದುಕೊಂಡಿದ್ದರು. ಅದೇ ಈ ಪಂದ್ಯದ ಯಶಸ್ಸಿಗೆ ಕಾರಣವೆಂದು ಜೆಕೆ ಹೇಳಿಕೊಂಡಿದ್ದಾರೆ. ಈಗ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ಪ್ರವೇಶಿಸಿದ್ದು, ಬೆಂಗಾಲ್ ಟೈಗರ್ಸ್ ವಿರುದ್ಧ ಸೆಣೆಸಲಿದ್ದಾರೆ.

More from Filmibeat

English summary
CCL 2026: Karnataka Bulldozers JK revealed his secret match winning 50 against Chennai Rhinos.
Read more about: ccl 2026 karnataka bulldozers jk
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X