CCL 2026: ಸಿಸಿಎಲ್ 12ನೇ ಸೀಸನ್‌ಗೆ ಮುಹೂರ್ತ; ಕರ್ನಾಟಕ ಬುಲ್ಡೋಜರ್ಸ್ ಪ್ರಾಕ್ಟೀಸ್.. ಕಿಚ್ಚ ಬೌಲಿಂಗ್ ನೋಡಿದ್ರಾ?

ಇನ್ನೇನು ಈ ವರ್ಷಾ ಮುಗೀತಾ ಬಂತು ಅಂದರೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರು ಅಂತಲೇ. ಇಷ್ಟೊತ್ತಿಗಾಗಲೇ ಸಿಸಿಎಲ್ (CCL) ಆರಂಭ ಆಗಬೇಕಿತ್ತು. ಆದರೆ, ಇನ್ನೂ ಶುರುವಾಗಿಲ್ಲ. ಇದಕ್ಕೊಂದು ಬಲವಾದ ಕಾರಣವಿದೆ. ಈ ಹಿಂದೆನೆ ಸಿಸಿಎಲ್ ಸೀಸನ್ 12 ನವೆಂಬರ್‌ಗೆ ಆರಂಭ ಆಗುತ್ತೆಂದು ಅನೌನ್ಸ್ ಮಾಡಲಾಗಿತ್ತು. ಬಟ್ ಸೆಲೆಬ್ರೆಟಿಗಳು ಮೈದಾನಕ್ಕೆ ಇಳಿಯಲಿಲ್ಲ. ಸ್ಟಾರ್‌ಗಳು ಪ್ರಾಕ್ಟೀಸ್ ಮಾಡುವುದು ಎಲ್ಲೂ ಕಾಣಿಸಿಕೊಳ್ಳಲೂ ಇಲ್ಲ.

ಇನ್ನೇನು ನವೆಂಬರ್ ಮುಗಿಯುತ್ತಿದೆ ಎನ್ನುವಾಗಲೇ ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸ ಶುರು ಮಾಡಿಕೊಂಡಿದೆ. ಈ ಅಭ್ಯಾಸ ಪಂದ್ಯದಲ್ಲಿ ಕಿಚ್ಚ ಸುದೀಪ್ ಕೂಡ ಭಾಗವಹಿಸಿರುವುದು ವಿಶೇಷ. ಕಿಚ್ಚ ಸಿನಿಮಾ, ಬಿಗ್ ಬಾಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕೂಡ ಅವರ ನೆಚ್ಚಿನ ಕ್ರೀಡೆ ಕ್ರಿಕೆಟ್‌ಗೂ ಹೆಚ್ಚು ಗಮನ ಕೊಟ್ಟಿದ್ದಾರೆ.

CCL 2026 Karnataka Bulldozers team members started practicing with Kichcha Sudeep

ಕಿಚ್ಚ ಸುದೀಪ್ ಎಂದಿನಂತೆ ಪ್ರಾಕ್ಟಿಸ್ ಆರಂಭ ಮಾಡಿದ್ದಾರೆ. ಶೀಘ್ರದಲ್ಲಿಯೇ ಸಿಸಿಎಲ್ ಪಂದ್ಯಾವಳಿಗಳು ಆರಂಭ ಆಗಲಿವೆ. ಹಾಗಿದ್ದರೆ, ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಯಾವಾಗ ಆರಂಭ ಆಗುತ್ತೆ? ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಯಾರೆಲ್ಲ ಆಟ ಆಡುತ್ತಾರೆ? ಯಾರೆಲ್ಲ ಪ್ರಾಕ್ಟೀಸ್‌ನಲ್ಲಿ ಭಾಗವಹಿಸಿದ್ದಾರೆ? ಈ ಬಾರಿ ತಡವಾಗಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

ಸಿಸಿಎಲ್ ಯಾವಾಗಿಂದ ಶುರು?

ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಸೀಸನ್ 12 ಅದ್ಧೂರಿ ಚಾಲನೆಗೆ ವೇದಿಕೆ ರೆಡಿಯಾಗುತ್ತಿದೆ. ಈಗಾಗಲೇ ಬೇರೆ ತಂಡಗಳು ಕ್ರಿಕೆಟ್ ಪ್ರಾಕ್ಟೀಸ್ ಅನ್ನು ಆರಂಭ ಮಾಡಿವೆ. ಅದರಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಕೂಡ ಒಂದು. ಕರ್ನಾಟಕ ಬುಲ್ಡೋಜರ್ಸ್ ಟೀಮ್ ಈಗಾಗಲೇ ನೆಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದೆ. ಮೂಲಗಳ ಪ್ರಕಾರ ಈ ಬಾರಿ ಸಿಸಿಎಲ್ ಜನವರಿ 10ರಿಂದ ಅದ್ಧೂರಿಯಾಗಿ ಆರಂಭ ಆಗುತ್ತಿದೆ.

ತಡವಾಗಿದ್ದಕ್ಕೆ ಕಾರಣವೇನು?

ಹಾಗೆ ನೋಡಿದರೆ ಸಿಸಿಎಲ್ ಇಷ್ಟೊತ್ತಿಗಾಗಲೇ ಶುರುವಾಗಬೇಕಿತ್ತು. ನವೆಂಬರ್ ತಿಂಗಳಲ್ಲಿ ಆರಂಭ ಆಗಬೇಕಿದ್ದ ಸಿಸಿಎಲ್ ಜನವರಿ ಪೋಸ್ಟ್ ಪೋನ್ ಆಗಿದ್ದಕ್ಕೆ ಕಾರಣವಿದೆ. ಇತ್ತೀಚೆಗೆ ನಡೆದ ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುವುದಕ್ಕೆ ಅನುಮತಿ ಸಿಕ್ಕಿಲ್ಲ. ಈ ಬಾರಿ ಹೆಚ್ಚಿನ ಪಂದ್ಯಗಳನ್ನು ಇಲ್ಲೇ ಆಡುವುದಕ್ಕೆ ನಿರ್ಧಾರ ಆಗಿತ್ತು ಎನ್ನಲಾಗಿದೆ. ಕ್ರೀಡಾಂಗಣಗಳು ಬ್ಯುಸಿಯಾಗಿರುವುದರಿಂದ ಈ ತಡಕ್ಕೆ ಕಾರಣವೆಂದು ಹೇಳಲಾಗಿದೆ. ಈಗ ಭಾರತೀಯ ಕ್ರಿಕೆಟ್ ತಂಡ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ಮತ್ತೆ ಚಿನ್ನಸ್ವಾಮಿಯಲ್ಲಿ ಆಡುವುದಕ್ಕೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಿಚ್ಚನ ಬೌಲಿಂಗ್ ಪ್ರಾಕ್ಟೀಸ್

ಸಿಸಿಎಲ್ ಇತಿಹಾಸದಲ್ಲಿ ಕಿಚ್ಚ ಸುದೀಪ್ ಬೌಲಿಂಗ್ ಮಾಡಿದ್ದನ್ನು ಯಾರೂ ನೋಡಿದ್ದಿಲ್ಲ. ಪ್ರಾಕ್ಟೀಸ್‌ ಮಾಡುವಾಗಲೂ ಬೌಲಿಂಗ್ ಮಾಡಿದ್ದು, ತೀರಾ ವಿರಳ. ಆದರೆ, ಈ ಬಾರಿ ಕಿಚ್ಚ ಸುದೀಪ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಪಂದ್ಯಗಳಲ್ಲಿ ಕಿಚ್ಚ ಕೀಪಿಂಗ್ ಬಿಟ್ಟು ಬೌಲಿಂಗ್ ಮಾಡಬಹುದೇ ಎಂಬ ನಿರೀಕ್ಷೆಯಿದೆ. ಸದ್ಯ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ.

ಪ್ರಾಕ್ಟೀಸ್ ಮಾಡ್ತಿರೋದ್ಯಾರು?

ಸಿಸಿಎಲ್ ಪಂದ್ಯಗಳಿಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಅಖಾಡಕ್ಕೆ ಇಳಿದಿದ್ದಾರೆ. ಕಿಚ್ಚ ಸುದೀಪ್, ಜೆಕೆ, ರಾಜೀವ್, ಕರ್ಣ ಸೇರಿದಂತೆ ಹಲವು ಮಂದಿ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೂ ಸ್ಟಾರ್ ಪ್ಲೇಯರ್‌ಗಳು ತಂಡವನ್ನು ಸೇರಿಕೊಳ್ಳಬೇಕಿದೆ. ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಪ್ರದೀಪ್, ಚಂದನ್, ಸುನೀಲ್ ಇವರೆಲ್ಲವೂ ಅಭ್ಯಾಸಕ್ಕೆ ಯಾವಾಗ ಬರುತ್ತಾರೆಂಬು ಇನ್ನಷ್ಟೇ ತಿಳಿಯಬೇಕಿದೆ.

More from Filmibeat

English summary
CCL 2026: Karnataka Bulldozers team members started practicing with Kichcha Sudeep.
Read more about: ccl karnataka bulldozers ccl 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X