ರೋಹಿತ್ ಶರ್ಮಾ ಶೈಲಿಯಲ್ಲಿ ಹೆಜ್ಜೆ ಹಾಕಿ ಕಿಚ್ಚ ಸುದೀಪ್; ಕರ್ನಾಟಕ ಬುಲ್ಡೋಜರ್ಸ್‌ಗೆ ಸಿಕ್ಕ ಹಣವೆಷ್ಟು?

2026ರ ಸಿಸಿಎಲ್ ಪಂದ್ಯಗಳಿಗೆ ತೆರೆಬಿದ್ದಿದೆ. ನಿನ್ನೆ (ಫೆಬ್ರವರಿ 1) ಕಿಚ್ಚ ಸುದೀಪ್ ನಾಯಕತ್ವ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ಫೈನಲ್ ಪಂದ್ಯಗಳು ನಡೆದಿದ್ದವು. ಈ ಪಂದ್ಯದಲ್ಲಿ ಸುದೀಪ್ ಪಡೆ ಆಯಾಸವಿಲ್ಲ ಗೆದ್ದು ಬೀಗಿದೆ. ಈ ಮೂಲಕ ಮೂರನೇ ಬಾರಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ.

ಕಿಚ್ಚ ಸುದೀಪ್‌ಗೆ ಸಿಸಿಎಲ್ 12ನೇ ಆವೃತ್ತಿ ಗೆದ್ದಿದ್ದು ಡಬಲ್ ಸಂಭ್ರಮ. ಒಂದ್ಕಡೆ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 30 ವರ್ಷಗಳನ್ನು ಪೂರೈಸಿದರೆ, ಇನ್ನೊಂದು ಕಡೆ ಸುಮಾರು 12 ವರ್ಷಗಳಿಂದ ಟ್ರೋಫಿ ಗೆಲ್ಲುವುದಕ್ಕೆ ಕಾದು ಕೂತಿದ್ದ ಕಿಚ್ಚ 12ನೇ ಸೀಸನ್‌ ಅನ್ನೇ ಗೆದ್ದು ಸಂಭ್ರಮಿಸಿದ್ದಾರೆ. ಕಿಚ್ಚನಿಗೆ 12 ಲಕ್ಕಿ ಅನ್ನೋದು ಸಾಬೀತಾಗುತ್ತಿದೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಅತೀ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡು ದಾಖಲೆ ಬರೆದಿತ್ತು.

CCL 2026 Kichcha Sudeep Dance Like Rohit Sharma and price money Karnataka Bulldozers won details

ಈ ಎಲ್ಲಾ ಸಂಭ್ರಮವನ್ನು ಸಿಸಿಎಲ್ 2026 ಗೆದ್ದ ಬಳಿಕ ಅದ್ದೂರಿಯಾಗಿ ಆಚರಿಸಿದ್ದಾರೆ. ಅದರಲ್ಲೂ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆದ್ದ ಸಮಯದಲ್ಲಿ ಟ್ರೋಫಿಯನ್ನು ಪಡೆಯುವಾಗ ಹೇಗೆ ಸಂಭ್ರಮಿಸಿದ್ದರೋ ಅದೇ ಶೈಲಿಯಲ್ಲಿ ಕಿಚ್ಚ ಸುದೀಪ್ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ಸಿಸಿಎಲ್ ಗೆದ್ದ ಕರ್ನಾಟಕ ಬಿಲ್ಡೋಜರ್ ತಂಡಕ್ಕೆ ಸಿಕ್ಕಿದ ಹಣವೆಷ್ಟು? ಅನ್ನೋದನ್ನು ಚರ್ಚೆ ಮಾಡಲಾಗುತ್ತಿದೆ.

3ನೇ ಚಾಂಪಿಯನ್ಸ್

ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಇತಿಹಾಸದಲ್ಲಿಯೇ ಕರ್ನಾಟಕ ಬುಲ್ಡೋಜರ್ಸ್ ಸ್ಟ್ರಾಂಗ್ ಟೀಮ್. ಕಳೆದ 12 ಸೀಸನ್‌ಗಳಲ್ಲೂ ಕಿಚ್ಚ ಸುದೀಪ್ ನಾಯಕತ್ವದ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಈ ಬಾರಿ ಸಿಸಿಎಲ್ ಟ್ರೋಫಿ ಗೆಲ್ಲುವುದಕ್ಕೂ ಮುನ್ನ ಕಿಚ್ಚ ಸುದೀಪ್ ತಂಡ ಎರಡು ಬಾರಿ ಚಾಂಪಿಯನ್ ಆಗಿತ್ತು. 2014ರಲ್ಲಿ ಕೊನೆಯದಾಗಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲಿಂದ ಸುಮಾರು 12 ವರ್ಷಗಳ ಕಾಲ ಫೈನಲ್‌ಗೆ ಬಂದು ಎಡವುತ್ತಿದ್ದರು. ಇಲ್ಲಿ ಸೆಮಿಫೈನಲ್‌ನಲ್ಲಿ ನಿರ್ಗಮಿಸುತ್ತಿದ್ದರು. 2026ರಲ್ಲಿ ಕೊನೆಗೂ 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಕರ್ನಾಟಕ ಬುಲ್ಡೋಜರ್ಸ್‌ಗೆ ಬಹುಮಾನ ಎಷ್ಟು?

ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರತಿಯೊಬ್ಬ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಬ್ಬರು ಕೂಡ ಈ ಬಾರಿ ಗೆಲ್ಲಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದರು. ಹೀಗಾಗಿ ಒಗ್ಗಟ್ಟಿನ ಪ್ರದರ್ಶನ ನೀಡಿದರು. ಪಂದ್ಯಗಳೇನೋ ಮನರಂಜನೆ ನೀಡಿವೆ. ಆದರೆ, ತಮ್ಮ ಬ್ಯುಸಿ ಶೆಡ್ಯೂಲ್‌ಗಳ ನಡುವೆಯೂ ಪ್ರಾಕ್ಟೀಸ್ ಮಾಡಿ, ಕಷ್ಟ ಪಟ್ಟು ಗೆದ್ದ ತಂಡಕ್ಕೆ ಎಷ್ಟು ಹಣ ಸಿಗುತ್ತೆ? ಈ ಕೂತೂಹಲಕ್ಕೆ ಇಲ್ಲಿದೆ ಉತ್ತರ. ಇಂಟರ್‌ನೆಟ್‌ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ವಿನ್ನಿಂಗ್ ಟೀಮ್ ಕರ್ನಾಟಕ ಬುಲ್ಡೋಜರ್ಸ್‌ಗೆ ₹50 ಲಕ್ಷ ರೂಪಾಯಿ ಹಣ ಸಿಗಲಿದೆ. ಇನ್ನು ರನ್ನರ್‌ಅಪ್ ಟೀಮ್ ಬೆಂಗಲ್ ಟೈಗರ್ಸ್‌ಗೆ ₹25 ಲಕ್ಷ ಎಂದು ಹೇಳಲಾಗಿದೆ. ಆದರೆ, ಅಧಿಕೃತವಾಗಿ ಎಲ್ಲೂ ಘೋಷಣೆ ಮಾಡಿಲ್ಲ.

ರೋಹಿತ್ ಶರ್ಮಾರಂತೆ ಸಂಭ್ರಮ

ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ತಂಡ ಭರ್ಜರಿಯಾಗಿ ಸೆಲೆಬ್ರೆಟ್ ಮಾಡುತ್ತಿದೆ. ಅದರಲ್ಲೂ ಕಳೆದ ಟಿ20 ಪಂದ್ಯ ಗೆದ್ದ ಖುಷಿಯಲ್ಲಿ ಟ್ರೋಫಿ ಪಡೆಯುವಾಗ ರೋಹಿತ್ ಶರ್ಮಾ ಡ್ಯಾನ್ಸ್ ಮಾಡಿಕೊಂಡು ವೇದಿಕೆ ಬಳಿಗೆ ತೆರಳಿದ್ದರು. ಅದೇ ರೀತಿ ಕಿಚ್ಚ ಸುದೀಪ್ ಕೂಡ ಡ್ಯಾನ್ಸ್ ಮಾಡಿ ವೇದಿಕೆ ತೆರಳಿ ಟ್ರೋಫಿಯನ್ನು ಪಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Kichcha Sudeep Dance Like Rohit Sharma after Karnataka Bulldozers won CCL 2026 again Bengal Tigers; Sudeep Dance going Viral in Social media. Also Karnataka Bulldozers won 50 Lakhs as price money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X