CCL 2026: ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ಪರ ಆಡಲಿರುವ ಆಟಗಾರರು ಯಾರು? ಮಿಸ್ ಆಗಿದ್ಯಾರು?

ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪ್ರತಿವರ್ಷದಂತೆ ಮತ್ತೆ ಆರಂಭ ಆಗಿತ್ತಿದೆ. ಟಿ20 ವರ್ಲ್ಡ್‌ ಕಪ್ ಹಾಗೂ ಐಪಿಎಲ್ ಪಂದ್ಯಗಳು ಆರಂಭ ಆಗುವುದಕ್ಕೂ ಮುನ್ನವೇ ಸಿಸಿಎಲ್ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿವೆ. ಅದರಲ್ಲೂ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ಭರ್ಜರಿಯಾಗಿ ಅಭ್ಯಾಸವನ್ನು ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಬ್ಯುಸಿಯಾಗಿದ್ದರೂ, ಸಿಸಿಎಲ್ ಅಂತ ಬಂದಾಗ ಹಿಂದೇಟು ಹಾಕಿಲ್ಲ. ಈ ಬಾರಿ ಬಿಗ್ ಬಾಸ್, ಮಾರ್ಕ್ ರಿಲೀಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದರ ಮಧ್ಯೆನೇ ತಂಡವನ್ನು ಒಟ್ಟುಗೂಡಿಸಿ ಇನ್ನೇನು ಆರಂಭ ಆಗಲಿರುವ ಸಿಸಿಎಲ್ ಪಂದ್ಯಗಳಿಗೆ ತಯಾರಿ ಮಾಡಿಸುತ್ತಿದ್ದಾರೆ. ಈಗಾಗಲೇ ಕರ್ನಾಟಕ ಬುಲ್ಡೋಜರ್ಸ್ ತಂಡದ ಬಹುತೇಕ ಎಲ್ಲಾ ಆಟಗಾರರು ಕಠಿಣ ಅಭ್ಯಾಸವನ್ನು ಆರಂಭಿಸಿದ್ದಾರೆ.

CCL 2026 Kichcha Sudeep lead team Karnataka Bulldozers Players list and other details

2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಕೆಲ ಆಟಗಾರರು ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಕೆಲವರು ಈ ಬಾರಿ ಸಿಸಿಎಲ್ ಆಡುತ್ತಿಲ್ಲ. ಮತ್ತೆ ಕೆಲ ಸ್ಟಾರ್ ಆಟಗಾರರು ಈ ಬಾರಿ ಕೂಡ ಮನರಂಜನೆ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ದರೆ, ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಇರುವ ಆಟಗಾರರು ಯಾರು? ಯಾರು ಇನ್.. ಯಾರು ಔಟ್? ತಿಳಿಯುವುದಕ್ಕೆ ಮುಂದೆ ಓದಿ.

15 ಆಟಗಾರರ ತಂಡ ಪ್ರಕಟ

2026ರ ಸಿಸಿಎಲ್ ಪಂದ್ಯಾವಳಿಗೆ ಕರ್ನಾಟಕ ಬುಲ್ಡೋಜರ್ಸ್ ತನ್ನ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಕಳೆದ ಕೆಲವು ಸೀಸನ್‌ಗಳಿಂದ ಆಡುತ್ತಿರುವ ಆಟಗಾರರನ್ನು ಹಾಗೇ ಮುಂದುವರೆದಿದ್ದಾರೆ. ಇನ್ನು ಕೆಲವೇ ಆಟಗಾರರು ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಎಂದಿನಂತೆ ಕಿಚ್ಚ ಸುದೀಪ್ ನಾಯಕನಾಗಿದ್ದರೆ, ಕರ್ನಾಟಕ ಬುಲ್ಡೋಜರ್ಸ್ ತಂಡದ ಸ್ಟಾರ್ ಆಟಗಾರ ಡಾರ್ಲಿಂಗ್ ಕೃಷ್ಣ, ರಾಜೀವ್, ಕಾರ್ತಿಕ್ ಜಯರಾಂ, ಸುನೀಲ್ ರಾವ್ ಅವರು ಈ ಬಾರಿಯೂ ಮುಂದುವರೆದಿದ್ದಾರೆ.

ಯಾರು ಇನ್.. ಯಾರು ಔಟ್?

ಕರ್ನಾಟಕ ಬುಲ್ಡೋಜರ್ಸ್ ತಂಡದಿಂದ ಈ ಬಾರಿ ಹೊರಗೆ ಉಳಿದವರಲ್ಲಿ ಅನೂಪ್ ಭಂಡಾರಿ. 'ಬಿಲ್ಲ ರಂಗ ಭಾಷಾ' ಸಿನಿಮಾದ ತಯಾರಿಯಲ್ಲಿ ಇರುವ ನಿರ್ದೇಶಕ ಈ ಬಾರಿ ಸಿಸಿಎಲ್‌ನಲ್ಲಿ ಆಡುತ್ತಿಲ್ಲ. ಹಾಗೇ ಕಳೆದ ಬಾರಿ ಬಿಗ್ ಬಾಸ್ ಖ್ಯಾತಿಯ ವಿಕ್ರಮ್ ಕೂಡ ಈ ಬಾರಿ ಮಿಸ್ಸಿಂಗ್ ಆಗಿದ್ದಾರೆ. ಇನ್ನು ಹೊಸದಾಗಿ ತಂಡಕ್ಕೆ ಎಂಟ್ರಿ ಕೊಟ್ಟಿರೋದು ಸಚಿನ್. ಈ ಬಾರಿ 15 ಆಟಗಾರರ ಪಟ್ಟಿಯಲ್ಲಿ ಇವರ ಹೆಸರು ಇದೆ.

ಪ್ರದೀಪ್ ರೀ-ಎಂಟ್ರಿ

ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೊಬ್ಬ ಸ್ಟಾರ್ ಆಟಗಾರ ಪ್ರದೀಪ್. ಇವರು ಕಳೆದ ಸೀಸನ್‌ನಲ್ಲಿ ವೈಯಕ್ತಿಕ ಕಾರಣಗಳಿಂದ ಸಿಸಿಎಲ್‌ನಿಂದ ದೂರ ಉಳಿದಿದ್ದರು. ಆದರೆ, ಈ ಬಾರಿ ಅವರ ಎಂಟ್ರಿ ಆಗಿದೆ. ಕಳೆದ ಬಾರಿ ಕರ್ನಾಟಕ ಬುಲ್ಡೋಜರ್ಸ್‌ ತಂಡ ಈ ಆಲ್‌ ರೌಂಡರ್ ಅನ್ನು ಮಿಸ್ ಮಾಡಿಕೊಂಡಿತ್ತು. ಪ್ರದೀಪ್ ಓಪನಿಂಗ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮಾಡಬಲ್ಲರು. ಹೀಗಾಗಿ ಕಳೆದ ಬಾರಿ ಮಿಸ್ ಮಾಡಿಕೊಂಡಿದ್ದ ವೀಕ್ಷಕರಿಗೆ ಈ ಬಾರಿ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನೋಡುವ ಅವಕಾಶ ಸಿಗಲಿದೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ

ಕರ್ನಾಟಕ ಬುಲ್ಡೋಜರ್ ತಂಡ ಈ ಬಾರಿ ಸಿಸಿಎಲ್ ಗೆಲ್ಲುವ ಉತ್ಸಾಹದಲ್ಲಿದೆ. ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ಪ್ರದೀಪ್, ಕಾರ್ತಿಕ್ ಜಯರಾಂ, ರಾಜೀವ್, ಚಂದನ್ ಕುಮಾರ್, ಕರಣ್ ಆರ್ಯನ್ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ನಿರೂಪ್ ಭಂಡಾರಿ ಈ ಸೀಸನ್‌ನಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಅಂದ್ಹಾಗೆ 2026ರ ಸಿಸಿಎಲ್ ಪಂದ್ಯಾವಳಿಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ ಆಗಲಿದೆ.

More from Filmibeat

English summary
CCL 2026: Kichcha Sudeep lead team Karnataka Bulldozers Players list and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X