CCL 2026: ಕರ್ನಾಟಕ-ಪಂಜಾಬ್ ನಡುವೆ ಮೊದಲ ಪಂದ್ಯ ಕಿಚ್ಚನ ಮನವಿ ಏನು? ಎಲ್ಲಿ, ಯಾವಾಗ, ಹೇಗೆ ನೋಡ್ಬಹುದು?
ಸೆಲೆಬ್ರೆಟಿಗಳ ಕ್ರಿಕೆಟ್ ಜ್ವರ ಮತ್ತೆ ಆರಂಭ ಆಗಿದೆ. 2026ರ ಸಿಸಿಎಲ್ ಕ್ರಿಕೆಟ್ ಪಂದ್ಯಗಳು ಶುರುವಾಗುವುದಕ್ಕೆ ಇನ್ನೇ ಕ್ಷಣ ಗಣನೆ ಶುರುವಾಗಿದೆ. ತಾರೆಯರು ಬ್ಯಾಟ್ ಹಿಡಿದು ಕ್ರಿಕೆಟ್ ಆಡುವುದನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಸಿಸಿಎಲ್ ಅದ್ಧೂರಿಯಾಗಿ ಆರಂಭ ಆಗುವ ಲಕ್ಷಣಗಳು ಎದ್ದು ಕಾಣುತ್ತಿದೆ.
ಮೊದಲ ಪಂದ್ಯವೇ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ನಡುವೆ ನಡೆಯಲಿದೆ. ಎರಡೂ ಪ್ರಬಲ ತಂಡಗಳೇ ಆಗಿದ್ದು, ಮೊದಲ ಪಂದ್ಯವೇ ಜಟಾಪಟಿಯಿಂದ ಕೂಡಿರುತ್ತೆ. ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಪಂಜಾಬ್ ತಂಡ ಪ್ರಬಲ ಪೈಪೋಟಿ ಕೊಡುವ ಎಲ್ಲಾ ಸಾಧ್ಯತೆಗಳು ಕೂಡ ಇವೆ.

ಕಿಚ್ಚನ ಪಡೆ ಕಳೆದ ಕೆಲವು ದಿನಗಳಿಂದ ಭರ್ಜರಿ ತಯಾರಿಯನ್ನು ನಡೆಸಿವೆ. ತಂಡದ ಎಲ್ಲಾ ಆಟಗಾರರು ಕೂಡ ಶಿಸ್ತಿನಿಂದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಕಠಿಣ ಅಭ್ಯಾಸವನ್ನು ನಡೆದಿದ್ದಾರೆ. ಹೀಗಾಗಿ ಮೊದಲ ಪಂದ್ಯದ ಬಗ್ಗೆ ಕಿಚ್ಚ ಸುದೀಪ್ ವಿಡಿಯೋ ಮೂಲಕ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದೇನದು? ಹಾಗೇ ಮೊದಲ ಪಂದ್ಯ ಎಲ್ಲಿ? ಯಾವಾಗ? ಯಾವ ವೇದಿಕೆಯಲ್ಲಿ ನೋಡಬಹುದು? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮೊದಲ ಪಂದ್ಯ ಯಾವಾಗ? ಎಲ್ಲಿ?
ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ನಡುವೆ ನಾಳೆ (ಜನವರಿ 16) ಮೊದಲ ಪಂದ್ಯ ನಡೆಯಲಿದೆ. ಈ ಬಾರಿ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬಹುತೇಕ ಪಂದ್ಯಗಳು ವೈಜಾಗ್ ಹಾಗೂ ತಮಿಳುನಾಡಿನ ಮಧುರೈನಲ್ಲಿ ನಡೆಯಲಿದೆ. ಮೊದಲ ಪಂದ್ಯ ವೈಜಾಗ್‌ಗನಲ್ಲಿ ನಡೆಯಲಿದೆ.
ಸಮಯ.. ಎಲ್ಲಿ ನೋಡಬಹುದು?
ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ನಡುವಿನ ಮೊದಲ ಸಿಸಿಎಲ್ ಪಂದ್ಯ ಮಧ್ಯಾಹ್ನ ಸರಿ ಸುಮಾರಿಗೆ 2 ಗಂಟೆಯಿಂದ ಆರಂಭ ಆಗುತ್ತಿದೆ. ಹಾಗೇ ಸಂಜೆ 6 ಗಂಟೆ ಹೊತ್ತಿಗೆ ಮೊದಲ ಪಂದ್ಯ ಮುಕ್ತಾಯ ಆಗಲಿದೆ. ಈ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ ನೇರ ಪ್ರಸಾರ ಮಾಡಲಿದೆ. ಈಗಾಗಲೇ ಕಿಚ್ಚನ ಪಡೆ ವೈಜಾಗ್ ತಲುಪಿದ್ದು, ಮೊದಲ ಪಂದ್ಯಕ್ಕೆ ಬೇಕಿರೋ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ.
ಮೊದಲ ಪಂದ್ಯದ ಬಗ್ಗೆ ಕಿಚ್ಚ ಹೇಳಿದ್ದೇನು?
ಕರ್ನಾಟಕ ಬುಲ್ಡೋಜರ್ ತಂಡದ ನಾಯಕ ಕಿಚ್ಚ ಸುದೀಪ್ ಮೊದಲ ಪಂದ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಮೊದಲನೇ ಪಂದ್ಯವನ್ನು ವೈಜಾಗ್‌ನಲ್ಲಿ ಡಿಫೆಂಡಿಂಗ್ ಚಾಂಪಿಯನ್ ಪಂಜಾಬ್ ಅವರ ಮೇಲೆ ನಾವು ಆಡುತ್ತಿದ್ದೇವೆ. ವೈಜಾಗ್‌ನಲ್ಲಿ ಆಡುವುದು ವಿಶೇಷ. ಯಾಕಂದ್ರೆ ಸಿಸಿಎಲ್ ಶುರುವಾಗಿದ್ದೇ ಇಲ್ಲಿ. ಡಿಫೆಂಡಿಂಗ್ ಚಾಂಪಿಯನ್ ಪಂಜಾಬ್ ಅಂತ ಹೇಳಿದೆ ಬಹಳ ಒಳ್ಳೆಯ ಟೀಮ್. ಅವರು ತುಂಬಾನೇ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಾವೂ ಅಷ್ಟೇ ತಯಾರಿ ಮಾಡಿಕೊಂಡಿದ್ದೇವೆ. ನಾಳೆ ಮಧ್ಯಾಹ್ನ 2 ಗಂಟೆಯಿಂದ ಈ ಪಂದ್ಯ ಆರಂಭ ಆಗುತ್ತೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಿ. ನಿಮ್ಮ ಸಪೋರ್ಟ್ ಕರ್ನಾಟಕ ಬುಲ್ಡೋಜರ್ಸ್‌ಗೆ ಇರಲಿ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications











