CCL 2026 Wild Card Initiative: ಸಿಸಿಎಲ್‌ನಲ್ಲಿ ನಿಮ್ಮ ನೆಚ್ಚಿನ ತಾರೆಯರೊಂದಿಗೆ ಕ್ರಿಕೆಟ್ ಆಡ್ಬಹುದು.. ಏನು ಮಾಡ್ಬೇಕು?
2026ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಅದ್ಧೂರಿಯಾಗಿ ಆರಂಭ ಆಗಿದೆ. ಈಗಾಗಲೇ ಹಲವು ಪಂದ್ಯಗಳು ಕೂಡ ನಡೆದಿವೆ. ಈ ಮಧ್ಯೆ 'ವೈಲ್ಡ್ ಕಾರ್ಡ್ ಇನಿಶಿಯೇಟಿವ್' ಅನ್ನು ಸಿಸಿಎಲ್ ಅನಾವರಣಗೊಳಿಸಿದೆ. ಕಳೆದ ಸೀಸನ್‌ನಲ್ಲಿಯೇ ಈ ಬಗ್ಗೆ ಆಯೋಜಕರು ಮಾಹಿತಿಯನ್ನು ನೀಡಿದ್ದರು. ಅದರಂತೆ ಈಗ ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾ ತಾರೆಯರೊಂದಿಗೆ ಅಧಿಕೃತವಾಗಿ CCL ಪಂದ್ಯಗಳಲ್ಲಿ ಆಡಲು ಅವಕಾಶ ಕಲ್ಪಿಸಲಾಗುತ್ತಿದೆ.
ಸಿಸಿಎಲ್ 'ವೈಲ್ಡ್ ಕಾರ್ಡ್ ಇನಿಶಿಯೇಟಿವ್' ಕೇವಲ ವೀಕ್ಷಕರನ್ನು ತನ್ನತ್ತ ಸೆಳೆಯುವುದಕ್ಕಷ್ಟೇ ಅಲ್ಲ. ಬದಲಿಗೆ, ಅಭಿಮಾನಿಗಳನ್ನು ಸಿಸಿಎಲ್ ಪಂದ್ಯಗಳ ಭಾಗವಾಗಿಸುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ. ಭಾರತದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡಾ-ಮನರಂಜನಾ ವೇದಿಕೆ CCL ಸಾಮಾನ್ಯ ಜನರಿಗೆ ತಾರೆಯರೊಂದಿಗೆ ಕ್ರಿಕೆಟ್ ಆಡುವುದಕ್ಕೆ ದೊಡ್ಡದೊಂದು ವೇದಿಕೆ ನೀಡುತ್ತಿದೆ.

ಸೆಲೆಬ್ರೆಟಿಗಳ ಅಭಿಮಾನಿಗಳನ್ನು ಸಿಸಿಎಲ್‌ನ ಪ್ರಮುಖ ಭಾಗವಾಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇಲ್ಲಿ ಅದೃಷ್ಟ ಅಷ್ಟೇ ಅಲ್ಲ, ಇಲ್ಲಿ ಶಿಸ್ತು ಹಾಗೂ ಕ್ರಿಕೆಟ್ ಕೌಶಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಹೀಗಾಗಿ ಸಾವಿರಾರು ಮಂದಿ ಆನ್‌ಲೈನ್‌ನಲ್ಲಿ ಈ ಅವಕಾಶಕ್ಕಾಗಿ ನೋಂದಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಸುಮಾರು 120 ಮಂದಿ ಆಟಗಾರರನ್ನು CCL ತಾರೆಗಳೊಂದಿಗೆ ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ. ಬಳಿಕ ಸುಮಾರು 40 ಆಟಗಾರರನ್ನು ಸಂಚಾರಿ ಸ್ಕ್ವಾಡ್‌ಗೆ ಕಳಿಸಲಾಗುತ್ತೆ. ಆ ಬಳಿಕ ಅಂತಿಮವಾಗಿ 16 ಆಟಗಾರರು ಅಧಿಕೃತ ಪಂದ್ಯಗಳಲ್ಲಿ ಆಡಲು ಅವಕಾಶ ಪಡೆಯುತ್ತಾರೆ.
ಕ್ರಿಕೆಟ್ ಬಗ್ಗೆ ಆಸಕ್ತಿ ಹಾಗೂ ಈ ವೈಲ್ಡ್ ಕಾರ್ಡ್ ಎಂಟ್ರಿ ಇನಿಶಿಯೇಟಿವ್‌ನಲ್ಲಿ ಸ್ಪರ್ಧಿಸಲು ಇಚ್ಛೆವುಳ್ಳವರು ಯಾರು ಬೇಕಾದರೂ ಭಾಗವಹಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕೆ ನೋಂದಣಿ ಫಾರ್ಮ್‌ನಲ್ಲಿರುವ ಅರ್ಹತಾ ಮಾನದಂಡಗಳು ಕಡ್ಡಾಯವಾಗಿ ನಮೂದಿಸಬೇಕಾಗುತ್ತೆ. ಅಂತಿಮವಾಗಿ, ಅರ್ಹತೆ ಹಾಗೂ ಆಯ್ಕೆಯ ನಿರ್ಧಾರಗಳು CCL ಆಯೋಜಕರ ವಿವೇಚನೆಗೆ ಸೇರಿದ್ದಾಗಿರುತ್ತೆ.

CCLನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುವ ಆಟಗಾರರನ್ನು ವ್ಯವಸ್ಥಿತ ಆಯ್ಕೆ ಮಾಡಲಾಗುತ್ತೆ. ಮೊದಲ ಹಂತದಲ್ಲಿ ಆಸಕ್ತರು CCL ಅಧಿಕೃತ ವೆಬ್ ಸೈಡ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ಆ ಬಳಿಕ ತಮ್ಮ ಆದ್ಯತೆಯ CCL ತಂಡವನ್ನು ಆಯ್ಕೆ ಮಾಡಬೇಕು. ನೋಂದಣಿ ಶುಲ್ಕ ₹1,499 ಆಗಿದ್ದು, ಈ ಹಣವನ್ನು ಮರುಪಾವತಿಸುವುದಿಲ್ಲ ಎಂದು ಸಿಸಿಎಲ್ ಮ್ಯಾನೇಜ್ಮೆಂಟ್ ಹೇಳಿಕೊಂಡಿದ.
ಎರಡನೇ ಹಂತದಲ್ಲಿ ದೇಶಾದ್ಯಂತ ಹಲವು ಭಾಗಗಳಲ್ಲಿ ಟ್ರಯಲ್‌ಗಳು ನಡೆಯುತ್ತವೆ. ವೇಳೆ ಭಾಗವಹಿಸುವವರ ಕ್ರಿಕೆಟಿಂಗ್ ಕೌಶಲ್ಯ, ದೈಹಿಕ ಸಾಮರ್ಥ್ಯ ಮತ್ತು ಆಟದ ಬಗೆಗಿನ ಅವರ ಜ್ಞಾನವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ, ಈ ಟ್ರಯಲ್ ಪ್ರದರ್ಶನಗಳ ಆಧಾರದ ಮೇಲೆ ಪ್ರತಿ ತಂಡಕ್ಕೆ 15 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿ, ಅವರಿಗೆ ನಿಯೋಜನೆ ಮಾಡಲಾಗುತ್ತೆ.
ನಾಲ್ಕನೇ ಹಂತದಲ್ಲಿ ಶಾರ್ಟ್ ಲಿಸ್ಟ್ ಆದವರನ್ನು CCL ನಟರು ಹಾಗೂ ತಂಡದ ಸದಸ್ಯರೊಂದಿಗೆ ತರಬೇತಿ ಶಿಬಿರಕ್ಕೆ ಕಳುಹಿಸಲಾಗುತ್ತದೆ. ಇಲ್ಲಿ ಶಿಸ್ತು, ತಂಡದ ಬಾಂಧವ್ಯ, ದೈಹಿಕ ಸಾಮರ್ಥ್ಯ ಮತ್ತು ಪಂದ್ಯದ ಸಿದ್ಧತೆಯ ಮೇಲೆ ಗಮನಹರಿಸಲಾಗುತ್ತದೆ. ಐದನೇ ಹಂತದಲ್ಲಿ, ಪ್ರತಿ ತಂಡವು 15 ಆಟಗಾರರಲ್ಲಿ ಕೇವಲ 5 ಮಂದಿಯನ್ನು ತಮ್ಮ ತಂಡಕ್ಕಾಗಿ ಈ ಸೀಸನ್‌ನ ಸಂಚಾರಿ ಸ್ಕ್ವಾಡ್‌ಗೆ ಆಯ್ಕೆ ಮಾಡುತ್ತದೆ.
ಆರನೇ ಹಂತದಲ್ಲಿ, ಪ್ರತಿ ಪಂದ್ಯದಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಆಟಗಾರರು ಸಿಸಿಎಲ್‌ನಲ್ಲಿ ಆಡುವುದಕ್ಕೆ ಅವಕಾಶ ಪಡೆಯುತ್ತಾರೆ, ಇದು ಎಲ್ಲರಿಗೂ ಸಮಾನ ಅವಕಾಶ ನೀಡುವುದಕ್ಕೆ ಸಹಾಯ ಮಾಡುತ್ತೆ. ವೈಲ್ಡ್ ಕಾರ್ಡ್ ಆಟಗಾರರು ಅಧಿಕೃತವಾಗಿ CCL ಪಂದ್ಯಗಳಲ್ಲಿ ತಮ್ಮ ಸೆಲೆಬ್ರೆಟಿಯೊಂದಿಗೆ ಭಾಗವಹಿಸುತ್ತಾರೆ. ಸೆಲೆಬ್ರೆಟಿ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಆಟಗಾರರ ನಡುವಿನ ಸುರಕ್ಷತೆ ಹಾಗೂ ಸಮತೋಲನಕ್ಕಾಗಿ ನಿಗದಿತ ನಿಯಮಗಳು, ಓವರ್‌ಗಳು, ಬೌಲಿಂಗ್ ಸ್ಪೆಲ್‌ಗಳನ್ನು ನಿರ್ಧರಿಸಲಾಗುತ್ತದೆ.
ಈ ವೈಲ್ಡ್ ಕಾರ್ಡ್ ಇನಿಶಿಯೇಟಿವ್ ಹಲವು ಕಾರಣಗಳಿಗೆ ಮಹತ್ವ ಎನಿಸಿದೆ. ಇದು ಸೆಲೆಬ್ರಿಟಿಗಳೊಂದಿಗೆ ಆಡುವುದಕ್ಕೆ ಲೈಫ್‌ಟೈಮ್ ಅವಕಾಶ ನೀಡುತ್ತದೆ. ವೃತ್ತಿಪರ ತರಬೇತಿ ಜೊತೆಗೆ ಪಂದ್ಯದ ಮಾನ್ಯತೆ ನೀಡಲಾಗುತ್ತೆ. ಹೀಗಾಗಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಈ ವೈಲ್ಡ್ ಕಾರ್ಡ್ ಎಂಟ್ರಿ ಹೇಗೆ ವರ್ಕ್ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











