ಶಿವಣ್ಣ ಮಗಳ ಮದುವೆಗೆ 'ಇವರೆಲ್ಲಾ' ಬರ್ಲಿಲ್ಲ, ಯಾಕೆ?
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಮಗಳ ಮದುವೆ ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಸ್ಯಾಂಡಲ್ ವುಡ್ ನಲ್ಲಿ ಹಿಂದೆಂದೂ ಕಂಡಿಲ್ಲದ ವೈಭೋಗಕ್ಕೆ ತ್ರಿಪುರವಾಸಿನಿ ಸಾಕ್ಷಿಯಾಗಿತ್ತು.
ತಿಂಗಳುಗಳ ಹಿಂದೆಯೇ ಮಗಳ ಮದುವೆಗೆ ಸಕಲ ತಯಾರಿ ನಡೆಸಿದ್ದ ಶಿವಣ್ಣ ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಗಣ್ಯರಿಗೆ ಆತ್ಮೀಯ ಆಮಂತ್ರಣ ನೀಡಿದ್ದರು. [ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು]
ಡಾ.ನಿರುಪಮ-ಡಾ.ದಿಲೀಪ್ ಅವರ ವಿವಾಹ ಮಹೋತ್ಸವಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್, ಸಕಲಕಲಾವಲ್ಲಭ ಕಮಲ್ ಹಾಸನ್, ಬಿಗ್ ಬಿ ಅಮಿತಾಬ್ ಬಚ್ಚನ್ ಆಗಮಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಇನ್ನೂ ಅಣ್ಣಾವ್ರ ಮೊಮ್ಮಗಳ ಮದುವೆಗೆ ಸ್ಯಾಂಡಲ್ ವುಡ್ ನವರೇ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಶ್, ಲೀಲಾವತಿ, ವಿನೋದ್ ರಾಜ್ ಕೂಡ ಚಕ್ಕರ್ ಹಾಕಿದರು. ಮುಂದೆ ಓದಿ.....

ಮದುವೆಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಫ್ಯಾಮಿಲಿ ಕಾಣ್ಲಿಲ್ಲ.!
ಶಿವರಾಜ್ ಕುಮಾರ್ ಕುಟುಂಬಕ್ಕೆ ಅಂಬರೀಶ್ ಕುಟುಂಬ ಅತ್ಯಾಪ್ತ. ಮಗಳ ಮದುವೆಗೆ ಶಿವಣ್ಣ, ಅಂಬರೀಶ್ ಅವರಿಗೆ ಆತ್ಮೀಯ ಆಮಂತ್ರಣ ನೀಡಿದ್ದರು. ಮದುವೆಗೂ ಮುನ್ನ ಡಾ.ನಿರುಪಮ ಅವರ ಮೆಹೆಂದಿ ಮತ್ತು ಸಂಗೀತ ಸಮಾರಂಭಕ್ಕೆ ಅಂಬರೀಶ್ ಮತ್ತು ಸುಮಲತಾ ಹಾಜರಾಗಿದ್ದರು. ಆದರೆ, ಮದುವೆ ದಿನ ಅಂಬಿ ಮತ್ತು ಸುಮಲತಾ ಕಾಣ್ಲಿಲ್ಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬ ಬರ್ಲಿಲ್ಲ.!
ಡಾ.ರಾಜ್ ಕುಮಾರ್ ಮತ್ತು ತೂಗುದೀಪ ಶ್ರೀನಿವಾಸ್ ಅತ್ಯಾಪ್ತರು. ಅಣ್ಣಾವ್ರ ಕುಟುಂಬದಲ್ಲಿ ಶುಭ ಸಮಾರಂಭಗಳು ಏನೇ ಜರುಗಿದರೂ, ತೂಗುದೀಪ್ ಕುಟುಂಬ ಆಗಮಿಸುತ್ತಿತ್ತು. ಆದ್ರೆ, ಈ ಬಾರಿ ಶಿವಣ್ಣನ ಮಗಳ ಮದುವೆಗೆ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಅಂಡ್ ಫ್ಯಾಮಿಲಿ ಮಿಸ್ ಆಗಿತ್ತು.

ಪ್ರಕಾಶ್ ರಾಜ್ ಮಿಸ್ ಮಾಡಿದ್ರು.!
ಕನ್ನಡದವರೇ ಆದ ಪ್ರಕಾಶ್ ರಾಜ್ ಅವರನ್ನ ಖುದ್ದು ಭೇಟಿ ಮಾಡಿ ಶಿವಣ್ಣ ಇನ್ವಿಟೇಷನ್ ನೀಡಿದ್ದರು. ಆದ್ರೆ, ಪ್ರಕಾಶ್ ರಾಜ್ ಕೂಡ ಶಿವಣ್ಣ ಮಗಳ ಮದುವೆಗೆ ಬರಲಿಲ್ಲ.

ರಜಿನಿಕಾಂತ್ ಹಾಜರಾಗಲಿಲ್ಲ.!
ಡಾ.ರಾಜ್ ಕುಮಾರ್ ಅಂದ್ರೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಎಲ್ಲಿಲ್ಲದ ಅಭಿಮಾನ. ಅಣ್ಣಾವ್ರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಜಿನಿಕಾಂತ್ ಶಿವಣ್ಣ ಮಗಳ ಮದುವೆಗೂ ಆಗಮಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದ್ರೆ, ಕಾರಣಾಂತರಗಳಿಂದ ಅವರೂ ಬರ್ಲಿಲ್ಲ. [ರಜನಿ, ಕಮಲ್ ಗೆ ಶಿವಣ್ಣನ ಮಗಳ ಮದುವೆಯ ಕರೆಯೋಲೆ]

ಧನುಷ್ ಮಿಸ್ಸಿಂಗ್.!
ರಜಿನಿಕಾಂತ್ ಅಳಿಯ ಧನುಷ್ ಕೂಡ ಶಿವರಾಜ್ ಕುಮಾರ್ ಅವರಿಗೆ ಕ್ಲೋಸ್ ಫ್ರೆಂಡ್. 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನಿಗಾಗಿ 'ನೋ ಪ್ಲಾಬ್ಲಂ' ಹಾಡು ಹಾಡಿದ್ದ ಧನುಷ್ ಡಾ.ನಿರುಪಮ ಮದುವೆಗೆ ಬರಬಹುದು ಅನ್ನುವ ಲೆಕ್ಕಾಚಾರ ಇತ್ತು. ಆದ್ರೆ, ಅವರೂ ಮಿಸ್ ಆದರು.

ಕಮಲ್ ಹಾಸನ್ ಬರ್ಲಿಲ್ಲ.!
ಸ್ವತಃ ಶಿವಣ್ಣ ಮತ್ತು ಪತ್ನಿ ಗೀತಾ ಆಮಂತ್ರಣ ನೀಡಿದ್ದರೂ, ಸಕಲಕಲಾವಲ್ಲಭ ಕಮಲ್ ಹಾಸನ್ ಡಾ.ನಿರುಪಮ ವಿವಾಹಕ್ಕೆ ಆಗಮಿಸಲಿಲ್ಲ.

ಅಮಿತಾಬ್ ಬಚ್ಚನ್ ಆಗಮಿಸಲಿಲ್ಲ.!
ಶೂಟಿಂಗ್ ನಲ್ಲಿ ಬಿಜಿಯಿದ್ದ ಕಾರಣ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಶಿವಣ್ಣ ಮಗಳ ಮದುವೆಗೆ ಆಗಮಿಸಲಿಲ್ಲ. [ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ! ]

ರಾಧಿಕಾ ಕುಮಾರಸ್ವಾಮಿ ಕಾಣ್ಲಿಲ್ಲ.!
ಶಿವಣ್ಣನಿಗೆ ಪ್ರೀತಿಯಿಂದ ರಾಖಿ ಕಟ್ಟಿದ್ದ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಕೂಡ ಶಿವಣ್ಣ ಮಗಳ ಮದುವೆಯನ್ನ ಮಿಸ್ ಮಾಡಿಕೊಂಡರು.

ಲೀಲಾವತಿ-ವಿನೋದ್ ರಾಜ್ ಬರ್ಲಿಲ್ಲ.!
ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಶಿವಣ್ಣ ಮಗಳ ಮದುವೆಗೆ ಆಗಮಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದ್ರೆ, ಅದು ಸುಳ್ಳಾಗಿದೆ. ಲೀಲಾವತಿ ಮತ್ತು ವಿನೋದ್ ರಾಜ್ ಡಾ.ನಿರುಪಮ ಮದುವೆ ಮುಹೂರ್ತಕ್ಕಾಗಲಿ, ಆರತಕ್ಷತೆಗಾಗಲಿ ಆಗಮಿಸಲಿಲ್ಲ. [ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್]

ಕುಮಾರ್ ಬಂಗಾರಪ್ಪ ಸುಳಿವಿಲ್ಲ.!
ಕೌಟುಂಬಿಕ ಕಾರಣಗಳಿಂದ ಗೀತಾ ಶಿವರಾಜ್ ಕುಮಾರ್ ಸಹೋದರ ಕುಮಾರ್ ಬಂಗಾರಪ್ಪ ಕೂಡ ಮದುವೆಗೆ ಬರಲಿಲ್ಲ.

ಕಾರಣವೇನು?
ಹಲವು ನಟರು ಶೂಟಿಂಗ್ ನಲ್ಲಿ ಬಿಜಿಯಾಗಿದ್ದ ಪರಿಣಾಮ ಶಿವಣ್ಣ ಮಗಳ ಮದುವೆಗೆ ಮಿಸ್ ಆಗಿದ್ದಾರೆ. ಇನ್ನೂ ಮದುವೆಯಲ್ಲಿ ಜನಜಂಗುಳಿ ಇರುವ ಪರಿಣಾಮ ಸ್ವತಃ ಮನೆಗೆ ಹೋಗಿ ವಿಶ್ ಮಾಡೋಣ ಅಂತ ಕೆಲವರು ಮದುವೆ ಬಾರದೇ ಇರಬಹುದು.


Click it and Unblock the Notifications











