'ಬೃಂದಾವನ'ಕ್ಕೆ ಸೆನ್ಸಾರ್ ಮಂಡಳಿ ಮಾಡಿದ್ದು ಸರಿನಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಮಾಸ್, ಕ್ಲಾಸ್ ಪ್ರೇಕ್ಷಕರನ್ನು ಒಟ್ಟಿಗೆ ಕುಣಿಸಲು ಬರುತ್ತಿದ್ದಾರೆ. 'ಬೃಂದಾವನ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಶುಕ್ರವಾರ (ಸೆ.20) ಸರ್ಟಿಫಿಕೇಟ್ ನೀಡಿದೆ, ಯು/ಎ ಸರ್ಟಿಫಿಕೇಟ್ ನೊಂದಿಗೆ ಚಿತ್ರ ಪಾಸ್ ಆಗಿದೆ.
ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಜೂ.ಎನ್ಟಿಆರ್ ಅಭಿನಯದ ಬೃಂದಾವನಂ ಚಿತ್ರದ ರಿಮೇಕ್ ಇದಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಲಾಗಿತ್ತು. ಈಗ ಕನ್ನಡ ರೀಮೇಕ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಚಿತ್ರದಲ್ಲಿ ಅಂತಹ ಎಕ್ಟ್ರಾ ಏನಿದೆ? ಎಂಬ ಸಂದೇಶ ಕಾಡುತ್ತಿದೆ.
'ಬೃಂದಾವನ' ಚಿತ್ರ ಸೆಪ್ಟೆಂಬರ್ 26ರಂದು ತೆರೆಗೆ ಅಪ್ಪಳಿಸುವುದು ಪಕ್ಕಾ ಆಗಿದೆ. ಈಗಾಗಲೆ ಚಿತ್ರದ ಹಾಡುಗಳ ಅಬ್ಬರ ಎಲ್ಲೆಡೆ ಜೋರಾಗಿದೆ. ಚಿತ್ರದ ನಿರ್ಮಾಪಕರಾದ ಡಿ. ಸುರೇಶ್ ಗೌಡ ಸುಮಾರು 150 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಾಗಿದ್ದಾರೆ. ವಿಶಾಲ ಕರ್ನಾಟಕಕ್ಕೆ ಚಿತ್ರವನ್ನು ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ವಿತರಿಸುತ್ತಿದೆ.ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಈಗಾಗಲೆ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿವೆ. ಕೆ.ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಹಾಡಿನ ತುಣುಕೊಂದು ಈಗ ಯೂಟ್ಯೂಬ್ ನಲ್ಲೂ ಭಾರಿ ಸದ್ದು ಮಾಡುತ್ತಿರುವುದು ಗೊತ್ತೇ ಇದೆ.
ದರ್ಶನ್ ಜೊತೆ ಈ ಬಾರಿ ಇಬ್ಬರು ನಾಯಕಿಯರು. ಕಾರ್ತಿಕಾ ನಾಯರ್ ಹಾಗೂ ಮಿಲನಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ['ಬೃಂದಾವನ' ಹಾಡು ಯೂಟ್ಯೂಬ್ ಗೆ ಲಗ್ಗೆ]
ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












