ಸೆಂಚುರಿ ಸ್ಟಾರ್ ಶಿವಣ್ಣನಿಗೆ ರಾಜ ಭೂಷಣ ಬಿರುದು

By Rajendra

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಹಾಗೂ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಹೊಸ ಬಿರುದನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಅವರು 'ರಾಜ ಭೂಷಣ' ಶಿವರಾಜ್ ಕುಮಾರ್. ಈ ಬಿರುದನ್ನು ಅವರ ಅಭಿಮಾನಿಗಳು ದಯಪಾಲಿಸುತ್ತಿದ್ದಾರೆ.

ಇದೇ ಆಗಸ್ಟ್ 10ರಂದು ಸಂಜೆ 5ಗಂಟೆಗೆ ಮೈಸೂರಿನಲ್ಲಿ ನಡೆಯುವ ಶಿವರಾಜ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಈ ಬಿರುದನ್ನು ನೀಡಲಾಗುತ್ತಿದೆ. ಮೈಸೂರಿನಲ್ಲಿ ದೊಡ್ದ ಕಟೌಟ್ ಗಳು ರಾಜಾಜಿಸುತ್ತಿವೆ. ಸ್ಥಳ ಸಚ್ಚಿದಾನಂದ ಆಶ್ರಮ ಎದುರು ದತ್ತಾ ನಗರ ಮೈಸೂರು.

ಅಭಿನಂದನಾ ಸಮಾರಂಭದಂದು ವಿಶೇಷ ರಸಮಂಜರಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಶಿವಣ್ಣ ಅವರಿಗೆ ಈಗಾಗಲೆ ನಾಟ್ಯ ಸಾರ್ವಭೌಮ ಎಂಬ ಬಿರುದನ್ನೂ ಅಭಿಮಾನಿಗಳು ನೀಡಿದ್ದಾರೆ. ನೂರು ಚಿತ್ರಗಳ ಸರದಾರ ಶಿವಣ್ಣನಿಗೆ ಈಗ ಹೊಸ ಬಿರುದು ಸಿಗುತ್ತಿದೆ. [ಲವ್ಲಿ ಸ್ಟಾರ್ ಪ್ರೇಮ್ ಗೆ ಹೊಸ ಬಿರುದು]

ಶಿವಸೈನ್ಯ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ದೊಡ್ಡ ಗಡಿಯಾರ, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ದತ್ತ ನಗರ, ಬಡವರ ಬಂಧು ಡಾ. ರಾಜ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಕೆ.ಎನ್.ಪುರ ಮೈಸೂರು ಇವರು ಜಂಟಿಯಾಗಿ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.

ಇನ್ನು ಶಿವಣ್ಣ ಅವರು ಹಲವಾರು ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಭಜರಂಗಿ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಕಸರತ್ತು ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕಾಗಿ ಸಾಕಷ್ಟು ಬೆವರು ಹರಿಸುತ್ತಿರುವ ಶಿವಣ್ಣ ತಮ್ಮ ದೇಹವನ್ನು ಹುರಿಗಟ್ಟಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Mysore corporate fans all set to give new title to Hat Trick Hero Shivrajkumar. The fans honouring the actor with a new title 'Raja Bhushana'. The felicitation held at Mysore, on 8th August. The programme held at Datta Nagar, opposite to Sachidananda Ashram at 5 pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X